57 ಲಕ್ಷ ಜನ ಈ ನಟನನ್ನು ಫಾಲೋ ಮಾಡಿದ್ರೆ, ಈ ನಟ ಆ ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡ್ತಾರೆ

Entertainment Featured-Articles News

ದಕ್ಷಿಣ ಸಿನಿಮಾರಂಗದಲ್ಲಿ ನಟ ಜೂನಿಯರ್ ಎನ್ಟಿಆರ್ ಅವರಿಗೆ ಇರುವ ಫ್ಯಾನ್ಸ್ ಫಾಲೋಯಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ನಟ ಎನ್ ಟಿ ಆರ್ ತಮ್ಮ ಅದ್ಭುತವಾದ ನಟನೆ, ನೃತ್ಯ ಅಭಿಮಾನಿಗಳನ್ನು ಚಪ್ಪಾಳೆ ತಟ್ಟುವಂತೆ ಮಾಡುವ ಡೈಲಾಗುಗಳ ಮೂಲಕ ಅಪಾರವಾದ ಪ್ರೇಕ್ಷಕ ಆದರಣೆಯನ್ನು ಪಡೆದುಕೊಂಡು ಮಿಂಚುತ್ತಿರುವ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಟಾಲಿವುಡ್ ನ ಯಂಗ್ ಟೈಗರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಎನ್ ಟಿ ಆರ್ ಅವರು ಪ್ರಸ್ತುತ ತಮ್ಮ ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಕೌಮುರಂ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ ಟಿ ಆರ್.

ಎನ್ ಟಿ ಆರ್ ಅವರ ಅಭಿಮಾನಿಗಳಲ್ಲಿ ಈ ಪಾತ್ರವು ತೀವ್ರವಾದ ಜೋಶ್ ಮೂಡಿಸಿದೆ. ಈಗಾಗಲೇ ಈ ಸಿನಿಮಾದಲ್ಲಿನ ಎನ್ ಟಿ ಆರ್ ಫಸ್ಟ್ ಲುಕ್, ಟ್ರೈಲರ್ ನಲ್ಲಿ ಅವರ ಪಾತ್ರ ಎಲ್ಲವನ್ನು ನೋಡಿರುವ ಅವರ ಅಭಿಮಾನಿಗಳು ಸಾಕಷ್ಟು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ವಿದೇಶಗಳಲ್ಲಿರುವ ಜೂನಿಯರ್ ಎನ್ ಟಿ ಆರ್ ಅಭಿಮಾನಿಗಳು ಸಿನಿಮಾ ಟಿಕೆಟ್ ಗಳನ್ನು ಬುಕ್ ಮಾಡಿಸಿದ್ದಾರೆ. ವಿದೇಶಗಳಲ್ಲಿ ಹಾಗೂ ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಮುನ್ನವೇ ಸಂಭ್ರಮಿಸುತ್ತಿದ್ದಾರೆ. ಹಬ್ಬದ ವಾತಾವರಣ ಮೂಡಿಸಿದ್ದಾರೆ.‌

ಅಭಿಮಾನಿಗಳ ಈ ಸಂಭ್ರಮದ ದೃಶ್ಯಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೀಗಿರುವಾಗ ಸಿನಿಮಾ ಕೆಲಸಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟ ಜೂನಿಯರ್ ಎನ್ ಟಿ ಆರ್ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಸಿನಿಮಾಗಳ ಕುರಿತಾದ ಲೇಟೆಸ್ಟ್ ಅಪ್ಡೇಟ್ ಗಳನ್ನು ನೀಡುತ್ತಾ, ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ. ಇನ್ನು ಟ್ವಿಟರ್ ನಲ್ಲಿ ಎನ್ ಟಿ ಆರ್ ಅವರನ್ನು ಬರೋಬ್ಬರಿ 57 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ.

ಇಷ್ಟು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದಿರುವ ಈ ನಟ ಟ್ವಿಟರ್ ನಲ್ಲಿ ಎಷ್ಟು ಜನರನ್ನು ಫಾಲೋ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಹೌದು, ನಟ ಜೂನಿಯರ್ ಎನ್ ಟಿ ಆರ್ ಅವರು ಟ್ವಿಟರ್ ನಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವೇ ಫಾಲೋ ಮಾಡುತ್ತಿದ್ದಾರೆ. ಹಾಗಾದರೆ ಎನ್ ಟಿ ಆರ್ ಫಾಲೋ ಮಾಡುತ್ತಿರುವ ಆ ವ್ಯಕ್ತಿ ಯಾರು?? ಎನ್ನುವುದಾದರೆ ಅವರೇ ನಿರ್ದೇಶಕ ಎಸ್ ಎಸ್ ರಾಜಮೌಳಿ. ಹಾಗಾದರೆ ಜೂ. ಎನ್ ಟಿ ಆರ್ ಅವರು ಏಕೆ ರಾಜಮೌಳಿ ಅವರನ್ನು ಮಾತ್ರವೇ ಫಾಲೋ ಮಾಡುತ್ತಿದ್ದಾರೆ ಬನ್ನಿ ತಿಳಿಯೋಣ.

ಜೂನಿಯರ್ ಎನ್ ಟಿ ಆರ್ ಅವರ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಯಶಸ್ಸಿನ ತಿರುವನ್ನು ನೀಡಿದವರು ಇದೇ ರಾಜಮೌಳಿ ಅವರು. ನಟ ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್ಟಿಆರ್ ಅವರು ಮೊದಲು ನಟಿಸಿದ್ದು ಸ್ಟುಡೆಂಟ್ ನಂಬರ್ 1 ಸಿನಿಮಾದಲ್ಲಿ. ಅದಾದ ನಂತರ ಸಿಂಹಾದ್ರಿ, ಯಮದೊಂಗ ಸಿನಿಮಾಗಳಲ್ಲಿ ನಟಿಸಿದರು. ಈ ಜೋಡಿಯ ಕಾಂಬಿನೇಷನ್ ಈಗ ಆರ್ ಆರ್ ಆರ್ ಸಿನಿಮಾದಲ್ಲಿ ಮುಂದುವರೆದಿದೆ. ಹೀಗೆ ತನ್ನ ವೃತ್ತಿಜೀವನದಲ್ಲಿ ಮಹತ್ತರ ತಿರುವಿಗೆ ಕಾರಣವಾದ ನಿರ್ದೇಶಕ ರಾಜಮೌಳಿಯ ಬಗ್ಗೆ ಎನ್ ಟಿ ಆರ್ ಅವರಿಗೆ ಅಪಾರವಾದ ಪ್ರೀತಿ ಮತ್ತು ಗೌರವ ಇದೆ.

ಅದೇ ಗೌರವ ಹಾಗೂ ಅಭಿಮಾನದಿಂದ ಎನ್ ಟಿ ಆರ್ ಅವರು ಟ್ವಿಟರ್ ನಲ್ಲಿ ರಾಜಮೌಳಿ ಅವರನ್ನು ಮಾತ್ರವೇ ಹಿಂಬಾಲಿಸುತ್ತಿದ್ದಾರೆ. ಇನ್ನು ನಿರ್ದೇಶಕ ರಾಜಮೌಳಿ ಅವರು ಹೆಚ್ಚು ಬಾರಿ ನಿರ್ದೇಶನ ಮಾಡಿರುವ ನಾಯಕ ಎನ್ನುವ ಹೆಗ್ಗಳಿಕೆಗೆ ಸಹಾ ಎನ್ ಟಿ ಆರ್ ಪಾತ್ರವಾಗಿದ್ದಾರೆ. ಈಗ ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಟ್ವಿಟರ್ ನಲ್ಲಿ ಎನ್ ಟಿ ಆರ್ ಅವರಯ ರಾಜಮೌಳಿ ಅವರನ್ನು ಫಾಲೋ ಮಾಡುತ್ತಿರುವುದು ಸಾಕ್ಷಿಯಾಗಿದೆ.

Leave a Reply

Your email address will not be published.