90 ಕೋಟಿ ಸಾಲದಲ್ಲಿ ಮುಳುಗಿ, ದಿವಾಳಿ ಆಗಬೇಕಿದ್ದ ಅಮಿತಾಬ್ ಜೀವನದಲ್ಲಿ ಅಂದು ಹೊಸ ಬೆಳಕು ಕಂಡಿತ್ತು!!

Written by Soma Shekar

Published on:

---Join Our Channel---

ಬಾಲಿವುಡ್ ಉದ್ಯಮದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಸಿನಿಮಾ ಲೋಕದಲ್ಲಿ ಅವರೊಂದು ದೀರ್ಘವಾದ ಪಯಣವನ್ನು ಮಾಡಿರುವ ದಿಗ್ಗಜ ನಟ, ವಯಸ್ಸಾದರೂ ಇಂದಿಗೂ ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ನಟ ಇವರು. ವೃತ್ತಿ ಜೀವನದಲ್ಲಿ ಹಲವು ಮೈಲಿಗಲ್ಲು ಎನಿಸುವ ಸೂಪರ್ ಹಿಟ್ ಸಿನಿಮಾ ಗಳಲ್ಲಿ ನಟಿಸಿದ ಇವರ ನಟನೆ ಜನರ ಮೆಚ್ಚುಗೆ ಗಳಿಸಿದೆ, ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ‌. ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟ ಎನ್ನುವ ಗೌರವ ಪಡೆದಿದ್ದಾರೆ ಅಮಿತಾಬ್ ಬಚ್ಚನ್.

ಈ ಹಿರಿಯ ನಟ ಭಾರತದಲ್ಲಿ ಮಾತ್ರವೇ ಅಲ್ಲದೇ ವಿದೇಶಗಳಲ್ಲಿ ಸಹಾ ಜನಪ್ರಿಯತೆ ಪಡೆದುಕೊಂಡಿದ್ದಾರೆ.‌ ಕೋಟ್ಯಾನುಕೋಟಿ ಅಭಿಮಾನಿಗಳನ್ನು ಪಡೆದಿರುವ ಇವರಿಗೆ ಹೆಸರು, ಹಣ, ಆಸ್ತಿ, ಗೌರವ ಯಾವುದಕ್ಕೂ ಕೊರತೆ ಖಂಡಿತ ಇಲ್ಲ. ಅಮಿತಾಬ್ ಬಚ್ಚನ್ ಅವರು ತಮ್ಮ ಜೀವನದಲ್ಲಿ ಬಹಳ ಶ್ರಮ ಪಟ್ಟು, ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಿ ಇಂದಿನ ಈ ಹಂತವನ್ನು ತಲುಪಿದ್ದಾರೆ. ಇಂದು ಅಮಿತಾಬ್ ಅವರನ್ನು ಜನ ಗುರುತಿಸುತ್ತಾರೆ. ಬಾಲಿವುಡ್ ಮಂದಿ ಅವರನ್ನು ಗೌರವಿಸುತ್ತಾರೆ.

ಅಮಿತಾಬ್ ಬಚ್ಚನ್ ಅವರು ಇಂದು ಎಷ್ಟೇ ದೊಡ್ಡ ವ್ಯಕ್ತಿ, ಜನಪ್ರಿಯತೆ ಪಡೆದ ಸ್ಟಾರ್ ಆಗಿರಬಹುದು ಆದರೆ 70-80 ರ ದಶಕದಲ್ಲಿ ಅವರ ಜೀವನದಲ್ಲಿ ಸಹಾ ಏರಿಳಿತಗಳು ಕಂಡು ಬಂದಿದ್ದವು. ಅವರ ಕೂಲಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆಯಿಂದ ಅವರ ಪ್ರಾಣಕ್ಕೆ ಸಂ ಚ ಕಾರ ಎದುರಾಗಿತ್ತು. ಇದಾದ ಕೆಲವು ವರ್ಷಗಳ ನಂತರ ಭಾರೀ ನಷ್ಟವನ್ನು ಎದುರಿಸಿದ ಅಮಿತಾಬ್ ಅವರು ಯಾವ ಹಂತವನ್ನು ತಲುಪಿದ್ದರು ಎಂದರೆ ಒಂದು ಸಂದರ್ಭದಲ್ಲಿ ಅವರು ದಿವಾಳಿಯಾಗಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

90 ರ ದಶಕದಲ್ಲಿ ಅಮಿತಾಬ್ ಅವರ ಸಿನಿಮಾಗಳು ಅಷ್ಟಾಗಿ ಓಡಲಿಲ್ಲ, ಅವರ ನಿರ್ಮಾಣ ಸಂಸ್ಥೆ ಹೊರ ತಂದ ಸಿನಿಮಾಗಳು ಕೂಡಾ ನೆಲ ಕಚ್ಚಿದವು, ಅಮಿತಾಬ್ ಅವರ ಬೇರೆ ಬೇರೆ ವ್ಯವಹಾರಗಳು ನಷ್ಟ ಎದುರಿಸಿ ಆರ್ಥಿಕ ಸಂಕಷ್ಟ ಅವರಿಗೆ ಎದುರಾಗಿತ್ತು. ಆದರೆ ಮೊಹಬ್ಬತೇ ಸಿ‌ನಿಮಾದಲ್ಲಿ ಅವರು ನಟಿಸಿದ ನಂತರ ಮತ್ತೊಮ್ಮೆ ಅವರ ಸ್ಟಾರ್ ಡಂ ಮತ್ತು ಅದೃಷ್ಟ ಹಿಂದಿನಂತೆ ಹೊಳೆಯಲು ಆರಂಭಿಸಿತು. 27 ಅಕ್ಟೋಬರ್ 2000 ರಲ್ಲಿ ಮೊಹಬ್ಬತೇ ಸಿನಿಮಾ ಬಿಡುಗಡೆ ಆಗಿತ್ತು.

ಈ ಸಿನಿಮಾದಲ್ಲಿ ಅಮಿತಾಬ್ ಅವರ ಎದುರು ಪ್ರಮುಖ ಪಾತ್ರಗಳಲ್ಲಿ ಶಾರೂಖ್ ಖಾನ್ ಹಾಗೂ ಬಾಲಿವುಡ್ ಬೆಡಗಿ, ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಆಗುವ ವೇಳೆಯಲ್ಲೇ ಅಮಿತಾಬ್ ಅವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು, ಅವರ ಅವರ ನಿರ್ಮಾಣ ಸಂಸ್ಥೆ ದಿವಾಳಿ ಘೋಷಣೆ ಆಗುವ ಹಂತದಲ್ಲಿತ್ತು. ಅಮಿತಾಬ್ ಅವರ ಸಿನಿಮಾಗಳು ಫ್ಲಾಪ್ ಆಗುತ್ತಿದ್ದವು, ಆದ್ದರಿಂದಲೇ ನಿರ್ಮಾಪಕರು ಅವರನ್ನು ತಮ್ಮ ಸಿನಿಮಾಗಳಿಗೆ ಹಾಕಲು ಹಿಂದೇಟು ಹಾಕುತ್ತಿದ್ದರು.

ಅಮಿತಾಬ್ ಅವರ ಪರಿಸ್ಥಿತಿ ಅಂದು ಹೇಗಿತ್ತು ಎಂದರೆ ಅವರಿಗೆ ಎಲ್ಲದಕ್ಕಿಂತ ಕೆಲಸವು ಅನಿವಾರ್ಯವಾಗಿತ್ತು. ಸಾಲಗಳನ್ನು ತೀರಿಸಲು ಹಣ ಗಳಿಸುವುದು ಅತ್ಯಗತ್ಯ ಎನಿಸಿತ್ತು. ಆಗಲೇ ಮೊಹಬ್ಬತೇ ಸಿ‌ನಿಮಾದ ಪ್ರಮುಖ ಪಾತ್ರಕ್ಕಾಗಿ ಯಶ್ ಚೋಪ್ರಾ ನಟನ ಹುಡುಕಾಟದಲ್ಲಿದ್ದಾಗ ಅಮಿತಾಬ್ ತಾವೇ ಅವರ ಬಳಿ ಹೋಗಿ ಆ ಪಾತ್ರವನ್ನು ಮಾಡುವ ಅವಕಾಶವನ್ನು ಕೇಳಿದ್ದರು. ಆಗ ಯಶ್ ಚೋಪ್ರಾ ಅಮಿತಾಬ್ ಅವರನ್ನು ತಮ್ಮ ಹೊಸ ಸಿನಿಮಾದ ಪಾತ್ರಕ್ಕೆ ಆಯ್ಕೆ ಮಾಡಿದ್ದರು.

ಆ ಸಮಯದಲ್ಲಿ ಅಮಿತಾಬ್ ಕೋಟಿಗಳ ಮೊತ್ತದಲ್ಲಿ ಸಾಲದಲ್ಲಿ ಮುಳುಗಿದ್ದರು. ಮಾದ್ಯಮ ವರದಿಗಳ ಪ್ರಕಾರ ಅವರು ಆಗ ಸುಮಾರು 90 ಕೋಟಿ ರೂ.ಗಳ ಸಾಲ ಮರುಪಾವತಿ ಮಾಡಬೇಕಿತ್ತು. ಅವರ ನಿರ್ಮಾಣ ಸಂಸ್ಥೆ ಎಬಿಸಿಎಲ್ ಮುಚ್ಚವ ಹಂತದಲ್ಲಿತ್ತು. ಸಾಲ ಕೊಟ್ಟವರು ಸಾಲ ಹಿಂತಿರುಗಿಸುವಂತೆ ಒತ್ತಡವನ್ನು ಹೇರುತ್ತಿದ್ದರು. ಅಮಿತಾಬ್ ಬಚ್ಚನ್ ಅವರೇ ಸಂದರ್ಶವೊಂದರಲ್ಲಿ ತನ್ನ 44 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಆ ದಿನಗಳು ಬಹಳ ಭ ಯಾ ನಕ ವಾಗಿತ್ತು ಎಂದಿದ್ದರು.

ಆದರೆ ಮೊಹಬ್ಬತೇ ಸಿನಿಮಾ ಅವರ ಅದೃಷ್ಟವನ್ನು ಮತ್ತೆ ಬದಲಿಸಿತು. ಅವರ ಪಾತ್ರವನ್ನು ಜನ ಮೆಚ್ಚಿದರು, ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯಿತು. ಅಮಿತಾಬ್ ಅವರಿಗೆ ಕೌನ್ ಬನೇಕಾ ಕರೋಡ್ ಪತಿ ನಿರೂಪಣೆ ಮಾಡುವ ಅವಕಾಶ ಅರಸಿ ಬಂತು. ಅಮಿತಾಬ್ ಅವರು ತಡ ಮಾಡದೇ ಅದನ್ನು ಒಪ್ಪಿಕೊಂಡರು, ಹೀಗೆ ದಿವಾಳಿತನದ ಕಡೆಗೆ ಮುಖ ಮಾಡಿದ್ದ ಅವರ ಜೀವನ ಮತ್ತೆ ಸರಿಯಾದ ದಾರಿ ಹಿಡಿಯಲು ಮೊಹಬ್ಬತೇ ಸಿನಿಮಾ ಪರೋಕ್ಷವಾಗಿ ಕಾರಣವಾಗಿತ್ತು.

Leave a Comment