Sobhita Dhulipala: ಸಮಂತಾರಿಂದ ದೂರವಾದ ಮೇಲೆ ಇದೀಗ ನಾಗಚೈತನ್ಯ (Nagachaitanya) ಶೋಭಿತಾ ಧೂಳಿಪಾಳ (Sobhita Dhulipala) ಜೊತೆಗೆ ಹೊಸ ಜೀವನಕ್ಕೆ ಸಿದ್ಧವಾಗುತ್ತಿದ್ದು, ಈ ಜೋಡಿಯ ನಿಶ್ಚಿತಾರ್ಥ ಕೆಲವೇ ದಿನಗಳ ಹಿಂದೆ ಸರಳವಾಗಿ ನಡೆದಿದೆ. ನಿಶ್ಚಿತಾರ್ಥದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿರುವ ಶೋಭಿತಾ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ..
ನಾಗ ಚೈತನ್ಯ ಜತೆಗಿನ ನಿಶ್ಚಿತಾರ್ಥವು ತಾನು ಬಯಸಿದ ರೀತಿಯಲ್ಲಿ ನಡೆದಿದ್ದು, ಅದು ಸರಳವಾಗಿ ನಡೆಯಿತೋ, ಆಡಂಬರದಿಂದ ನಡೆಯಿತೋ ಎನ್ನುವ ಚಿಂತೆ ನನಗಿಲ್ಲ. ನಾನು ಆ ಕ್ಷಣವನ್ನು ಆನಂದಿಸಿದೆ, ಅದೊಂದು ಸಿಹಿಯಾದ ಅನುಭವ. ನಾನು ಅಂದುಕೊಂಡ ಹಾಗೆ ನಿಶ್ಚಿತಾರ್ಥ ನಡೆಯಿತು.
ಸುಂದರವಾದ ಸಂಗತಿಗಳು ನಡೆದಾಗ ಅಲ್ಲಿ ಆಡಂಬರ ಅಥವಾ ಅಲಂಕಾರದ ಅಗತ್ಯ ಇದೋದಿಲ್ಲ. ಅದಕ್ಕೆ ನಿಶ್ಚಿತಾರ್ಥ ಸರಳವಾಗಿತ್ತು ಅಂತ ನನಗೆ ಅನಿಸಲಿಲ್ಲ ಎಂದಿದ್ದಾರೆ ಶೋಭಿತಾ ಧೂಳಿಪಾಳ. ಇದೇ ವೇಳೆ ನಟಿ ಮಾತೃತ್ವದ ಕುರಿತಾಗಿ ಸಹಾ ಮಾತನಾಡಿ ಗಮನ ಸೆಳೆದಿದ್ದಾರೆ.
ನಾನು ಪರಿಪೂರ್ಣ ಮಾತೃತ್ವವನ್ನು ಆನಂದಿಸಲು ಬಯಸುತ್ತೇನೆ ಹಾಗೂ ಅದರ ಬಗ್ಗೆ ನನ್ನ ಆಲೋಚನೆಗಳು ಸ್ಪಷ್ಟವಾಗಿದೆ. ತಾಯಿಯಾಗುವ ಅನುಭವ ಪಡೆಯುವ ಆಸೆ ನನಗಿದೆ. ಅಲ್ಲದೇ ಇಂತಹ ಸಂತೋಷದ ಘಟನೆಗಳು ನಡೆದಾಗ ನಾನು ತೆಲುಗು ಸಂಪ್ರದಾಯಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತೇನೆಂದು ಶೋಭಿತಾ ಹೇಳಿದ್ದಾರೆ.
Bigg Boss Kannada 11ರ ಸ್ಪರ್ಧಿಗಳ ಹೊಸ ಲಿಸ್ಟ್, ಇವರಲ್ಲಿ ಸ್ವರ್ಗ ಸುಖ, ನರಕದ ಯಾತನೆ ಯಾರಿಗೆ ಸಿಗಲಿದೆ