Puttakkana Makkalu: ಯುವ ನಟಿಯರಿಗೆ ಸುವರ್ಣಾವಕಾಶ ಕೊಟ್ಟ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡ

Written by Soma Shekar

Published on:

---Join Our Channel---

Puttakkana Makkalu: ಹಿರಿಯ ನಟಿ ಉಮಾಶ್ರೀ (Umashree) ಮತ್ತು ಮಂಜು ಭಾಷಿಣಿ (Manju Bhashini) ಮುಖ್ಯಭೂಮಿಕೆಯಲ್ಲಿರುವ, ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಕಿರುತೆರೆಯ ಯಶಸ್ವಿ ಮತ್ತು ಜನಪ್ರಿಯ ಸೀರಿಯಲ್ ಆಗಿದೆ. ಕಳೆದ ಒಂದಷ್ಟು ತಿಂಗಳುಗಳಿಂದಲೂ ಕೂಡಾ ಪುಟ್ಟಕ್ಕನ ಮಕ್ಕಳನ್ನು ನಂಬರ್ ಒನ್ ಸ್ಥಾನದಿಂದ ಕೆಳಗಿಳಿಸುವ ಬೇರೆ ಸೀರಿಯಲ್ ಗಳೇ ಇಲ್ಲ ಎನ್ನುವಂತಿದೆ.

ಮೂರು ಜನ ಹೆಣ್ಣು ಮಕ್ಕಳನ್ನು ಮೆಸ್ ನಡೆಸುತ್ತಾ ಸ್ವಾವಲಂಬಿಯಾಗಿ, ಛಲ ಬಿಡದ ಹೆಣ್ಣಾಗಿ ಸಾಕಿ ಬೆಳೆಸುವ ಪಾತ್ರವಾದ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅವರು ನಟಿಸಿದ್ದರೆ, ಮತ್ತೊಂದು ಪ್ರಮುಖ ಪಾತ್ರ ಬಡ್ಡಿ ಬಂಗಾರಮ್ಮನ ಪಾತ್ರಕ್ಕೆ ಜೀವ ನೀಡಿದ್ದಾರೆ ನಟಿ ಮಂಜು ಭಾಷಿಣಿ ಅವರು. ಪ್ರತಿಯೊಂದು ಪಾತ್ರಕ್ಕೂ ಸೀರಿಯಲ್ ನಲ್ಲಿ ವಿಶೇಷವಾದ ಮಹತ್ವ ನೀಡಲಾಗಿದೆ.

ಪುಟ್ಟಕ್ಕನ ಮೂವರು ಮಕ್ಕಳಾದ ಸಹನಾ, ಸ್ನೇಹ ಮತ್ತು ಸುಮ ಪಾತ್ರಗಳಾಗಿರಬಹುದು, ಕಂಠಿ, ಕಾಳಿ, ಪುರುಸಿ, ಪುಟ್ಟಕ್ಕನ ಗಂಡ, ರಾಧಾ, ರಾಜೇಶ್ವರಿ ಪಾತ್ರಗಳೇ ಆಗಿರಲಿ ಎಲ್ಲಾ ಪಾತ್ರಗಳು ಸಹಾ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಈ ಸೀರಿಯಲ್ ಕಡೆಯಿಂದ ನಿಮಗೂ ಒಂದು ಬಂಪರ್ ಆಫರ್ ಇದೆ.

ಹೌದು, ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ (Arooru Jagadish) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದು, ನಮಸ್ತೆ. ನಮ್ಮ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ಪ್ರಧಾನ ಪಾತ್ರಕ್ಕೆ 23 ರಿಂದ 26 ವಯಸ್ಸಿನ ಒಳಗಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ನಟನೆ ಗೊತ್ತಿರುವ, ಗುಡ್ ಲುಕ್ ಇರುವ ಹುಡುಗಿ ಬೇಕಾಗಿದ್ದಾರೆಂದು ತಿಳಿಸಿದ್ದಾರೆ.

ಜೊತೆಗೆ ದಯವಿಟ್ಟು ನಿಮ್ಮ ಪೋಟೊ ಮತ್ತು ಬಯೊಡಾಟಾವನ್ನು ಶೀಘ್ರವಾಗಿ [email protected] ಗೇ ಮೇಲ್ ಮಾಡಿ ಎಂದೂ ಸಹಾ ತಿಳಿಸಿದ್ದಾರೆ. ನಟನೆಯಲ್ಲಿ ಆಸಕ್ತಿ ಇರುವ ಹುಡುಗಿಯರಿಗೆ ಇದೊಂದು ಸುವರ್ಣಾವಾಶವಾಗಿದೆ ಎಂದೇ ಹೇಳಬಹುದಾಗಿದೆ. ಆಸಕ್ತಿ ಇರುವವರು ಖಂಡಿತ ಒಮ್ಮೆ ಪ್ರಯತ್ನಿಸಿ.

Aamir Khan: ಅಮೀರ್ ಖಾನ್ ಅದೃಷ್ಟ ಬದಲಾಗುತ್ತಾ? ವಿಜಯ್ ಸೇತುಪತಿ ಪಾತ್ರ ಮಾಡ್ತಾರಂತೆ ಅಮೀರ್ ಖಾನ್

Leave a Comment