7ನೇ ತರಗತಿಯಲ್ಲೇ ಲವ್, ಆದ್ರೆ ನಂತರ ಆಗಿದ್ದೇ ಬೇರೆ: ಸಾಯಿ ಪಲ್ಲವಿ ಬಹಿರಂಗವಾಗಿ ಹೇಳಿದ ತನ್ನ ಪ್ರೇಮ ಕಹಾನಿ

Entertainment Featured-Articles Movies News

ಬಹಳಷ್ಟು ಜನ ಸಿನಿಮಾ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರು ಮಾತ್ರವೇ ಅಲ್ಲದೆ, ಬೇರೆ ಬೇರೆ ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ವಿಚಾರವಾಗಿ ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳ ವಿವಾಹ ಮತ್ತು ಲವ್ ಸ್ಟೋರಿ ಎಂದರೆ ಕುತೂಹಲ ದುಪ್ಪಟ್ಟಾಗಿರುತ್ತದೆ. ಆದ್ದರಿಂದಲೇ ಸಿನಿಮಾ ಸೆಲೆಬ್ರಿಟಿಗಳ ಸಂದರ್ಶನಗಳ ವಿಡಿಯೋಗಳು ಅಥವಾ ವರದಿಗಳು ಬಹಳ ಬೇಗ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ.

ಇದೀಗ ನಟಿ ಸಾಯಿ ಪಲ್ಲವಿ ಅವರ ಅಂತಹದೇ ಒಂದು ಆಸಕ್ತಿಕರ ವೈಯಕ್ತಿಕ ವಿಚಾರ ಕುರಿತಾದ ವಿಡಿಯೋ ಬಂದು ವೈರಲ್ ಆದ ನಂತರ ಎಲ್ಲೆಡೆ ಅದೇ ಸುದ್ದಿ ಹರಿದಾಡಿ ಅಚ್ಚರಿಯನ್ನು ಉಂಟು ಮಾಡಿದೆ. ಸಹಜ ಸುಂದರಿ ನಟಿ ಸಾಯಿ ಪಲ್ಲವಿ ತಮ್ಮ ಸಿನಿಮಾಗಳಿಗೆ ನಿನ್ನ ಪಾತ್ರ ಹಾಗೂ ಡ್ಯಾನ್ಸ್ ನಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ದಕ್ಷಿಣದ ಸ್ಟಾರ್ ನಟಿಯಾಗಿರುವ ಅವರು ತೆಲುಗು ಚಿತ್ರರಂಗದಲ್ಲಿ ಲೇಡಿ ಪವರ್ ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ನಟಿ ಸಾಯಿ ಪಲ್ಲವಿ ಅವರು ನಟಿಸಿರುವ ಹೊಸ ಸಿನಿಮಾ ಗಾರ್ಗಿ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ, ನಟಿ ಸಾಯಿ ಪಲ್ಲವಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ನೆಟ್ ಫ್ಲಿಕ್ಸ್ ಆರಂಭ ಮಾಡಿರುವ ಹೊಸ ಶೋ, ವಿಲೇಜ್ ಟಾಕ್ ಶೋ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ವೈಯಕ್ತಿಕ ಜೀವನದ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಸಾಯಿ ಪಲ್ಲವಿ ಅವರು ಮೊದಲ ಬಾರಿಗೆ ತಮ್ಮ ಪ್ರೇಮಕಥೆಯನ್ನು ಹೇಳಿಕೊಂಡಿದ್ದು, ಇದು ಅವರ ಅಭಿಮಾನಿಗಳು ಹಾಗೂ ವೀಕ್ಷಕರ ಗಮನವನ್ನು ವಿಶೇಷವಾಗಿ ಸೆಳೆದಿದೆ. ಸಾಯಿ ಪಲ್ಲವಿ ತಮ್ಮ ಜೀವನದಲ್ಲಿ ತನಗೆ ಫಸ್ಟ್ ಲವ್ ಯಾವಾಗ ಆಗಿತ್ತು ಎನ್ನುವ ವಿಚಾರವನ್ನು ಹೇಳಿದ್ದಾರೆ. ಸಾಯಿ ಪಲ್ಲವಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ತಾನು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ.

ಆಲ್ಲದೇ ಆಗ ಆ ಹುಡುಗನಿಗಾಗಿ ತಾನೊಂದು ಲವ್ ಲೆಟರ್ ಬರೆದಿದ್ದೆ, ಆದರೆ ಆ ಲವ್ ಲೆಟರ್ ವಿಚಾರವು ತಂದೆ ತಾಯಿಗೆ ಗೊತ್ತಾಗಿಹೋಯಿತು. ಅನಂತರ ತಂದೆ-ತಾಯಿ ಈ ವಿಚಾರವಾಗಿ ತನಗೆ ಒಂದೆರಡು ಏಟು ಗಳನ್ನು ಸಹಾ ಕೊಟ್ಟಿದ್ದರು ಎಂದು ಸಾಯಿಪಲ್ಲವಿ ಹೇಳಿದ್ದು, ಅದಾದ ನಂತರ ತಾನು ಪ್ರೀತಿ-ಪ್ರೇಮದ ವಿಚಾರವಾಗಿ ಎಂದು ಆಲೋಚನೆ ಮಾಡಲಿಲ್ಲ ಎಂದು ತನ್ನ ಮೊದಲ ಪ್ರೇಮದ ವಿಷಯವನ್ನು ಹಂಚಿಕೊಂಡಿದ್ದಾರೆ.

ನಟಿ ಸಾಯಿ ಪಲ್ಲವಿ ಮೊಟ್ಟ ಮೊದಲ ಬಾರಿಗೆ ತನ್ನ ಲವ್ ಸ್ಟೋರಿ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಅವರು ಈ ವಿಚಾರವನ್ನು ಹಂಚಿಕೊಂಡ ನಂತರ ಸಹಜವಾಗಿಯೇ ಅನೇಕರಲ್ಲಿ ಅಂದು ಸಾಯಿ ಪಲ್ಲವಿ ತಮ್ಮ ಬಾಲ್ಯದಲ್ಲಿ ಲವ್ ಲೆಟರ್ ಬರೆದಂತಹ ಆ ಹುಡುಗ ಯಾರಾಗಿರಬಹುದು ಎನ್ನುವ ಕುತೂಹಲ ಮೂಡಿದೆ. ಈ ವಿಚಾರವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆ ಸಾಯಿಪಲ್ಲವಿ ಹೇಳಿದಂತಹ ಅವರ ಫಸ್ಟ್ ಲವ್ ಕಥೆ ವಿಚಾರ ಭರ್ಜರಿ ವೈರಲ್ ಆಗಿದೆ.

Leave a Reply

Your email address will not be published.