ಸಕ್ಸಸ್ ಗಾಗಿ ಬಾಲಿವುಡ್ ಬಿಟ್ಟು ಟಾಲಿವುಡ್ ಗೆ ಅಮೀರ್ ಖಾನ್ ? ಈ ಕಾಂಬಿನೇಷನ್ ಕ್ಲಿಕ್ ಆಗುತ್ತಾ?

Written by Soma Shekar

Published on:

---Join Our Channel---

SSMB 29 : ಬಾಲಿವುಡ್ ನ ಸ್ಟಾರ್ ನಟ ಅಮೀರ್ ಖಾನ್ (Amir Khan) ತಮ್ಮ ಇತ್ತೀಚಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ (Lal Singh Chadhdha) ಕಂಡ ಹೀನಾಯ ಸೋಲಿನ ನಂತರ ಸಿನಿಮಾ ರಂಗದಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಯಾವುದಾದರೂ ಸಮಾರಂಭಗಳಲ್ಲಿ ನಟ ಕಾಣಿಸಿಕೊಂಡಾಗ ಮಾದ್ಯಮಗಳು ಕಮ್ ಬ್ಯಾಕ್ ಯಾವಾಗ ಎಂದು ಕೇಳಿದಾಗಲೆಲ್ಲಾ ಅದಕ್ಕೆ ನಟ ಯಾವುದೇ ಸ್ಪಷ್ಟವಾದ ಉತ್ತರವನ್ನು ನೀಡಿರಲಿಲ್ಲ. ಅಲ್ಲದೇ ತಾನು ಕುಟುಂಬಕ್ಕೆ ಹೆಚ್ಚು ಸಮಯವನ್ನು ನೀಡಬೇಕು, ಅದಕ್ಕೆ ಸಿನಿಮಾ ರಂಗದಿಂದ ವಿರಾಮವನ್ನು ಪಡೆದಿದ್ದೇನೆ ಎಂದು ಹೇಳುತ್ತಾ ಬಂದಿದ್ದರು.

ಈಗ ನಟನ ಕುರಿತಾಗಿ ಒಂದು ಹೊಸ ಅಪ್ಡೇಟ್ ಸದ್ದು ಮಾಡಿದೆ. ಈಗ ಹರಡಿರುವ ಸುದ್ದಿಗಳ ಪ್ರಕಾರ ನಟ ಅಮೀರ್ ಖಾನ್ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ವಿಶೇಷ ಏನೆಂದರೆ ಈ ಬಾರಿ ಅಮೀರ್ ಖಾನ್ ಟಾಲಿವುಡ್ ನ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ತೀವ್ರವಾದ ಕುತೂಹಲವನ್ನು ಮೂಡಿಸಿರುವುದು ಸುಳ್ಳಲ್ಲ. ಇದನ್ನೂ ಓದಿ : ಎಲ್ಲಾ ವಿಷಯಗಳಲ್ಲೂ ಜಸ್ಟ್ ಪಾಸ್: ಮಗನ ಸಾಧನೆ ಸಂಭ್ರಮಿಸಿದ ತಂದೆ ತಾಯಿ! ಮುಗಿಲು ಮುಟ್ಟಿದ ಸಂತೋಷ

ಅಮೀರ್ ಖಾನ್ ರಾಜಮೌಳಿ ಜೊತೆ ಕೈ ಜೋಡಿಸಿದ್ದು, ಅವರು ಈಗ ರಾಜಮೌಳಿ ನಿರ್ದೇಶನದ ನಟ ಮಹೇಶ್ ಬಾಬು (Mahesh Babu) ನಾಯಕನಾಗಿ ಕಾಣಿಸಿಕೊಳ್ಳಲಿರುವ ಎಸ್ ಎಸ್ ಎಂ ಬಿ 29 (SSMB 29) ಮೂಲಕ ಕಮ್ ಬ್ಯಾಕ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ನಟ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಟಿಸುತ್ತಾರೆ ಎನ್ನುವ ಸುದ್ದಿ ಕೂಡಾ ಹೊರ ಬಂದಿದೆ.

ಮಹೇಶ್ ಬಾಬು ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಕೂಡಾ ಫ್ಯಾನ್ಸ್ ಗೆ ಖುಷಿ ನೀಡಿದೆ. ಈ ಸಿನಿಮಾ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಕಥೆ, ಸಾಹಸಮಯ ಕಥಾಹಂದರ ಹೊಂದಿದೆ ಎನ್ನಲಾಗಿದೆ. ಇದೇ ವರ್ಷ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಇದೇ ಸಿನಿಮಾದ ಮೂಲಕವೇ ಅಮೀರ್ ಖಾನ್ ಖಡಕ್ ವಿಲನ್ ಪಾತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಾರೆ ಎನ್ನಲಾಗಿದ್ದು, ಈ ಬಾರಿ ಅಮೀರ್ ಖಾನ್ ಬಾಲಿವುಡ್ ಬದಲಿಗೆ ಟಾಲಿವುಡ್ (Tollywood) ಕಡೆ ಗಮನ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

Leave a Comment