HomeEntertainment54 ನೇ ವಸಂತಕ್ಕೆ ಕಾಲಿರಿಸಿದ ಪ್ರೇಮಲೋಕದ ಬೆಡಗಿ ಸಲ್ಮಾನ್ ಖಾನ್ ಗೆ ನಾಯಕಿಯಾಗಲೇ ಇಲ್ಲ ಏಕೆ?

54 ನೇ ವಸಂತಕ್ಕೆ ಕಾಲಿರಿಸಿದ ಪ್ರೇಮಲೋಕದ ಬೆಡಗಿ ಸಲ್ಮಾನ್ ಖಾನ್ ಗೆ ನಾಯಕಿಯಾಗಲೇ ಇಲ್ಲ ಏಕೆ?

ಪ್ರೇಮಲೋಕದ ಬೆಡಗಿ, ಬಾಲಿವುಡ್ ನಟಿ ಜೂಹಿ ಚಾವ್ಲಾ ಗೆ ಇಂದು 54 ನೇ ಜನ್ಮದಿನ. ನಟಿ ಜೂಹಿ ಬಾಲಿವುಡ್ ಸಿನಿಮಾ ರಂಗದಲ್ಲಿ ಒಂದು ದೊಡ್ಡ ಹೆಸರನ್ನು, ಸ್ಥಾನವನ್ನು ಹೊಂದಿರುವ ನಟಿ. ತನ್ನ ಪ್ರತಿಭೆಯಿಂದ ಕನ್ನಡ ಸಿನಿ ಪ್ರೇಮಿಗಳ ಹೃದಯದಲ್ಲಿ ಇಂದಿಗೂ ಸಹಾ ಪ್ರೇಮಲೋಕದ ಸುಂದರಿಯಾಗಿ ನೆಲೆಸಿದ್ದಾರೆ. ಹರಿಯಾಣದ ಅಂಬಾಲದಲ್ಲಿ ಜನಿಸಿದ ಜೂಹಿ ಚಾವ್ಲಾ ಅವರು ಓದಿದ್ದು, ಬೆಳೆದಿದ್ದು ಮಾತ್ರ ಮಹಾರಾಷ್ಟ್ರದ ಮುಂಬೈನಲ್ಲಿ. ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಜೂಹಿ ಎಲ್ಲಾ‌ ಸ್ಟಾರ್ ನಟರ ಜೊತೆಗೆ ತೆರೆ‌ ಹಂಚಿಕೊಂಡಿದ್ದಾರೆ.‌

1984 ರಲ್ಲಿ ಮಿಸ್ ಇಂಡಿಯಾ ಗೆದ್ದ ನಂತರ ಬಣ್ಣದ ಲೋಕಕ್ಕೆ ಅಡಿಯಿಟ್ಟ ಜೂಹಿ ಸಲ್ತನತ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು. ಇದಾದ ನಂತರ ನಟ ಅಮೀರ್ ಖಾನ್ ಜೊತೆಗೆ ನಟಿಸಿದ ಖಯಾಮತ್ ಸೇ ಖಯಾಮತ್ ತಕ್ ನ ದೊಡ್ಡ ಯಶಸ್ಸು ಜೂಹಿಗೆ ಒಂದು ಬ್ರೇಕ್ ನೀಡಿತು. ಇದಾದ ನಂತರ ಜೂಹಿ ಯಶಸ್ಸಿನ ಮೆಟ್ಟಿಲು ಏರುತ್ತಾ ಸಾಗಿದರು. ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೂಹಿ ಅವರನ್ನು ಮದುವೆಯಾಗುವ ಪ್ರಸ್ತಾಪವನ್ನು ಅವರ ತಂದೆ ಮುಂದೆ ಇಟ್ಟಿದ್ದರು ಎನ್ನಲಾಗಿದೆ.ಆದರೆ ಜೂಹಿ ಅವರ ತಂದೆ ಮಗಳನ್ನು ಸಲ್ಮಾನ್ ಖಾನ್ ಗೆ ಮದುವೆ ಮಾಡಿ ಕೊಡಲು ನಿರಾಕರಿಸಿದರು.

ಇದಕ್ಕೆ ಕಾರಣವೇನು ಎನ್ನುವುದು ಮಾತ್ರ ಇಂದಿಗೂ ಬಹಿರಂಗ ಆಗಿಲ್ಲ. ವಿಶೇಷ ಎಂದರೆ ಬಾಲಿವುಡ್ ನ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ಜೂಹಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಶಾರೂಖ್ ಹಾಗೂ ಅಮೀರ್ ಖಾನ್ ಜೊತೆಗೆ ಸೂಪರ್ ಹಿಟ್ ಜೋಡಿಯಾಗಿದ್ದವರು ಜೂಹಿ. ಕನ್ನಡದಲ್ಲಿ ಜೂಹಿ ಪ್ರೇಮಲೋಕ, ಶಾಂತಿ ಕ್ರಾಂತಿ ಹಾಗೂ ಕಿಂದರಜೋಗಿ ಸಿನಿಮಾಗಳಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಲೇ ಜೂಹಿ ಉದ್ಯಮಿ ಜಯ್ ಮೆಹ್ತಾ ಅವರೊಂದಿಗೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಜಯ್ ಮೆಹ್ತಾ ಅವರ ಮೊದಲ ಪತ್ನಿ ವಿಮಾನ ದು ರ್ಘ ಟನೆಯಲ್ಲಿ ಮೃತ ಪಟ್ಟಿದ್ದರು. ಅಲ್ಲದೇ ಜೂಹಿ ಅವರ ತಾಯಿ ಕೂಡಾ ಆ ಸಮಯದಲ್ಲಿ ನಿಧನ ಹೊಂದಿ ಜೂಹಿ ನೋವಿನಲ್ಲಿ ಇದ್ದರು. ಆಗಲೇ ಜಯ್ ಮೆಹ್ತಾ ಹಾಗೂ ಜೂಹಿ ಹತ್ತಿರವಾಗಿದ್ದು. ಜೂಹಿ ಮದುವೆ ನಿಜಕ್ಕೂ ಬಾಲಿವುಡ್ ಮಾತ್ರವೇ ಅಲ್ಲದೇ ಜೂಹಿ ಅಭಿಮಾನಿಗಳಿಗೂ ಶಾ ಕ್ ನೀಡಿತ್ತು.

ಇಬ್ಬರು ಮಕ್ಕಳ ಸುಂದರವಾದ ಕುಟುಂಬದೊಡನೆ ಖುಷಿಯ ಜೀವನವನ್ನು ನಡೆಸುತ್ತಿರುವ ಜೂಹಿ ಚಾವ್ಲಾ ಇಂದಿಗೂ ಬಾಲಿವುಡ್ ನಲ್ಲಿ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಸಿನಿಮಾಗಳಲ್ಲಿ ಕೂಡಾ ನಟಿಸುವ ಜೂಹಿ 5g ವಿಷಯವಾಗಿ ಅದನ್ನು ವಿ ರೋ ಧಿಸಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಇಂದು ಜೂಹಿ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರಿಗೆ ಶುಭಾಶಯವನ್ನು ಕೋರಿದ್ದಾರೆ.

- Advertisment -