90ರ ದಶಕದಲ್ಲೇ ಕ್ಯಾಮರಾ ಮುಂದೆ ಟಾಪ್ ಲೆಸ್ ಆಗಿ ಸಂಚಲನ ಸೃಷ್ಟಿಸಿದ್ದ ನಟಿ: ಈಗ ಸನ್ಯಾಸಿನಿ!!

Entertainment Featured-Articles Movies News

ಬಾಲಿವುಡ್ ಲೋಕದಲ್ಲಿ ಮಮತಾ ಕುಲಕರ್ಣಿ ಹೆಸರಿನ ನಟಿಯನ್ನು ಅಂದಿನ ಸಿನಿ ಪ್ರಿಯರು ಮರೆಯುವುದು ಅಸಾಧ್ಯವಾದ ಮಾತು. ಹೌದು, ಒಂದು ಕಾಲದಲ್ಲಿ ತನ್ನ ಹಾಟ್ ಲುಕ್‌ನಿಂದ ಇಡೀ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿ, ಪಡ್ಡೆಗಳ ಎದೆಯಲ್ಲಿ ಕಿಚ್ಚನ್ನು ಹೊತ್ತಿಸಿದ್ದ ನಟಿ ಇವರು. ತನ್ನ ವಿ ವಾ ದಾ ತ್ಮಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿ ಮಾಡುವ ನಟಿ ಮಮತಾ ಕುಲಕರ್ಣಿ ಅವರು ತಮ್ಮ ಚಿತ್ರಗಳಿಂದ ಹಾಗೂ ಆ ಚಿತ್ರಗಳಲ್ಲಿ ತಮ್ಮ ಬೋಲ್ಡ್ ಅಂಡ್ ಹಾಟ್ ಲುಕ್ ನಿಂದಾಗಿಯೇ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದ್ದರು ಎನ್ನುವುದು ಸುಳ್ಳಲ್ಲ.

90 ರ ದಶಕದಲ್ಲಿ ಬಹುತೇಕ ನಾಯಕಿಯರು ಕಿ ಸ್ಸಿಂ ಗ್ ದೃಶ್ಯಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದ ಕಾಲವದು. ಆಗಲೇ ಮಮತಾ ಕುಲಕರ್ಣಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು. ಆಕೆ ಬೋಲ್ಡ್ ದೃಶ್ಯಗಳನ್ನು ಮಾಡಲು ಹಿಂಜರಿಯಲಿಲ್ಲ. ಅದು ಮಾತ್ರವೇ ಅಲ್ಲದೇ ಆ ಕಾಲದಲ್ಲೇ ಮಮತಾ ಕುಲಕರ್ಣಿ ಒಂದು ಜನಪ್ರಿಯ ಮ್ಯಾಗಜಿನ್‌ಗಾಗಿ ಟಾಪ್‌ಲೆಸ್ ಆಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡೇ ಬಿಟ್ಟಿದ್ದರು. ಮಮತಾ ಕುಲಕರ್ಣಿಯ ಆ ಫೋಟೋ ಶೂಟ್ ದೊಡ್ಡ ಗದ್ದಲವನ್ನು ಸೃಷ್ಟಿಸಿತು.

ಈ ಘಟನೆಯ ನಂತರ ಮಮತಾ ಕುಲಕರ್ಣಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅಲ್ಲದೇ ಇಂಡಿಯನ್ ಆಬ್ಸೆನಿಟಿ ಕಾನೂನಿನಡಿಯಲ್ಲಿ ನಟಿಯ ಮೇಲೆ ಒಂದು ಪ್ರಕರಣವನ್ನು ಸಹ ದಾಖಲಿಸಲಾಯಿತು 2000ನೇ ಇಸವಿಯಲ್ಲಿ ನಟಿಯನ್ನು ಒಬ್ಬ ಆರೋಪಿಯಂತೆ ಬಿಂಬಿಸಲಾಗಿತ್ತು. ಆದರೆ ಮಮತಾ ಅವರ ಬಾಲಿವುಡ್ ವೃತ್ತಿ ಜೀವನವನ್ನು ಅತ್ಯಂತ ಯಶಸ್ವಿ ಎಂದು ಕರೆಯಲಾಗುವುದಿಲ್ಲ. ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರು ತಮ್ಮ ಚಲನಚಿತ್ರ ಚೈನಾ ಗೇಟ್‌ನಿಂದ ಅವರನ್ನು ಕೈಬಿಡಲು ನಿರ್ಧರಿಸಿದ್ದರು.

ಆದರೆ, ಭೂಗತ ಜಗತ್ತಿನಿಂದ ಬೆದರಿಕೆ ಬಂದ ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಯಿತು. ಡ್ರ ಗ್ ಡೀಲರ್ ವಿಕ್ಕಿ ಗೋಸ್ವಾಮಿಯನ್ನು ದುಬೈ ಜೈಲಿನಲ್ಲಿಯೇ ಮದುವೆಯಾಗಲು ನಿರ್ಧರಿಸಿದಾಗಲೂ ಮಮತಾ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದರು. ಬಾಲಿವುಡ್ ನಲ್ಲಿ ತನ್ನ ಫ್ಲಾಪ್ ಜರ್ನಿ ನಂತರ 2000 ದ ನಂತರ ಅವರು ಬಾಲಿವುಡ್ ನಿಂದ ದೂರವಾದರು. ಪ್ರಸ್ತುತ ಮಮತಾ ಸನ್ಯಾಸಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಕ್ರಿಯವಾಗಿದ್ದಾರೆ.

Leave a Reply

Your email address will not be published. Required fields are marked *