Lakshmi Nivasa: ಇತ್ತೀಚಿನ ದಿನಗಳಲ್ಲಿ ಕೆಲವೊಂದು ಧಾರಾವಾಹಿಗಳಲ್ಲಿ ತೋರಿಸುವ ದೃಶ್ಯಗಳು ಪ್ರೇಕ್ಷಕರಿಗೆ ಸಾಕಷ್ಟು ಪ್ರಶ್ನೆಗಳನ್ನ ಮೂಡುವಂತೆ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಲವು ದೃಶ್ಯಗಳಲ್ಲಿ ಸಿರಿಯಲ್ ನ ಮುಖ್ಯ ಪಾತ್ರಗಳಲ್ಲಿ ಇರುವವರನ್ನು ದಡ್ಡರೇನೋ ಎನ್ನುವಂತೆ ತೋರಿಸುವುದನ್ನು ನೋಡಿದಾಗ ಪ್ರೇಕ್ಷಕರು ಅಸಮಾಧಾನಗೊಳ್ಳುವುದು ಮಾತ್ರವೇ ಅಲ್ಲದೇ ನಿರ್ದೇಶಕರು ನಮ್ಮನ್ನು ಕೂಡಾ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡ್ತಿದ್ದಾರಾ ಅಂತ ಪ್ರಶ್ನೆಯನ್ನ ಮಾಡ್ತಾರೆ.
ಈಗ ಅಂತದೇ ಒಂದು ಪ್ರಶ್ನೆ ಜನಪ್ರಿಯ ಧಾರಾವಾಹಿ ಲಕ್ಷ್ಮೀನಿವಾಸದ (Lakshmi Nivasa) ಬಗ್ಗೆ ಪ್ರೇಕ್ಷಕರಲ್ಲಿ ಮೂಡಿದೆ. ಸೀರಿಯಲ್ ಕಥೆಯಲ್ಲಿ ಸಿದ್ದೇಗೌಡರು (Side Gowda) ಭಾವನಾನ (Bhavana) ಪ್ರೀತಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಭಾವನಾಗೆ ತನ್ನ ಎದುರುಗಡೆ ಕಾಣುವ ಸಿದ್ದೇಗೌಡರ ಬಗ್ಗೆ ಒಂದು ರೀತಿಯ ಅಸಮಾಧಾನ ಇದೆ. ಆದರೆ ಫೋನ್ ನಲ್ಲಿ ಸಿದ್ದೇಗೌಡ್ರನ್ನ ಬೇರೆ ಯಾರೋ ಅಂತ ತಿಳ್ಕೊಂಡು, ಖುಷಿಯನ್ನು ಹುಡುಕಿ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಅಂತ ಅವರ ಜೊತೆಗೆ ಬಹಳ ಸ್ನೇಹದಿಂದ, ಆತ್ಮೀಯತೆಯಿಂದ ಇರೋದನ್ನ ನೋಡಬಹುದಾಗಿದೆ.
ಅಲ್ಲದೆ ಗೌಡ್ರೆ ಗೌಡ್ರೆ ಅಂತ ಫೋನಿನಲ್ಲಿ ಮಾತನಾಡೋದು ಆಗಾಗ ನಡೆಯುತ್ತೆ. ಈಗ ಪ್ರಸ್ತುತ ಭಾವನಾಗೆ ತನ್ನ ಕೊರಳಿಗೆ ತಾಳಿ ಕಟ್ಟಿದ್ದು ಯಾರು ಅನ್ನೋ ವಿಷಯ ಗೊತ್ತಿಲ್ಲದೇ, ಅದನ್ನು ಯಾರಿಗೂ ಹೇಳಿಕೊಳ್ಳೋಕಾಗದೇ, ಮನಸ್ಸಿನಲ್ಲಿ ವೇದನೆಯನ್ನು ಪಡ್ತಿದ್ದಾಳೆ. ಅದಕ್ಕೆ ಗೌಡ್ರಿಗೆ ಕಾಲ್ ಮಾಡಿ ನಡೆದ ಎಲ್ಲ ವಿಚಾರವನ್ನು ಹೇಳಿದ್ದಾಳೆ. ತಾಳಿ ಕಟ್ಟಿ ಹೋದವನನ್ನ ಹೇಡಿ ಅಂತ ಬೈದಿದ್ದಾಳೆ. ಭಾವನಾ ಮಾತುಗಳನ್ನ ಕೇಳಿ ಸಿದ್ದೇಗೌಡರು ಬಹಳ ಬೇಸರ ಪಟ್ಟುಕೊಂಡು ತನ್ನ ಬಗ್ಗೆ ತಾನೇ ಅಸಮಾಧಾನಗೊಂಡಿದ್ದಾರೆ.
ಇದೆಲ್ಲಾ ಕಥೆಯಾದರೇ, ಇಲ್ಲಿ ಪ್ರೇಕ್ಷಕರಿಗೆ ಬೇಸರ ಆಗ್ತಿರೋದು, ಭಾವನೆಗೆ ತಾನು ಮಾತಾಡ್ತಿರೋ ವ್ಯಕ್ತಿ ಸಿದ್ದೇಗೌಡ್ರೇ ಅನ್ನೋದು ಯಾಕೆ ಗೊತ್ತಾಗ್ತಿಲ್ಲ ? ಅನ್ನೋದಾಗಿದೆ. ಯಾಕಂದ್ರೆ ಎದುರುಗಡೆ ಗೌಡ್ರು ಮಾತಾಡೋ ಸ್ಟೈಲ್ ಮತ್ತು ಫೋನ್ ನಲ್ಲಿ ಭಾವನ ಗೌಡ್ರೆ ಅಂತ ಮಾತಾಡ್ಸೋ ವ್ಯಕ್ತಿ ಮಾತಾಡೋ ಸ್ಟೈಲ್ ಒಂದೇ ರೀತಿ ಇದೆ. ಅದರಲ್ಲಿ ಯಾವುದೇ ವ್ಯತ್ಯಾಸ ಅನ್ನೋದು ಇಲ್ಲ. ಆದ್ರೂ ಭಾವನಾಗೆ ಯಾಕೆ ಸ್ವಲ್ಪ ಕೂಡಾ ಅನುಮಾನ ಬರ್ತಿಲ್ಲ. ಭಾವನ ಅಷ್ಟೊಂದು ದಡ್ಡಿನಾ ಅನ್ನೋದು ಪ್ರೇಕ್ಷಕರ ಪ್ರಶ್ನೆಯಾಗಿದೆ.