99% ಜನರು ಫೇಲಾದ ಟಾಸ್ಕ್ ಇದು:ಈ ಚಿತ್ರದಲ್ಲಿ ಹಾವು ಎಲ್ಲಿದೆ? ಖಂಡಿತ ನಿಮ್ಮ ಕಣ್ಣಿಗೆ ಇದು ಸವಾಲು!!

0 1

ಟ್ರೆಂಡಿಂಗ್ ವಿಷಯಗಳು ಹಾಗೂ ವೈರಲ್ ವೀಡಿಯೋಗಳಿಗೆ ಸೋಶಿಯಲ್ ಮೀಡಿಯಾಗಳು ಮನೆಯಿದ್ದಂತೆ ಎಂದರೆ ಇದರಲ್ಲಿ ಅತಿಶಯೋಕ್ತಿ ಖಂಡಿತ ಇಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾದ ನಂತರ ಜನವಂತೂ ಎಂಟರ್ಟೈನ್ಮೆಂಟ್ ಎಂದು ಬಂದರೆ ಕೂಡಲೇ ಸೋಶಿಯಲ್ ಮೀಡಿಯಾಗಳ ವಿವಿಧ ವೇದಿಕೆಗಳಿಗೆ ಮುತ್ತಿಗೆ ಹಾಕುತ್ತಾರೆ. ಮನರಂಜನೆಗೆ ಯಾವ ವಿಷಯಗಳೆಲ್ಲಾ ಇದೆ ಎಂದು ಸರ್ಚ್ ಮಾಡುತ್ತಾರೆ. ಆಗ ಸಾಮಾನ್ಯವಾಗಿ ಅವರ ಗಮನ ಸೆಳೆಯುವ ಪ್ರಮುಖವಾದ ವಿಷಯ ಎಂದರೆ ಅದು ಫೋಟೋ ಪಜಲ್ಸ್‌.

ಸಾಮಾನ್ಯವಾಗಿ ಒಗಟುಗಳನ್ನು ಬಿಡಿಸುವುದು, ಚಿತ್ರಗಳಲ್ಲಿನ ರಹಸ್ಯವನ್ನು ಹುಡುಕುವುದು ಎಂದರೆ ಬಹಳಷ್ಟು ಜನರಿಗೆ ಅದು ಆಸಕ್ತಿ ಮತ್ತು ಕುತೂಹಲವನ್ನು ಕೆರಳಿಸುವ ವಿಷಯವಾಗಿದೆ. ಏಕೆಂದರೆ ಇದು ನಮ್ಮ ಮೆದುಳಿಗೆ ಕೆಲಸವನ್ನು ನೀಡುತ್ತದೆ. ಅಲ್ಲದೇ ಇಂತಹ ಫೋಟೋ ಪಜಲ್ಸ್ ಅನ್ನು ಪರಿಹರಿಸುವುದಕ್ಕೆ ಕಣ್ಣು ಕೂಡಾ ಚುರುಕಾಗಿರಬೇಕು. ಕೆಲವರು ಫೋಟೋ ಗಳನ್ನು ನೋಡಿದ ಕೆಲವೇ ಸೆಕೆಂಡ್ ಗಳಲ್ಲಿ ಅಲ್ಲಿ ಅಡಗಿರುವ ರಹಸ್ಯ ಕಂಡು ಹಿಡಿದರೆ ಇನ್ನೂ ಕೆಲವರು ಕೈ ಚೆಲ್ಲಿ ಕೂರುತ್ತಾರೆ.

ವಿಶೇಷ ಏನೆಂದರೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಟೋ ಪಜಲ್ಸ್ ಗಾಗಿಯೇ ವಿಶೇಷ ಪೇಜ್ ಗಳು ಇವೆ. ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಕೂಡಾ ಈ ಪೇಜ್ ಗಳಿಗೆ ಇದ್ದಾರೆ. ಈಗ ವೈರಲ್ ಆಗಿರುವ ಫೋಟೋದಲ್ಲಿ ಸಹಾ ಹಾಗೆ ಒಂದು ರಹಸ್ಯ ಅಡಗಿದೆ. ಈ ಫೋಟೋದಲ್ಲಿ ಒಂದು ವಿಷಪೂರಿತ ಹಾವು ಇದೆ. ಆದರೆ ಫೋಟೋ ನೋಡಿದ ಕೂಡಲೇ ಅದು ಎಲ್ಲಿದೆ ಎನ್ನುವುದು ಖಂಡಿತ ನಿಮಗೆ ತಿಳಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಈ ಫೋಟೋ ಕಣ್ಣಿಗೆ ಮೋಸವನ್ನು ಮಾಡುತ್ತದೆ.

ಫೋಟೋ ನೋಡಿದಾಗ ಅದು ಒಂದು ಮನೆಯ ಮುಂದಿನ ಅಂಗಳದಂತೆ ಕಾಣುತ್ತದೆ. ಅಂಗಳದ ತುಂಬೆಲ್ಲಾ ಗಿಡಗಳು ಇದ್ದು, ಅವುಗಳ ನಡುವೆಯೇ ಒಂದು ವಿಷಪೂರಿತ ಹಾವು ಆರಾಮವಾಗಿ ತನ್ನ ಜಾಗದಲ್ಲಿ ವಿಶ್ರಮಿಸಿದೆ. ಹಾವು ಎಲ್ಲಿದೆ ಎಂದು ಕಂಡುಹಿಡಿಯುವುದಕ್ಕೆ ನೆಟ್ಟಿಗರು ಬಹಳ ಪ್ರಯತ್ನವನ್ನು ಪಟ್ಟಿದ್ದಾರೆ. ಆದರೆ ಬಹಳಷ್ಟು ಮಂದಿ ವಿಫಲರಾಗಿ ಉತ್ತರ ಇರುವ ಫೋಟೋ ನೋಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ? ನಿಮ್ಮ ಕಣ್ಣು ಎಷ್ಟು ಚುರುಕು ಪರೀಕ್ಷಿಸಿಕೊಳ್ಳಿ, ಹಾವು ಎಲ್ಲಿದೆ ಹುಡುಕಿ??

Leave A Reply

Your email address will not be published.