Yamaha MT-15 V2: ಶಕ್ತಿಶಾಲಿ ಎಂಜಿನ್ ಜೊತೆಗೆ ಬರುತ್ತಿದೆ ಯಮಹಾ ಕಂಪನಿಯ ಆಕರ್ಷಕ, ಆಧುನಿಕ ವಿನ್ಯಾಸದ ಹೊಸ ಬೈಕ್! ಇದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ!

Written by Sanjay A

Published on:

---Join Our Channel---

Yamaha MT-15 V2: ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯು ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ತಮ್ಮದೇ ಆದ ವಿಶೇಷವಾದ ಸ್ಥಾನ ಪಡೆದುಕೊಂಡಿದೆ. ಇದೀಗ ಕಂಪನಿಯು ತಮ್ಮ ಹೊಸ ಮಾದರಿಯ Yamaha MT-15 V2 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ Yamaha MT-15 V2 ನ ಲುಕ್ ಹಾಗೂ ಫೀಚರ್ಸ್ ಗೆ ಗ್ರಾಹಕರು ಬೇರಗಾಗುತ್ತಿದ್ದಾರೆ. ಈ ಹೊಸ ಬೈಕ್ ಆಧುನಿಕ ವಿನ್ಯಾಸಗಳ ಜೊತೆಗೆ ಆಕರ್ಷಕ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ. ಸದ್ಯ ಎಲ್ಲೆಡೆ ಈ ಬೈಕ್ ಕುರಿತು ಚರ್ಚೆಗಳು ಶುರುವಾಗಿದೆ.

ಯಮಹಾ ಕಂಪನಿಯು ಇದೀಗ ತಮ್ಮ ಈ ಹೊಸ ಮಾದರಿಯ ಬೈಕ್ Yamaha MT-15 V2 ನಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸಿದೆ ಎನ್ನಲಾಗುತ್ತಿದೆ. ಇನ್ನು ಬೇರೆ ಬೈಕ್ ಗಳಿಗೆ ಹೋಲಿಸಿದರೆ, ಈ ಬೈಕ್ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಆಯ್ಕೆಯಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಇದೀಗ ಈ ಬೈಕ್ ಅನ್ನು ನೀವು ರಿಯಾಯತಿಯ ಜೊತೆಗೆ ಪಡೆಯುವ ಅವಕಾಶವನ್ನು ಕಂಪನಿ ಕಲ್ಪಿಸಿಕೊಟ್ಟಿದೆ.

ಸ್ಲಿಪ್ಪರ್ ಕ್ಲಚ್, ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡಿಸ್ಕ್ ಬ್ರೇಕ್, ಎಲ್ಇಡಿ ಹೆಡ್ ಲೈಟ್, ಬ್ಲೂಟೂತ್ ಕನೆಕ್ಟಿವಿಟಿ, ಕಾಲ್ ಇಮೇಲ್ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನಂತಹ ಹಲವಾರು ವೈಶಿಷ್ಟ್ಯಗಳನ್ನು ನೀವು ಈ ಬೈಕ್ ನಲ್ಲಿ ನೋಡಬಹುದಾಗಿದೆ.

ಇನ್ನು ಈ ಬೈಕ್ ನ ಎಂಜಿನ್ ಬಗ್ಗೆ ಮಾತನಾಡುವುದಾದರೆ, Yamaha MT-15 V2 ಬೈಕ್ ನಲ್ಲಿ 155cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಂಜಿನ್ 10,000rpm ನಲ್ಲಿ 18.1hp ಮತ್ತು 7,500rpm ನಲ್ಲಿ 14.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. Yamaha MT-15 V2 ಬೈಕ್ ನ ಮಾರುಕಟ್ಟೆಯ ಬೆಲೆ ಸುಮಾರು 196,000 ರೂಗಳು ಇದ್ದು, ಕಂಪನಿಯು ಇದರ ಮೇಲೆ 5,190 ರೂಗಳ ರಿಯಾಯತಿಯನ್ನು ನೀಡುತ್ತಿದೆ.

Leave a Comment