Lakshmi Baramma Serial: ಲಕ್ಷ್ಮಿಯ ಇನ್ನೊಂದು ರೂಪ ನೋಡಿ ಶಾಕ್ ಆದ ಪ್ರೇಕ್ಷಕರು, ಟ್ವಿಸ್ಟ್ ಅಂದ್ರೆ ಇದು ಅಂದ ನೆಟ್ಟಿಗರು

Written by Soma Shekar

Published on:

---Join Our Channel---

Lakshmi Baramma Serial: ಲಕ್ಷ್ಮೀ ಬಾರಮ್ಮ ಸೀರಿಯಲ್ ನ (Lakshmi Baramma Serial) ಇತ್ತೀಚಿನ ಎಪಿಸೋಡ್ ಗಳನ್ನು ನೋಡುತ್ತಾ ಪ್ರೇಕ್ಷಕರು ಒಂದು ವಿಷಯವನ್ನು ಊಹೆ ಮಾಡಿದ್ದರು. ಈಗ ವೀಕ್ಷಕರ ಊಹೆಯೇ ನಿಜವಾಗಿದೆ. ಕಾವೇರಿ ಆಟಕ್ಕೆ ಬ್ರೇಕ್ ಹಾಕಲು, ಕಾವೇರಿಯ ಅಸಲಿ ಮುಖವನ್ನು ಹೊರ ತರೋದಕ್ಕೆ ಲಕ್ಷ್ಮೀ ಗಂಗಾ ಜೊತೆ ಸೇರಿಕೊಂಡು ಕೀರ್ತಿ ಆತ್ಮ ತನ್ನ ಮೇಲೆ ಬಂದಿರುವ ಹಾಗೆ ನಾಟಕವನ್ನ ಆಡ್ತಿದ್ದಾಳೆ.

ಕೀರ್ತಿ (Keerthy) ಸತ್ತಿದ್ದಾಳೆ ಅಂತ ಅವಳ ಅಂತ್ಯ ಸಂಸ್ಕಾರ ಸಹಾ ಮಾಡಲಾಗಿದೆ. ಆದರೆ ಲಕ್ಷ್ಮೀ ಕೀರ್ತಿ ಸಾವಿಗೆ ಕಾರಣ ಏನು ಅನ್ನೋದನ್ನ ಕಂಡು ಹಿಡಿಯಲು ಮುಂದಾಗಿದ್ದಾಳೆ. ಅವಳಿಗೆ ಅನುಮಾನ ಇರುವುದು ಕಾವೇರಿಯ ಮೇಲೆ. ಏಕೆಂದರೆ ಕೀರ್ತಿಯ ಫೋನ್ ಅನ್ನ ಕಾವೇರಿ ಕದ್ದು ಒಡೆದು ಹಾಕಿದ್ದಾಳೆ.‌

ಕಾವೇರಿ (Kaveri) ಬಾಯಿ ಬಿಡಿಸಲು ಲಕ್ಷ್ಮೀ ಕೀರ್ತಿ ಆತ್ಮ ತನ್ನ ಮೈಮೇಲೆ ಬಂದಂತೆ ನಾಟಕ ಆಡ್ತಿದ್ದಾಳೆ. ಕಾವೇರಿ ಲಕ್ಷ್ಮೀನಲ್ಲಿರೋ ಆತ್ಮವನ್ನ ಓಡಿಸಬೇಕು ಅಂತ ಗುರುಗಳ ಬಳಿ ಕರ್ಕೊಂಡು ಹೋದಾಗಲೂ, ಗಂಗಾ ಮೊದಲೇ ಗುರುಗಳ ಹತ್ರ ಸತ್ಯವೊಂದನ್ನ ತಿಳಿಯೋಕೆ ತಮಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿಕೊಂಡಿದ್ದಳು.

ಲಕ್ಷ್ಮೀ ಕೀರ್ತಿಯಂತೆ ನಾಟಕ ಆಡಿ ಕಾವೇರಿಗೆ ನೆಮ್ಮದಿಯಾಗಿ ಇರೋಕೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಆ ಮಾತುಗಳನ್ನ ಕೇಳಿ ಕಾವೇರಿ ಆತಂಕದಲ್ಲಿದ್ದಾಳೆ. ಕೀರ್ತಿ ಮೈಮೇಲೆ ಬಂದಂತೆ ನಾಟಕ ಆಡುವ ಲಕ್ಷ್ಮೀ ಪಾತ್ರದಲ್ಲಿರುವ ನಟಿಯ ಅಭಿನಯಕ್ಕೆ ಪ್ರೇಕ್ಷಕರ ಮೆಚ್ಚುಗೆಗಳು ಹರಿದು ಬರುತ್ತಿವೆ.

Bigg Boss Kannada: ಬಿಗ್ ಬಾಸ್ ಗೆ ಕಿಚ್ಚ ಬಂದೇ ಬರ್ತಾರೆ ಅಂತಿದ್ದವ್ರಿಗೆ ಬಿಗ್ ಶಾಕ್ ಕೊಟ್ಟ ಕಲರ್ಸ್ ಕನ್ನಡ

Leave a Comment