66 ರ ಹರೆಯದಲ್ಲಿ 38 ರ ಶಿಕ್ಷಕಿಯೊಡನೆ 2ನೇ ಮದುವೆಗೆ ಸಜ್ಜಾದ ಭಾರತದ ಮಾಜಿ ಕ್ರಿಕೆಟ್ ಆಟಗಾರ

Entertainment Featured-Articles News Sports

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ಅವರು ತಮ್ಮ ಬಹುಕಾಲದ ಗೆಳತಿ ಬುಲ್ ಬುಲ್ ಸಹಾ ಅವರೊಡನೆ ಮದುವೆಯಾಗಲು ಸಿದ್ಧವಾಗಿದ್ದಾರೆ. ಅರುಣ್ ಲಾಲ್ ಅವರಿಗೀಗ 66 ವರ್ಷ ವಯಸ್ಸಾಗಿದ್ದು, ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಬರುವ ಮೇ 2 ರಂದು ಅವರು ತಮ್ಮ ಗೆಳತಿ 38 ವರ್ಷ ವಯಸ್ಸಿನ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬುಲ್ ಬುಲ್ ಸಹಾ ಅವರನ್ನು ವಿವಾಹವಾಗುವ ಮೂಲಕ ಮತ್ತೊಮ್ಮೆ ಹೊಸ ವೈವಾಹಿಕ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ.

ವರದಿಗಳ ಅನ್ವಯ ಅರುಣ್ ಲಾಲ್ ಮತ್ತು ಬುಲ್ ಬುಲ್ ಸಹಾ ಇಬ್ಬರೂ ಸಹಾ ಬಹುಕಾಲದಿಂದ ಸಂಬಂಧವನ್ನು ಹೊಂದಿದ್ದರು. ಅರುಣ್ ಲಾಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅವರ ಪತ್ನಿಯ ಹೆಸರು ರೀನಾ ಎಂದಾಗಿದೆ. ಈಗ ಅರುಣ್ ಲಾಲ್ ಅವರು ತಮ್ಮ ಮೊದಲ ಪತ್ನಿ ರೀನಾ ಅವರ ಸಮ್ಮತಿಯನ್ನು ಪಡೆದುಕೊಂಡ‌ ನಂತರವೇ ಬುಲ್ ಬುಲ್ ಸಹಾ ಅವರೊಡನೆ ಎರಡನೆಯ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ.

ಲಾಲ್ ಅವರು ಮೊದಲ ಪತ್ನಿ ಪ್ರಸ್ತುತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಲಾಲ್ ಅವರು ಆಕೆಯ ಜೊತೆಯಲ್ಲೇ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಲಾಲ್ ಅವರ ಎರಡನೇ ಮದುವೆಯ ಆಮಂತ್ರಣ ಪತ್ರದ ಫೋಟೋ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಂದಿನ ತಿಂಗಳು ಅರುಣ್ ಲಾಲ್ ಮತ್ತು ಬುಲ್ ಬುಲ್ ಸಹಾ ಅವರು ಕೊಲ್ಕತ್ತಾದ ಪೀರ್ಲೆಸ್ ಇನ್ ಎಸ್ ಪ್ಲೆನೇಡ್ ನಲ್ಲಿ ಹೊಸ ಜೀವನಕ್ಕೆ ಅಡಿಯಿಡಲಿದ್ದಾರೆನ್ನಲಾಗಿದೆ.

ಇನ್ನು ಅರುಣ್ ಲಾಲ್ ಅವರ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಅವರು ಭಾರತಕ್ಕಾಗಿ 29 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 850. ರನ್ ಗಳಿಸಿರುವ ಅವರು, 7 ವಿಕೆಟ್ ಗಳನ್ನು ಪಡೆದಿದ್ದಾರೆ. 2016 ರಲ್ಲಿ ಅವರು ದವಡೆಯ ಕ್ಯಾನ್ಸರ್ ನಿಂದ ಬಳಲಿದ್ದರು ಎನ್ನಲಾಗಿದ್ದು,‌ ಅನಂತರ ಅವರು ದೇಶೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published.