Bigg Boss Kannada 11 ನ ಮೊದಲ ವೀಕೆಂಡ್ ಆಗುತ್ತಾ ವೈಲೆಂಟ್ ಈಗ ಎಲ್ಲರ ಗಮನ ಫಸ್ಟ್ ವೀಕೆಂಡ್ ಕಡೆಗೆ

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಮೊದಲ ವೀಕೆಂಡ್ ಗಾಗಿ ಪ್ರೇಕ್ಷಕರು ಈಗಲೇ ಕಾಯೋಕೆ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸೀಸನ್ ನ ಮೊದಲ ವೀಕೆಂಡ್ ಬೆಂಕಿ ತರ ಇರುತ್ತೆ ಅನ್ನೋ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ ಪ್ರೇಕ್ಷಕರು. ಅಲ್ಲದೇ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಗೆ ಖಡಕ್ ಕ್ಲಾಸ್ ತಗೊಳ್ತಾರಾ? ಅನ್ನೋದೇ ಈಗ ಎಲ್ಲರ ನಿರೀಕ್ಷೆ ಆಗಿದೆ.

ಕಳೆದ ಸೀಸನ್ ನಲ್ಲಿ ಬಳೆ ವಿಚಾರಕ್ಕೆ ಆದ ಗಲಾಟೆ ಎಲ್ಲರಿಗೂ ಗೊತ್ತಿದೆ. ಅಂತದ್ರಲ್ಲಿ ಈ ಸೀಸನ್ ನಲ್ಲಿ ಮಾನಸ ಅವರನ್ನು ಜಗದೀಶ್ (Lawyer Jagadish) ಯಾವ ಸೀಮೆ ಹೆಂಗಸು ಎಂದು ಆಡಿದ ಮಾತಿಗೆ ಕಿಚ್ಚ (Kichcha Sudeep) ಸುಮ್ಮನೆ ಇರ್ತಾರಾ? ಖಂಡಿತ ಇರಲ್ಲ ಅಂತಿದ್ದಾರೆ ಪ್ರೇಕ್ಷಕರು. ಅದು ಸಾಲದು ಅನ್ನೋ ಹಾಗೆ ಜಗದೀಶ್ ಅವರು ಬಿಗ್ ಬಾಸ್ ಶೋ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

ನಾನು ಹೊರಗೆ ಬಂದ್ಮೇಲೆ ಬಿಗ್ ಬಾಸ್ ನ ಎಕ್ಸ್ ಪೋಸ್ ಮಾಡ್ತೀನಿ, ಶೋ ನ ಉಡಾಯಿಸ್ತೀನಿ, ನಮ್ಮನ್ನ ಎದುರಾಕ್ಕೊಂಡು ಕರ್ನಾಟಕದಲ್ಲಿ ಶೋ ಮಾಡ್ತೀರಾ? ಹೇಗೆ ಮಾಡ್ತೀರಾ? ಅಂತೆಲ್ಲಾ ಸವಾಲುಗಳನ್ನು ಹಾಕಿದ್ದಾರೆ. ಜಗದೀಶ್ ಅವರ ಮಾತುಗಳ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆಗಳೇ ನಡೀತಿದೆ.

ಶೋ ನಿಂದ ಹೊರಗೆ ಬಂದ್ಮೇಲೆ ಕೆಲವರು ನೆಗೆಟಿವ್ ಆಗಿ ಹೇಳೋದುಂಟು, ಅವಕಾಶ ಸಿಗದವರು ಕಾಮೆಂಟ್ ಮಾಡೋದುಂಟು. ಆದರೆ ಶೋನಲ್ಲಿ ಇದ್ದುಕೊಂಡೇ ಶೋಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡ್ತಿರೋ ಜಗದೀಶ್ ಅವರ ಬಗ್ಗೆ ಯಾವ ನಿರ್ಧಾರ ಮಾಡಲಾಗುತ್ತೆ ಅನ್ನೋದನ್ನ ವೀಕೆಂಡ್ ನಲ್ಲೇ ನೋಡಬೇಕಾಗಿದೆ.

Bigg Boss Kannada 11, ನಮ್ಮನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ? ಲಾಯರ್ ಜಗದೀಶ್ ಮತ್ತೊಂದು ಸವಾಲ್

Leave a Comment