Kannada Serial TRP ಯಲ್ಲಿ ಪುಟಿದೆದ್ದ ಪುಟ್ಟಕ್ಕ ಮತ್ತು ಅಮೃತಧಾರೆ, ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ?

Written by Soma Shekar

Published on:

---Join Our Channel---

Kannada Serial TRP: ಸಮಯ ಬದಲಾವಣೆ ನಂತರ ಟಿಆರ್‌ಪಿ ಯಲ್ಲಿ ಕುಸಿತಗೊಂಡು ಟಾಪ್ ಐದರಿಂದ ಹೊರ ಬಿದ್ದಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮತ್ತೆ ಚೇತರಿಕೆ ಕಂಡಿದೆ. ಪುಟ್ಟಕ್ಕನ ಮಕ್ಕಳು ಟಾಪ್ ಐದಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದು, ಈ ವಾರ ಸೀರಿಯಲ್ ಗಳ ಟಿ ಆರ್ ಪಿಯಲ್ಲಿ (Kannada Serial TRP) ಬಹಳ ಮಹತ್ವದ ಬದಲಾವಣೆಗಳು ಕಂಡಿದ್ದು ಈ ವಾರದ ಟಾಪ್ 5 ಸೀರಿಯಲ್ ಗಳ ಪಟ್ಟಿ ಇಲ್ಲಿದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಮಯ ಬದಲಾದಾಗಿನಿಂದಲೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿದ್ದು, ಈ ವಾರ ಸಹಾ ಈ ಸೀರಿಯಲ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಅಮೃತಧಾರೆ (Amruthadhaare) ಸೀರಿಯಲ್ ನ ಟಿ ಆರ್ ಪಿ ಯಲ್ಲಿ ಏರಿಕೆ ಕಂಡಿದ್ದು, ಈ ವಾರ ನೇರವಾಗಿ ಅಮೃತಧಾರೆ ಎರಡನೇ ಸ್ಥಾನಕ್ಕೆ ಜಿಗಿಯುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಸ್ವಲ್ಪವೇ ಅಂತರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ಧು, ಕಳೆದ ಒಂದಷ್ಟು ವಾರಗಳಿಂದಲೂ ಈ ಸೀರಿಯಲ್ ಟಾಪ್ ಐದರಲ್ಲಿ ಇದೆ.

ನಾಲ್ಕನೇ ಸ್ಥಾನಕ್ಕೆ ಪುಟ್ಟಕ್ಕನ ಮಕ್ಕಳು (Puttakkana Makkalu) ಎಂಟ್ರಿ ನೀಡಿದೆ. ಸಮಯ ಬದಲಾದ ನಂತರ ಟಾಪ್ ಒನ್ ಅಷ್ಟೇ ಅಲ್ಲ ಟಾಪ್ ಐದರಿಂದಲೇ ಹೊರ ಬಂದಿದ್ದ ಪುಟ್ಟಕ್ಕನ ಮಕ್ಕಳು ಮೂರ್ನಾಲ್ಕು ವಾರಗಳ ನಂತರ ಟಾಪ್ ಐದರ ರೇಸ್ ಗೆ ರೀ ಎಂಟ್ರಿ ಕೊಟ್ಟಿದೆ.

ಇನ್ನು ಈ ವಾರ ಟಾಪ್ ಐದರ ಸ್ಥಾನವನ್ನು ಅಣ್ಣಯ್ಯ (Annayya) ಮತ್ತು ರಾಮಾಚಾರಿ (Ramachari) ಸೀರಿಯಲ್ ಗಳು ಶೇರ್ ಮಾಡಿಕೊಂಡಿವೆ. ಇದೇ ವೇಳೆ ಕಳೆದೆರಡು ವಾರಗಳಿಂದ ಟಾಪ್ ಐದರಲ್ಲಿದ್ದ ಲಕ್ಷ್ಮೀ ಬಾರಮ್ಮ ಈ ವಾರ ಆರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

Leave a Comment