80 ನೇ ವಯಸ್ಸಿನಲ್ಲಿ ಕೇರಳದಿಂದ ಲಡಾಖ್ ಗೆ ಸೈಕಲ್ ನಲ್ಲಿ ಪ್ರವಾಸ: ಇವರ ಸಾಮರ್ಥ್ಯ ಕಂಡು ಜೈ ಹೋ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

ಭಾರತದ ನೆರೆಯ ರಾಷ್ಟ್ರವಾದ ಆಫ್ಘಾನಿಸ್ತಾನ ದಲ್ಲಿ ತಾಲಿಬಾನಿಗಳ ಆಡಳಿತ ಬಂದ ಮೇಲೆ ಎಲ್ಲೆಡೆ ಒಂದು ಭೀ ತಿಯ ಹಾಗೂ ಆ ತಂಕದ ವಾತಾವರಣ ನೆಲೆಗೊಂಡಿದೆ. ಆದರೆ ಈ ಮಧ್ಯೆ ಕೇರಳದ 80 ವರ್ಷದ ವ್ಯಕ್ತಿಯೊಬ್ಬರು ಭಾರತದ ಶಕ್ತಿ ಏನೆಂಬುದನ್ನು ಪ್ರದರ್ಶಿಸುವತ್ತ ಅಡಿಯಿಟ್ಟಿದ್ದಾರೆ. ಕೇರಳದ ತ್ರಿಶೂರ್ ನ ನಿವಾಸಿಯಾಗಿರುವ ಜೊಸೆಟನ್ ಅವರು ಸುರಿಯುವ ಹಿಮದ ನಡುವೆಯೂ ಹಿಮಾಲಯದ ಉದ್ದಗಲಗಳನ್ನೇ ಅಳೆದರೇನೋ ಎನ್ನುವಂತೆ ತಮ್ಮ ಪಯಣವನ್ನು ನಡೆಸಿದ್ದು, ದೊಡ್ಡ ಸುದ್ದಿಯಾಗಿದ್ದಾರೆ.

ಜೊಸೆಟನ್ ಅವರು ತಮ್ಮ ಪಯಣ ಕ್ಕೆ ಬಳಿಸಿದ ವಾಹನ ಸೈಕಲ್‌. ಹೌದು ಜೊಸೆಟನ್ ಅವರು ಕೇರಳದಿಂದ ಲಡಾಖ್ ಗೆ ಸುಮಾರು 4,500 ಕಿಮೀ ದೂರವನ್ನು ಸೈಕಲ್ ನಲ್ಲೇ ಕ್ರಮಿಸಿದ್ದಾರೆ. ತಮ್ಮ 80 ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಈ ಸಾಹಸಯಾತ್ರೆ ನಡೆದಿದ್ದು, ಇದಕ್ಕೆ ಅವರ ಸಹೋದ್ಯೋಗಿ ಗೋಕುಲ್ ಪಿ ಆರ್ ಅವರು ಸಹಾ ಬೆಂಬಲವನ್ನು ನೀಡಿದ್ದಾರೆ. ಜೋಸ್ ಅವರು ವಿಶ್ವದ ಅತಿ ಎತ್ತರದ ಮೊಟರೇಬಲ್ ರಸ್ತೆಯಾದ ಖುರ್ದುಂಗ್ಲಾದಿಂದ ಸುಮಾರು 34 ಕಿಮೀ ದೂರದಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಶನಿವಾರ ಸಂಭವಿಸಿದ ಹಿಮಪಾತದಿಂದಾಗಿ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲಾಗಿಲ್ಲ. ಜೋಸ್ ಅವರ ಜೊತೆಯಲ್ಲಿ ಇರುವ ಗೋಕುಲ್ ಅವರು 2013 ರಲ್ಲಿ ಸಹಾ ಇಂತಹುದೊಂದು ಯಾತ್ರೆಯನ‌್ನು ಮಾಡಿದ್ದರು ಎನ್ನಲಾಗಿದೆ. ಗೋಕುಲ್ ಅವರ ಪತ್ನಿ ಮತ್ತು 14 ವರ್ಷದ ಮಗಳು ವಿಮಾನದಲ್ಲಿ ಲಡಾಖ್ ಗೆ ತಲುಪಿ, ಗೋಕುಲ್ ಅವರನ್ನು ಸೇರಿಕೊಂಡಿದ್ದಾರೆ. ತ್ರಿಶೂರ್ ನ ಮೆಡಿಕಲ್ ಕಾಲೇಜು ಹಾಸ್ಪಿಟಲ್ ನಿಂದ ನಿವೃತ್ತಿಯನ್ನು ಪಡೆದಿದ್ದಾರೆ ಜೋಸ್.

ಅವರು ಸೈಕಲ್ ನಲ್ಲಿ ತನ್ನ ಈ ಪ್ರವಾಸದ ಅವಧಿಯಲ್ಲಿ ತನಗೆ ಆರೋಗ್ಯದಲ್ಲಿ ಯಾವುದೇ ತೀವ್ರ ಎನಿಸುವ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದ್ದಾರೆ. ಲೇಹ್ ತಲುಪಿದಾಗ ಜೋಸ್ ಅವರಿಗೆ ಆಮ್ಲಜನಕ ಕೊರತೆಯಾದಾಗ ಸ್ನೇಹಿತರು ಅವರಿಗೆ ಕೃತಕ ಆಮ್ಲಜನಕ ನೀಡಿದ್ದರು. ಶಾಲಾ ದಿನಗಳಿಂದಲೇ ಸೈಕ್ಲಿಂಗ್ ಮಾಡುತ್ತಿದ್ದ ಜೋಸ್ ಅವರ ಜೀವನದಲ್ಲಿ ಈ ಹಿಂದೆಯೂ ಸೈಕಲ್ ನಲ್ಲಿ ಪ್ರಯಾಣ ಮಾಡಿದ್ದಾರಾದರೂ, ಈಗ ಮಾಡುತ್ತಿರುವುದು ಮೊದಲ ದೀರ್ಘ ಸೈಕಲ್ ಪ್ರವಾಸವಾಗಿದೆ.

ಸೈಕ್ಲಿಂಗ್ ಮಾತ್ರವೇ ಅಲ್ಲದೇ ಜೋಸ್ ಅವರು ಮ್ಯಾರಥಾನ್ ಮತ್ತು ಸ್ವಿಮ್ಮಿಂಗ್ ನಲ್ಲೂ ಸಹಾ ಭಾಗವಹಿಸುತ್ತಾರೆ. ಜೋಸ್ ಅವರ ಪತ್ನಿ ಹಾಗೂ ಮೂವರು ಮಕ್ಕಳು ಜೋಸ್ ಅವರ ಸಾಧನೆಯನ್ನು ಕಂಡು ಬಹಳ ಹೆಮ್ಮೆ ಪಡುತ್ತಾರೆ. ಅದೇ ವೇಳೆ ಅವರ ಸುರಕ್ಷತೆ ಮತ್ತು ಕಾಳಜಿಯ ಬಗ್ಗೆ ಅವರು ಸಾಕಷ್ಟು ಗಮನವನ್ನು ಹರಿಸುತ್ತಿದ್ದಾರೆ.‌ ಜೋಸ್ ಜೊತೆಗಿರುವ ಗೋಕುಲ್ ಅವರ ಸಹೋದರ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದಾರೆ.

ಗೋಕುಲ್ ಅವರ ಸಹೋದರನ ಸಹಾಯದಿಂದಲೇ ಸೈಕಲ್ ಪ್ರವಾಸದಲ್ಲಿ ಹೆಚ್ಚಿನ ಭದ್ರತೆಯಿರುವ ಸೂಕ್ಷ್ಮ ಪ್ರದೇಶಗಳನ್ನು ಪ್ರವೇಶಿಸಲು ಅನುಮತಿ ಸಿಕ್ಕಿದೆ. ಒಂದೆಡೆ ತಾಲಿಬಾನಿಗಳು ತಮ್ಮ‌ ದೇಶದ ಮಕ್ಕಳ ಕೈಗೆ ಬಂದೂಕು ನೀಡುವಾಗ, ಭಾರತದ ಹಿರಿಯರೊಬ್ಬರು ನಮ್ಮ ದೇಶದ ಹಿರಿಯರ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ.

Leave a Comment