ಮದುವೆಗೆ ಸಿದ್ಧವಾದ ಬಾಲಿವುಡ್ ಲವ್ ಬರ್ಡ್ಸ್: ವಿಕ್ಕಿ, ಕತ್ರಿನಾ ಮದುವೆ ಸಖತ್ ಸದ್ದು ಮಾಡಿರೋದ್ಯಾಕೆ??

Written by Soma Shekar

Published on:

---Join Our Channel---

ಬಾಲಿವುಡ್ ನ ಸುಂದರ ಹಾಗೂ ಕ್ಯೂಟ್ ಕಪಲ್ ಎಂದೇ ಹೆಸರಾಗಿರುವ, ಲವ್ ಬರ್ಡ್ಸ್ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಗೆ ಎಲ್ಲಾ ಸಿದ್ಧತೆಗಳು ಬಹಳ ಜೋರಾಗಿ ಆರಂಭವಾಗಿದೆ. ವಿಶೇಷ ಎಂದರೆ ಈ ಜೋಡಿಯ ಮದುವೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಆರು ದಿನಗಳ ಕಾಲ ನಡೆಯಲಿದೆ ಎನ್ನಲಾಗಿದ್ದು, ಮದುವೆಗೆ ಬಾಲಿವುಡ್ ನ ಹಾಗೂ ಅನ್ಯ ಆಯ್ದ ಅತಿಥಿಗಳಿಗೆ ಮಾತ್ರವೇ ಆಹ್ವಾನವನ್ನು ನೀಡಲಾಗುವುದು ಎನ್ನುವ ವಿಷಯ ಕೂಡಾ ತಿಳಿದು ಬಂದಿದ್ದು, ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಮದುವೆಯ ಖುಷಿಯಲ್ಲಿ ಇದ್ದು, ಸಡಗರದಿಂದ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ.

ವಿಕ್ಕಿ ಹಾಗೂ ಕತ್ರಿನಾ ಮದುವೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಇರುವಂತಹ ಸಿಕ್ಸ್ ಸೆನ್ಸ್ ಪೋರ್ಟ್ ಹೊಟೇಲ್ ನಲ್ಲಿ ಡಿಸೆಂಬರ್ 7 ರಿಂದ 12 ರವರಗೆ ಮದುವೆಯು ನಡೆಯಲಿದೆ ಎನ್ನುವ ಸುದ್ದಿಯೀಗ ಸದ್ದು ಮಾಡಿದೆ. ಇನ್ನು ವಿಕ್ಕಿ ಕೌಶಲ್ ಹಿಂದೂ ಹಾಗೂ ಕತ್ರೀನಾ ಮುಸ್ಲಿಂ ಆಗಿರುವುದರಿಂದ ಎರಡು ಸಂಪ್ರದಾಯಗಳಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗುವುದರಿಂದ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.

ಕತ್ರೀನಾ ಹಾಗೂ ವಿಕ್ಕಿ ಕೌಶಲ್ ರ ಬಹುನಿರೀಕ್ಷಿತ ಹಾಗೂ ಅದ್ದೂರಿ ಮದುವೆಗೆ ಅತಿಥಿಗಳಾಗಿ ಬಾಲಿವುಡ್ ನ ಸಿನಿಮಾ ನಿರ್ಮಾಪಕ ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಮಿನಿ ಮಾಥುರ್, ಕಬೀರ್ ಖಾನ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ವರುಣ್ ಧವನ್ ಹಾಗೂ ಅವರ ಪತ್ನಿ ನತಾಶಾ ದಲಾಲ್ ಹಾಗೂ ಇನ್ನಿತರೆ ಬಾಲಿವುಡ್ ಸೆಲೆಬ್ರಿಟಿಗಳು ಅತಿಥಿಗಳ ಲಿಸ್ಟ್ ನಲ್ಲಿದ್ದಾರೆ. ಅಲ್ಲದೇ ಮತ್ತೊಂದು ವಿಷಯ ಕೂಡಾ ಗಮನ ಸೆಳೆದಿದೆ.

ಕತ್ರೀನಾ ತಮ್ಮ ವಿವಾಹಕ್ಕೆ ತಮ್ಮ‌‌‌ ಮಾಜಿ ಪ್ರೇಮಿಗಳಾದ ಸಲ್ಮಾನ್ ಖಾನ್ ಹಾಗೂ ರಣಬೀರ್ ಕಪೂರ್ ಗೂ ಸಹಾ ಆಹ್ವಾನವನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಮದುವೆ ಹಿನ್ನೆಲೆಯಲ್ಲಿ ದುಬಾರಿ ಕಾರುಗಳನ್ನು ಬಾಡಿಗೆಗೆ ಈಗಾಗಲೇ ಬುಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಶೀಘ್ರದಲ್ಲೇ ಪ್ರೇಮಿಗಳ ಜೋಡಿಯೊಂದರ ಐಶಾರಾಮೀ ಮದುವೆಯ ಸಂಭ್ರಮ ಅಭಿಮಾನಿಗಳಿಗೆ ಖುಷಿ ನೀಡಿದೆ.

Leave a Comment