8 ವರ್ಷದ ಬಾಲಕ ಹೇಳಿದ ಪುನರ್ಜನ್ಮದ ಕಥೆ: ತನ್ನ ಹಿಂದಿನ ಜನ್ಮದ ರಹಸ್ಯ ಬಿಚ್ಚಿಟ್ಟ ಬಾಲಕ, ಜನರೆಲ್ಲಾ ತಬ್ಬಿಬ್ಬು

Written by Soma Shekar

Published on:

---Join Our Channel---

ಇಂದಿನ ಆಧುನಿಕ ಸಮಾಜದಲ್ಲಿ ಪುನರ್ಜನ್ಮದ ಕುರಿತಾಗಿ ಮಾತನಾಡಿದರೇ ಜನ ಅದನ್ನು ಅಂಧ ವಿಶ್ವಾಸ ಅಥವಾ ಕಾಲ್ಪನಿಕ ಎಂದು ಹೀಗಳೆಯುತ್ತಾರೆ. ವೈಜ್ಞಾನಿಕತೆಯ ಬಹಳಷ್ಟು ಮುಂದುವರೆದಿರುವ ಆಧುನಿಕ ಕಾಲದಲ್ಲಿ ಪುನರ್ಜನ್ಮ ಎನ್ನುವ ವಿಷಯವನ್ನು ಒಪ್ಪಿಕೊಳ್ಳಲು ಬಹಳಷ್ಟು ಜನ ಸಿದ್ಧರಾಗಿಲ್ಲ. ಆದರೆ ಉತ್ತರ ಪ್ರದೇಶದ ಮೈನ್ಪುರಿ ಎನ್ನುವ ಸ್ಥಳದಲ್ಲಿ ಪುನರ್ಜನ್ಮದ ಒಂದು ಕಥೆ ಇದೀಗ ಬಹಳಷ್ಟು ಸುದ್ದಿಯಾಗಿದೆ. ಈ ಕಥೆಯನ್ನು ಕೇಳಿ ಪ್ರತಿಯೊಬ್ಬರೂ ಆಶ್ಚರ್ಯ ಪಡುತ್ತಿದ್ದಾರೆ. ಉತ್ತರಪ್ರದೇಶದ ಮೈನ್ಪುರ ಜಿಲ್ಲೆಯ ನಗ್ಲಾ ಸಲಾಹಿ ಎನ್ನುವ ಗ್ರಾಮದಲ್ಲಿ ಇಂತಹದೊಂದು ವಿಚಿತ್ರವಾದ ಘಟನೆಯ ನಡೆದಿದೆ. ಈ ಗ್ರಾಮದ ದಂಪತಿಯ ಮಗ ಎಂಟು ವರ್ಷಗಳ ಹಿಂದೆ ನಿಧನನಾಗಿದ್ದು ,ಇದೀಗ ಸಮೀಪದ ಗ್ರಾಮವೊಂದರ ಎಂಟು ವರ್ಷದ ಬಾಲಕ ತಾನೇ ಅವರ ಮಗ ಎಂದು ಹೇಳುತ್ತಿದ್ದಾನೆ.

ಹೌದು, ನಗ್ಲಾ ಸಲಾಹಿ ಗ್ರಾಮದ ಪ್ರಮೋದ್ ಕುಮಾರ್ ಶ್ರೀವಾತ್ಸವ ಎನ್ನುವವರ 13 ವರ್ಷದ ಮಗ ರೋಹಿತ್ ಎಂಟು ವರ್ಷಗಳ ಹಿಂದೆ ನಿಧನರಾಗಿದ್ದಾನೆ. ಈಗ ಈ ಗ್ರಾಮದ ಹತ್ತಿರದಲ್ಲೇ ಇರುವ ಅಮರಸಿಂಹ ಗ್ರಾಮದಲ್ಲಿನ ರಾಮನರೇಶ್ ಶಂಖ್ವಾರ್ ಎನ್ನುವವರ ಎಂಟು ವರ್ಷದ ಮಗ ಚಂದ್ರವೀರ್ ತಾನೇ ಪ್ರಮೋದ್ ಕುಮಾರ್ ಅವರ ಮಗ ರೋಹಿತ್ ಎಂದು ಹೇಳುತ್ತಿದ್ದಾನೆ. ಘಟನೆಯ ವಿವರಗಳಿಗೆ ಹೋದರೆ ಕೆಲವು ದಿನಗಳ ಹಿಂದೆ ಎಂಟು ವರ್ಷದ ಚಂದ್ರವೀರ್ ಪ್ರಮೋದ್ ಅವರ ಮನೆಗೆ ಬಂದಿದ್ದು, ಪ್ರಮೋದ್ ಹಾಗೂ ಅವರ ಪತ್ನಿಯನ್ನು ಅಪ್ಪ-ಅಮ್ಮ ಎಂದು ಕರೆದಿದ್ದಾನೆ. ಪ್ರಮೋದ್ ಹಾಗೂ ಅವರ ಪತ್ನಿ ಬಾಲಕ ತಮ್ಮನ್ನು ಅಪ್ಪ ಅಮ್ಮ ಎಂದು ಕರೆದಿದ್ದನ್ನು ನೋಡಿ ಅವರಿಬ್ಬರು ತಬ್ಬಿಬ್ಬಾಗಿದ್ದಾರೆ.

ಅನಂತರ ಎಂಟು ವರ್ಷದ ಬಾಲಕ ತಾನೇ ಅವರ ಮಗ ರೋಹಿತ್ ಎಂದೂ, ಈಗ ಚಂದ್ರವೀರನಾಗಿ ಮತ್ತೆ ಹುಟ್ಟಿ ಬಂದಿರುವುದಾಗಿ ಹೇಳಿದ್ದಾನೆ. ತನ್ನ ಹಿಂದಿನ ಜನ್ಮದ ಹಲವು ಘಟನೆಗಳ ಕುರಿತಾಗಿ ಮಾತನಾಡಿದ್ದಾನೆ. ಕಾಲುವೆಯಲ್ಲಿ ತಾನು ಸ್ನಾನ ಮಾಡಲು ಹೋದಾಗ, ಕಾಲು ಜಾರಿ ನೀರಿಗೆ ಬಿದ್ದು ಸತ್ತ ವಿಷಯವನ್ನು ತಿಳಿಸಿದ್ದಾನೆ. ಇದನ್ನೆಲ್ಲಾ ಕೇಳಿ ರೋಹಿತ್ ನ ತಾಯಿ ಚಂದ್ರವೀರ್ ನನ್ನು ತಬ್ಬಿಕೊಂಡು ಅತ್ತಿದ್ದಾರೆ. ಈ ಪುನರ್ಜನ್ಮದ ವಿಷಯ ಕಾಡ್ಗಿಚ್ಚಿನಂತೆ ಸುತ್ತಮುತ್ತಲ ಗ್ರಾಮಗಳಿಗೆ ಹರಡಿದ್ದು, ಜನರು ಗುಂಪು ಗುಂಪಾಗಿ ಪ್ರಮೋದ್ ಕುಮಾರ್ ಶ್ರೀವಾತ್ಸವ ಅವರ ಮನೆ ಕಡೆಗೆ ಬಂದಿದ್ದಾರೆ.

ಜನ ಗುಂಪಾಗಿರುವುದು ನೋಡಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾಶ್ಚಂದ್ರ ಯಾದವ್ ಅವರು ಪ್ರಮೋದ್ ಕುಮಾರ್ ಅವರ ಮನೆಗೆ ಬಂದಾಗ, ಬಾಲಕ ಚಂದ್ರವೀರ್ ಅವರ ಕಾಲಿಗೆ ನಮಸ್ಕರಿಸಿ ಇವರು ನಮ್ಮ ಸುಭಾಷ್ ಮಾಸ್ಟರ್ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿ ಜನ ದಂಗಾಗಿದ್ದಾರೆ. ಅಲ್ಲದೇ ಬಾಲಕ ಊರಿನ ಇನ್ನೂ ಅನೇಕ ಜನರನ್ನು ಗುರುತಿಸಿದ್ದಾನೆ. ಶಾಲೆಯಲ್ಲಿ ತಾನು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನು ತೋರಿಸಿದ್ದಾನೆ. ಹೀಗೆ ರೋಹಿತ್ ಕುರಿತಾಗಿ ಹಲವು ವಿಷಯಗಳನ್ನು ಹೇಳಿದ್ದು ಕೇಳಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.

ಚಂದ್ರವೀರ್ ಅವರ ತಂದೆ ತಾಯಿ ತಮ್ಮ ಮಗನು ಹೇಳಿದ್ದು ಸುಳ್ಳು ಕಥೆ ಜನ ನಂಬದೇ ಹೋದರೂ ಪರವಾಗಿಲ್ಲ. ತಮ್ಮ ಮಗ ರೋಹಿತ್ ನ ಪುನರ್ಜನ್ಮ ಆಗಿದ್ದರೆ, ಆತ ಇಷ್ಟಪಟ್ಟರೆ ಪ್ರಮೋದ್ ಕುಮಾರ್ ಶ್ರೀವಾತ್ಸವ ಅವರ ಮನೆಯಲ್ಲೇ ಇರಬಹುದು ಎನ್ನುವ ಮಾತನ್ನು ಹೇಳಿದ್ದಾರೆ. ಚಂದ್ರವೀರ್ ನ ತಾಯಿ ಕೂಡಾ ಜನರ ಬಗ್ಗೆ ನನಗೆ ಚಿಂತೆ ಇಲ್ಲ, ನನ್ನ ಮಗ ಎರಡು ಮನೆಯಲ್ಲಿ ಬೇಕಾದರೂ ಇರಲಿ ಎನ್ನುವ ಮಾತನ್ನು ಹೇಳುವ ಮೂಲಕ ಗಮನಸೆಳೆದಿದ್ದಾರೆ ಎನ್ನಲಾಗಿದೆ.

Leave a Comment