9ನೆಯದಲ್ಲ ಇದು 1ನೇ ಸೀಸನ್: ಬಿಗ್ ಬಾಸ್ ಹೊಸ ಪ್ರೋಮೋದ ಜೊತೆಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್

Entertainment Featured-Articles Movies News

ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಶೋ. ಆದ್ದರಿಂದಲೇ ಕನ್ನಡದಲ್ಲಿ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿದ್ದು, ಇದೀಗ ಒಂಬತ್ತನೇ ಸೀಸನ್ ಗೆ ಸಿದ್ಧತೆಗಳು ಆರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಈ ಬಾರಿ ಕನ್ನಡದಲ್ಲಿ ಒಂದಲ್ಲಾ ಎರಡು ಬಿಗ್ ಬಾಸ್ ಶೋ ಬರುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಈಗ ಅದೇ ಪ್ರಯತ್ನ ಕನ್ನಡದಲ್ಲಿ ಸಹಾ ನಡೆದಿದೆ. ಈ ಬಾರಿ ಟಿವಿ ಬಿಗ್ ಬಾಸ್ ಗಿಂತ ಮೊದಲೇ ಕನ್ನಡದಲ್ಲಿ ವೂಟ್ ನಲ್ಲಿ ಬಿಗ್ ಬಾಸ್ ಜನರ ಮುಂದೆ ಬರಲಿದೆ. ನಿನ್ನೆಯಷ್ಟೇ ಇದರ ಹೊಸ ಪ್ರೋಮೋ ಸಹಾ ಬಿಡುಗಡೆ ಆಗಿದೆ. ಬಹಳ ಅದ್ದೂರಿಯಾಗಿ ಮೂಡಿ ಬಂದಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಇದು ಒಂಬತ್ತನೇ ಸೀಸನ್ ಅಲ್ಲ, ಮೊದಲ ಸೀಸನ್ ಎಂದಿದ್ದು, ಅನಂತರ ಓಟಿಟಿಯಲ್ಲಿ ಮೊದಲ ಸೀಸನ್ ಎಂದು ಹೇಳುವ ಮೂಲಕ ಜನರ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಪ್ರೋಮೋ ನೋಡಿ ಸುದೀಪ್ ಅವರ ಅಭಿಮಾನಿಗಳು ಖುಷಿಗೊಂಡಿದ್ದಾರೆ.

ಇದೇ ವೇಳೆ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ವಾಹಿನಿಯು, ಫಸ್ಟ್ ಟೈಮ್ ಟಿವಿಗೆ ಮೊದಲು ಒಂದು ಒಟಿಟಿ ಸೀಸನ್! ವಾರ ಆರು ಮಜಾ ನೂರಕ್ಕೆ ನೂರು!!, ಗ್ರ್ಯಾಂಡ್ ಪ್ರಿಮಿಯರ್ ಆಗಸ್ಟ್ 6, ಸಂಜೆ 7 ಕ್ಕೆ ಎಂದು ಬರೆದುಕೊಂಡು ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರೋಮೋ ನೋಡಿದ ನಂತರ ಪ್ರೇಕ್ಷಕರಿಗೆ ಓಟಿಟಿ ಕನ್ನಡ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ ಎಂದು ತಿಳಿಯುವ ಕುತೂಹಲದಲ್ಲಿ ಇದ್ದಾರೆ.

ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಯಾವುದೇ ಸೆನ್ಸಾರ್ ಇಲ್ಲದೇ ಇರುವ ಸ್ಪರ್ಧಿಗಳು ಆಡಿದ ಮಾತುಗಳಿಗೆ ಫಿಲ್ಟರ್ ಇಲ್ಲದೇ ಪ್ರಸಾರವಾಗಿತ್ತು. ಸ್ಪರ್ಧಿಗಳು ಆಡಿದ ಮಾತುಗಳು ವೈರಲ್ ಆಗಿ ಸಾಕಷ್ಟು ಚರ್ಚೆಗಳನ್ನು ಸಹಾ ಹುಟ್ಟು ಹಾಕಿತ್ತು. ಈಗ ಕನ್ನಡದಲ್ಲಿ ಸಹಾ ಓಟಿಟಿಯಲ್ಲಿ ಬಿಗ್ ಬಾಸ್ ಬರುತ್ತಿರುವುದರಿಂದ ಇಲ್ಲಿ ಸಹಾ ಬಿಗ್ ಬಾಸ್ ಯಾವ ಮಟ್ಟಕ್ಕೆ ಸದ್ದು ಮಾಡಲಿದೆ ಎನ್ನುವುದು ಆಸಕ್ತಿಯನ್ನು ಕೆರಳಿಸಿದೆ ಮತ್ತು ಓಟಿಟಿ ಬಿಗ್ ಬಾಸ್ ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಕಾದು ನೋಡಬೇಕಿದೆ.‌

Leave a Reply

Your email address will not be published.