83 ಮೂವಿ: ಸಿನಿಮಾಕ್ಕೆ ನಷ್ಟ, ರಣವೀರ್ ಸಿಂಗ್ ಸಂಭಾವನೆಗೆ ಬಿತ್ತು ಪೆಟ್ಟು, ನಟನ ಸಂಭಾವನೆ ಕೈ ಬಿಡುವ ಸಾಧ್ಯತೆ!!

Written by Soma Shekar

Published on:

---Join Our Channel---

ಭಾರತೀಯ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರು ಕ್ರಿಕೆಟ್ ಲೆಜೆಂಡ್ ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ. 1983 ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಯ ಬಗ್ಗೆ, ಅ್ರ ಸುತ್ತ ಹೆಣೆದ ಕಥೆಯನ್ನಾಧರಿಸಿ ಸಿದ್ಧವಾದ ಸಿನಿಮಾ 83. ಈ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಬಾಲಿವುಡ್ ನಟ ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಲೆಜೆಂಡರಿ ಆಟಗಾರ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನಷ್ಟು ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ಸಿನಿಮಾ ಪ್ರಚಾರ ಕಾರ್ಯ ಕೂಡಾ ಜೋರಾಗಿಯೇ ನಡೆದಿತ್ತು.

ಆದರೆ ಸಿನಿಮಾ ಬಿಡುಗಡೆಯ ನಂತರ ನಿರೀಕ್ಷೆಗಳೇಕೋ ಸುಳ್ಳಾದವು. ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವತ್ತ ಸಿನಿಮಾ ಏಕೋ ಸೋತಿತು. ಒಂದು ಕಡೆ ಓಮಿಕ್ರಾನ್ ನ ಭೀತಿಯಿಂದ ಜನರು ಸಿನಿಮಾ ಥಿಯೇಟರ್ ಕಡೆ ಬರುತ್ತಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ಸಿನಿಮಾ ರೀತಿಯಿಲ್ಲ ಒಂದು ಡಾಕ್ಯುಮೆಂಟರಿ ತರ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. ಮತ್ತೊಂದು ಕಡೆ ಅಕ್ಷಯ್ ಕುಮಾರ್ ಹಾಗೂ ತಮಿಳಿನ ನಟ ಧನುಷ್ ಅಭಿನಯದ ಅತರಂಗೀ ರೇ ಬಿಡುಗಡೆ ಕೂಡಾ ಈ ಸಿನಿಮಾದ ಹಿಂದೇಟಿಗೆ ಕಾರಣವಾಗಿದೆ ಎನ್ನಲಾಗಿದೆ.

ಈ ಸಿನಿಮಾದ ಬಂಡವಾಳ 125 ಕೋಟಿ ರೂ.ಗಳು ಎನ್ನಲಾಗಿದ್ದು, ಸಿನಿಮಾ ಬಿಡುಗಡೆ ನಂತರ ಆರು ದಿನಗಳ ಅವಧಿಯಲ್ಲಿ ಸಿನಿಮಾ ಕೇವಲ 106 ಕೋಟಿ ರೂ.ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಗಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರಿಗೆ ಅವರ ಪಾತ್ರ ನಿರ್ವಹಣೆಗೆ 20 ಕೋಟಿ ರೂ. ಸಂಭಾವನೆಯನ್ನು ನಿಗಧಿ ಮಾಡಲಾಗಿತ್ತು. ಆದರೆ ಆ ಮೊತ್ತ ಸಂಪೂರ್ಣವಾಗಿ ಪಾವತಿ ಮಾಡಲಾಗಿರಲಿಲ್ಲ. ಈಗ ಸಿನಿಮಾ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಅವರ ಉಳಿದ ಸಂಭಾವನೆಯನ್ನು ಕೈ ಬಿಡಲಾಗುವುದು ಎನ್ನಲಾಗುತ್ತಿದೆ.

ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ ಸಿನಿಮಾ ನಿರ್ದೇಶನ ಮಾಡಿದ್ದ ಕಬೀರ್ ಖಾನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಅವರು ಕಪಿಲ್ ದೇವ್ ಪಾತ್ರ ಮಾಡಿದರೆ, ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಸಿಂಗ್ ಅವರ ಪತ್ನಿ ಸ್ಟಾರ್ ನಟಿ ದೀಪಿಕಾ ಪಡುಕೋಣೆ ನಿರ್ವಹಿಸಿರುವುದು ಮತ್ತೊಂದು ವಿಶೇಷವಾಗಿದೆ.

Leave a Comment