99% ನೆಟ್ಟಿಗರು ಫೇಲ್ ಆದ ಟಾಸ್ಕ್:ಈ ಚಿತ್ರದಲ್ಲಿ ಹಾವಿದೆ, ನೀವು ಜೀನಿಯಸ್ ಆದ್ರೆ ಎಲ್ಲಿದೆ ಹೇಳಿ??

0
153

ಫೋಟೋ ಪಜಲ್ಸ್ ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ನೆಟ್ಟಿಗರು ಬಹಳ ಆಕರ್ಷಿತರಾಗುತ್ತಿದ್ದಾರೆ. ಏಕೆಂದರೆ ಹೀಗೆ ವೈರಲ್ ಆಗುವ ಫೋಟೋಗಳಲ್ಲಿ ಕೆಲವು ನಮ್ಮನ್ನು ಮಂತ್ರ‌ ಮುಗ್ಧರನ್ನಾಗಿಸಿದರೆ, ಇನ್ನೂ ಕೆಲವು ನಮ್ಮ ಮೆದುಳು ಮತ್ತು ಕಣ್ಣಿಗೆ ಸವಾಲನ್ನು ಹಾಕುತ್ತವೆ. ಕಣ್ಣಿಗೆ ಮೋಸ ಮಾಡುವ ಈ ಚಿತ್ರಗಳನ್ನು ನೋಡಿದಾಗ ಜನರು ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ ಆದರೆ ಕೆಲವರು ಈ ಫೋಟೋಗಳಲ್ಲಿನ ವಿಶೇಷತೆಯನ್ನು ಗುರುತಿಸಲಾಗದೆ ಕೈಗೆ ಎಟುಕದ ದ್ರಾಕ್ಷಿ ಹುಳಿ ಎಂದು ಹೇಳುವ ಹಾಗೆ ಈ ಫೋಟೋಗಳೆಲ್ಲಾ ಗ್ರಾಫಿಕ್ಸ್, ಎಡಿಟಿಂಗ್ ಎಂದು ಹೇಳುವುದು ಸಹಾ ಉಂಟು.

ಹಿಂದೆಲ್ಲಾ ವಾರಾಂತ್ಯದಲ್ಲಿ ದಿನ ಪತ್ರಿಕೆಗಳು, ಮ್ಯಾಗಜೀನ್ ಗಳು ಬಂದಾಗ ಅದರಲ್ಲಿ ಜನರನ್ನು ಬಹಳ ಪ್ರಮುಖವಾಗಿ ಆಕರ್ಷಣೆ ಮಾಡುತ್ತಾ ಇದ್ದದ್ದು ಪದಬಂಧಗಳು, ಫೋಟೋ ಪಜಲ್ ಗಳು, ಆಗೆಲ್ಲಾ ಜನರು ವಾರಾಂತ್ಯದ ವಿಶೇಷ ಸಂಚಿಕೆಗಳು ಹಾಗೂ ಮ್ಯಾಗಜೀನ್ ಗಳಿಗಾಗಿ ಕಾಯಬೇಕಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ, ಇಂಟರ್ನೆಟ್ ನಲ್ಲಿ ಸೆಕೆಂಡ್ ಗಳಲ್ಲೇ ಇಂತಹ ಫೋಟೀ ಪಜಲ್ ಗಳು ನೂರು ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತವೆ. ಇಂತಹ ಫೋಟೋಗಳು ವೈರಲ್ ಆಗುತ್ತವೆ.

ಇನ್ನು ಇಂತಹ ಪಜಲ್ ಪೋಟೋಗಳಲ್ಲಿ ಅಡಗಿರುವ ರಹಸ್ಯ ಏನು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಸ್ಪರ್ಧೆಗೆ ಬಿದ್ದವರಂತೆ ಪೈಪೋಟಿ ನಡೆಸುತ್ತಾರೆ. ನೋಟ ಹಾಗೂ ಮೆದುಳು ಚುರುಕಾಗಿರುವವರು ಕೆಲವೇ ಕ್ಷಣಗಳಲ್ಲಿ ಈ ಫೋಟೋ ಪಜಲ್ ಗಳ ಮಿಸ್ಟರಿಯನ್ನು ಪರಿಹರಿಸಿದರೆ, ಇನ್ನೂ ಕೆಲವರಿಗೆ ಅದು ಗಂಟೆಗಳ ಸಮಯ ಹಿಡಿಯುತ್ತದೆ, ತಾಳ್ಮೆ ಕಳೆದುಕೊಂಡವರಿಗಾದರೆ ಉತ್ತರ ಸಿಗುವುದೇ ಇಲ್ಲ ಎಂದೂ ಹೇಳಬಹುದು.

ಪ್ರಸ್ತುತ ಅಂತದ್ದೇ ಒಂದು ಫೋಟೋ ಪಜಲ್ ವೈರಲ್ ಆಗಿದೆ. ವೈರಲ್ ಆದ ಫೋಟೋದಲ್ಲಿ ಒಂದು ಹಾವು ಇದೆ. ಆದರೆ ಫೋಟೋ ನೋಡಿದ ಕೂಡಲೇ ಖಂಡಿತ ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ.‌‌ ಕಂಡರೆ ನಿಮ್ಮ ದೃಷ್ಟಿ ಬಹಳ ಚುರುಕು ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ ಸುಮ್ಮನೆ ಒಂದು ನೋಟ ಹರಿಸಿದರೆ ಈ ಫೋಟೋದಲ್ಲಿ ಇರುವ ಹಾವು ಕಾಣುವುದು ಅಸಂಭವ ಎಂದೇ ಹೇಳಲಾಗಿದೆ. ಕ್ಯಾಕ್ಟಸ್ ಗಿಡಗಳು ಇರುವ ಪ್ರದೇಶದಲ್ಲಿ ಅಡಗಿರುವ ಹಾವು ಎಲ್ಲಿದೆ ಎಂದು ನೀವೀಗ ಹುಡುಕಬಹುದು.

ನಿಮ್ಮ‌ ಬುದ್ಧಿ ಮತ್ತು ನಿಮ್ಮ ಕಣ್ಣಿಗೆ ಈಗ ಕೆಲಸವನ್ನು ನೀಡಿ, ಚಿತ್ರದಲ್ಲಿ ಹಾವು ಎಲ್ಲಿ ಅಡಗಿದೆ ಎನ್ನುವುದನ್ನು ಉತ್ತರ ಇರುವ ಫೋಟೋವನ್ನು ನೋಡದೇ ಪರೀಕ್ಷಿಸಿ, ಇದು ಖಂಡಿತ ಸಮಯ ವ್ಯರ್ಥ ಮಾಡುವ ಆಟವಲ್ಲ, ನಿಮ್ಮ ಏಕಾಗ್ರತೆಗೆ ಒಂದು ಪರೀಕ್ಷೆ ಅಷ್ಟೇ, ಹಾವನ್ನು ಹುಡುಕಲು ನೀವು ಹರಿಸುವ ಗಮನವು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒಂದು ವಿಷಯವನ್ನು ಸೂಕ್ಷ್ಮವಾಗಿ ನೋಡುವ ಸಾಮರ್ಥ್ಯ ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here