Chaithra Kundapura ದಾಖಲಾಯ್ತು ಮತ್ತೊಂದು ವಂಚನೆ ಪ್ರಕರಣ! ಚೈತ್ರ ಮೇಲೆ ದೂರು ಕೊಟ್ಟಿದ್ದು ಯಾರು ಗೊತ್ತಾ?

0 19

Chaithra Kundapura : ಉದ್ಯಮಿಯೊಬ್ಬರಿಗೆ  ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿಗಳ ವಂಚನೆ ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಚೈತ್ರಾ ಕುಂದಾಪುರ (Chaithra Kundapura) ಅವರಿಗೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚೈತ್ರ ಕುಂದಾಪುರ ಅವರ ಮೇಲೆ ಈಗ ಮತ್ತೊಂದು ಹೊಸ ವಂಚನೆಯ ಪ್ರಕರಣ ದಾಖಲಾಗಿದ್ದು, ಆಕೆಯ ವಿರುದ್ಧ ಮತ್ತೊಂದು ವಂಚನೆಯ ಪ್ರಕರಣ ಈಗ ಬಯಲಾಗಿದೆ.

ಉಡುಪಿ (Udupi) ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗ ಚೈತ್ರ ಕುಂದಾಪುರ ಮೇಲೆ ದೂರಲು ದಾಖಲು ಮಾಡಿರುವವರು ಬ್ರಹ್ಮಾವರದ ನಿವಾಸಿಯಾಗಿರುವ ಸುದೀನ (Sudeena) ಹೆಸರಿನ ವ್ಯಕ್ತಿಯಾಗಿದ್ದಾರೆ. ವೃತ್ತಿಯಿಂದ ಮೀನುಗಾರನಾಗಿರುವ ಇವರು ಚೈತ್ರಾ ವಿರುದ್ಧ ದೂರಲು ದಾಖಲಿಸಿದ್ದು, ತನಗೆ ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆ ಎಂದು ಹೇಳ 5 ಲಕ್ಷ ರೂ. ವಂಚಿಸಿದ್ದಾರೆ ಎಂದು ಸುದೀನ ಆರೋಪ ಮಾಡಿದ್ದಾರೆ.

2018ರಲ್ಲಿ ಸುದಿನ ಅವರಿಗೆ ಚೈತ್ರ ಕುಂದಾಪುರ ಜೊತೆಗೆ ಪರಿಚಯವಾಗಿತ್ತು. ಆಗ ಚೈತ್ರ ತನಗೆ ಬಿಜೆಪಿಯಲ್ಲಿ (BJP) ದೊಡ್ಡ ದೊಡ್ಡ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳು ಮತ್ತು ಶಾಸಕರ ನಿಕಟ ಸಂಪರ್ಕ ಇದೆ ಎಂದು ಹೇಳಿ ನಂಬಿಸಿದ್ದರು ಎಂದಿರುವ ಸುದೀನ, 2018 – 2023ರ ಅವಧಿಯಲ್ಲಿ ಬಟ್ಟೆ ಅಂಗಡಿ ನಿರ್ಮಾಣಕ್ಕೆ ಹಂತ ಹಂತವಾಗಿ 5 ಲಕ್ಷ ರೂಪಾಯಿಗಳನ್ನು ಪಡೆದಿದ್ದರು. ಅದರಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಚೈತ್ರ ಅವರ ಖಾತೆಗೆ ವರ್ಗಾಯಿಸಿದ್ದಾಗಿ ಹೇಳಿದ್ದಾರೆ.

2,00,000 ಗಳ ಹಣವನ್ನು ನಗದು ರೂಪದಲ್ಲಿ ಸುದೀನ ನೀಡಿದರಂತೆ. ತನಗೆ ಕೋಟ ಗ್ರಾಮದಲ್ಲಿ ಬಟ್ಟೆ ಅಂಗಡಿಯನ್ನು ಮಾಡಿಸಿಕೊಡುವುದಾಗಿ ಚೈತ್ರ ಭರವಸೆ ನೀಡಿ ವಂಚಿಸಿದ್ದಾರೆ ಎನ್ನುವುದು ಸುದೀನ ಮಾಡಿರುವ ಆರೋಪವಾಗಿದೆ. ಹಣ ಪಡೆದ ನಂತರ ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಹೀಗೆ ಒಂದಷ್ಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರಂತೆ ಚೈತ್ರ.

ಇದರಿಂದ ಅನುಮಾನ ಗೊಂಡ ಸುದೀನ ತನಗೆ ಆದಷ್ಟು ಬೇಗ ಬಟ್ಟೆ ಅಂಗಡಿಯನ್ನು ಹಾಕಿಸಿ ಕೊಡುವಂತೆ ಒತ್ತಾಯ ಮಾಡಿದ್ದಾರಂತೆ. ಆಗ ಚೈತ್ರ ಕುಂದಾಪುರ ಸುದೀದ ಅವರಿಗೆ ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಸುಳ್ಳು ಅ ತ್ಯಾ ಚಾ ರ ಪ್ರಕರಣ ದಾಖಲಿಸುತ್ತೇನೆ, ಎಂದು ಬಾಡಿಗೆ ಗುಂಡಗಳಿಗೆ ಹೇಳಿ ಕೊ’ ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಸುದೀನ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.