Shobha Shetty : ಅಡಗಿದ ಸದ್ದು, ಎನರ್ಜಿ ಡಲ್, ಎರಡೇ ವಾರಕ್ಕೆ ವೈಲ್ಡ್ ಕಾರ್ಡ್ ಶೋಭಾ ಶೆಟ್ಟಿ ಜರ್ನಿ ಮುಗಿಯುತ್ತಾ

Written by Soma Shekar

Published on:

---Join Our Channel---

Shobha Shetty : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿ ಅಂದಾಗ ಯಾರು ಬರ್ತಾರೆ ಅನ್ನೊ ಕುತೂಹಲ ಖಂಡಿತ ಎಲ್ಲರಿಗೂ ಇತ್ತು. ಅದ್ರಲ್ಲಿ ರಜತ್ ಮತ್ತು ಶೋಭಾ ಶೆಟ್ಟಿ (Shobha Shetty) ಅಂತ ಗೊತ್ತಾದಾಗ ಒಂದಷ್ಟು ಜನ ಶೋಭಾ ಅವರ ಹೆಸರು ಕೇಳಿ ಥ್ರಿಲ್ ಆಗಿದ್ರು. ಇದಕ್ಕೆ ಕಾರಣ ತೆಲುಗು ಬಿಗ್ ಬಾಸ್ ನಲ್ಲಿ ಶೋಭಾ ಮಾಡಿದ್ದ ಸದ್ದು ಮತ್ತು ಕೊನೆಯ ಹಂತದಲ್ಲಿ ಅವರು ಎಲಿಮಿನೇಟ್ ಆಗಿದ್ದು. ಅದಕ್ಕೆ ಅಭಿಮಾನಿಗಳು ಕನ್ನಡದಲ್ಲೂ ಶೋಭಾ ಆಟ‌ ಜೋರಾಗಿ ಇರುತ್ತೆ ಅನ್ನೋ ನಿರೀಕ್ಷೆಯಲ್ಲಿ ಇದ್ರು.

ಬಿಗ್ ಬಾಸ್ (BBK 11) ಮನೆಗೆ ಎಂಟ್ರಿ ಕೊಡುವಾಗಲೇ ಕಿಚ್ಚ ಸುದೀಪ್ (Kichcha Sudeep) ಅವರು ಇದು ತೆಲುಗು ಬಿಗ್ ಬಾಸ್ ಅಲ್ಲ ಅನ್ನೋ ಒಂದು ಮಾತನ್ಬ ಸಹಾ ಹೇಳಿದ್ರು. ಇನ್ನು ವೈಲ್ಡ್ ಕಾರ್ಡ್ ಮೂಲಕ ಸಕತ್ ಮಾಸ್ ಆಗಿ ಮಾತಾಡಿಕೊಂಡು ಎಂಟ್ರಿ ಕೊಟ್ಟ ಶೋಭಾ ಎರಡೇ ವಾರಕ್ಕೆ ಡಲ್ ಆಗಿ ಬಿಟ್ರಾ ಅನ್ನೋ ತರ ಆಗಿದೆ. ಬಂದ ಮೊದಲ ವಾರದಲ್ಲಿ ಒಂದಷ್ಟು ಮಾತು, ಟಾಸ್ಕ್ ನಿಂದ ಕಾಣಿಸಿಕೊಂಡ ಶೋಭಾ ಅಷ್ಟಾಗಿ ಕಾಣಿಸ್ತಿಲ್ಲ.

ರಜತ್ ಎರಡನೇ ವಾರದಲ್ಲೂ ಅದೇ ಎನರ್ಜಿಯಿಂದ ಆಡ್ತಾ ಇದ್ದಾರೆ. ಎಲ್ಲಾ ಕಡೆ ಕಾಣಿಸಿಕೊಳ್ತಿದ್ದಾರೆ. ಮಾತಿಗೆ ಮಾತು ಟಕ್ಕರ್ ಕೊಡ್ತಾ ಇದ್ದಾರೆ. ಆದರೆ ಶೋಭಾ ಅವರ ದನಿ ಎಲ್ಲೋ ಮರೆಯಾಗಿದೆ. ಅವರಿಗೆ ಮುಂದೆ ಬರುವ, ಮಾತಾಡುವ ಸಂದರ್ಭಗಳಲ್ಲೇ ಹೆಚ್ಚಾಗಿಲ್ಲ ಅನ್ನೋ ಹಾಗೆ ಆಗಿದೆ. ಈ ವಾರ ನಾಮಿನೇಟ್ ಸಹಾ ಆಗಿದ್ದಾರೆ ಶೋಭಾ..

ಶೋಭಾ ಅವರ ಮೇಲೆ ಒಂದಷ್ಟು ನಿರೀಕ್ಷೆಗಳನ್ನು ಇಟ್ಕೊಂಡವ್ರಿಗೆ ಬೇಸರ ಅಂತೂ ಖಂಡಿತ ಆಗಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಐವತ್ತು ದಿನಗಳ ಆಟವನ್ನು ನೀಡಿ ಬಂದ್ರೂ ಕೂಡಾ ಶೋಭಾಗೆ ಕನ್ನಡ ಬಿಗ್ ಬಾಸ್ ಮನೆ ಅರ್ಥ ಆಗ್ಲಿಲ್ವಾ, ಅವರೇ ಆಟ ಆಡೋದ್ರಲ್ಲಿ ಎಡವಿದ್ರಾ? ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದು ಬಿಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment