50 ಸಾವಿರ ರೂ.‌ ಶ್ಯೂರಿಟಿ, ರಾಜ್ ಕುಂದ್ರಾಗೆ ಸಿಕ್ತು ಜಾಮೀನು: ಇದೇನಾ ನಮ್ಮ ಕಾನೂನು ವ್ಯವಸ್ಥೆ ಎಂದು ಸಿಟ್ಟಾದ ನೆಟ್ಟಿಗರು

0
208

ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಹೆಸರು ಕಳೆದ ಹಲವು ದಿನಗಳಿಂದಲೂ ಸಹಾ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಒಂದಾಗಿದೆ. ಅದಕ್ಕೆ ಕಾರಣವಾಗಿದ್ದು ರಾಜ್ ಕುಂದ್ರಾ ನೀ ಲಿ ಚಿತ್ರಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಸಿಕ್ಕಿ ಬಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರಿಂದ‌.‌ರಾಜ್ ಕುಂದ್ರಾ ಬಂಧನದ ನಂತರ ಎಲ್ಲೆಲ್ಲೂ ಅದೇ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಎಲ್ಲಾ ಸಾಕ್ಷ್ಯಾಧಾರಗಳು ಸಹಾ ರಾಜ್ ಕುಂದ್ರಾ ಅವರ ವಿ ರು ದ್ಧ ಇದೆ ಎನ್ನುವ ವಿಷಯಗಳು ಹೊರ ಬಂದವು, ಕೆಲವು ನಟಿಯರು ಸಹಾ ಆ ರೋ ಪ ಮಾಡಿದರು.

ಇನ್ನು ನಟಿ ಶಿಲ್ಪಾ ಶೆಟ್ಟಿಯಂತೂ ರಾಜ್ ಕುಂದ್ರಾ ಬಂಧನದ ನಂತರ ಸ್ವಲ್ಪ ದಿನಗಳ ಕಾಲ ಐಸೋಲೇಟ್ ಆಗಿ ಬಿಟ್ಟರು. ಯಾವ ವಿಚಾರವನ್ನು ಮಾತನಾಡಲು ಅವರು ಬಯಸಿರಲಿಲ್ಲ. ಅನಂತರ ಸ್ವಲ್ಪ ದಿನಗಳ ನಂತರ ಮತ್ತೆ ತಮ್ಮ‌ ಕೆಲಸಗಳಿಗೆ ಹಿಂತಿರುಗಿದರು. ಅತ್ತ ರಾಜ್ ಕುಂದ್ರಾ ಅವರನ್ನು ಹೊರಗೆ ತರಲು ಅವರ ವಕೀಲರು ಜಾಮೀನಿಗಾಗಿ ಪ್ರಯತ್ನ ಪಟ್ಟರು ಅದು ಸಾಧ್ಯವಾಗಿರಲಿಲ್ಲ. ಆದರೆ ಪ್ರಯತ್ನ ಮಾತ್ರ ನಿರಂತರವಾಗಿ ನಡೆಯುತ್ತಲೇ ಇತ್ತು.

ವಿಚಾರಣೆ ಹಾಗೂ ತನಿಖೆ ಮುಂದೆ ಸಾಗಿದಂತೆ ಹೊಸ ಹೊಸ ವಿಷಯಗಳು ಬಹಿರಂಗವಾಗ ತೊಡಗಿದವು. ರಾಜ್ ಕುಂದ್ರಾ ಇನ್ನೊಂದು ಮುಖ ನೋಡಿ ಜನರು ಆಶ್ಚರ್ಯ ಪಟ್ಟರು. ಇವೆಲ್ಲವುಗಳ ನಡುವೆ ಕೆಲವೇ ದಿನಗಳ ಹಿಂದೆ ಪೋಲಿಸರು ಸುಮಾರು 1500 ಪುಟಗಳ ಚಾರ್ಜ್ ಶೀಟ್ ದಾಖಲು ಮಾಡಿ, ನಟಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆಯನ್ನು ಸಹಾ ದಾಖಲಿಸಿ ಕೋರ್ಟ್ ಮುಂದೆ ಅದನ್ನು ಪ್ರಸ್ತುತ ಪಡಿಸಿದ್ದರು. ಬಹುಶಃ ರಾಜ್ ಕುಂದ್ರಾ ಹೊರಗೆ ಬರುವುದು ಕಠಿಣ ಎನ್ನಲಾಗಿತ್ತು.

ಆದರೆ ಆಶ್ಚರ್ಯ ಎನ್ನುವ ಹಾಗೆ ರಾಜ್ ಕುಂದ್ರಾ ಅವರ ವಿ ರು ದ್ಧ ಚಾರ್ಜ್ ಶೀಟ್ ಸಲ್ಲಿಕೆ ಯಾದ ಮೂರು ದಿನಗಳ ನಂತರ ಅವರಿಗೆ ಜಾಮೀನು ದೊರೆತಿದೆ. ಹೌದು ಕೋರ್ಟ್ ಕೇವಲ 50 ಸಾವಿರ ರೂಪಾಯಿಗಳನ್ನು ಶ್ಯೂರಿಟಿಯೊಂದಿಗೆ ರಾಜ್ ಕುಂದ್ರಾ ಅವರಿಗೆ ಜಾಮೀನು ಜಾರಿ ಮಾಡಿದೆ. ರಾಜ್ ಕುಂದ್ರಾ ನ್ಯಾಯಾಂಗದ ಬಂ ಧ ನದಿಂದ ಹೊರಗೆ ಬರುವುದು ಖಚಿತ ಆಗಿದೆ. ರಾಜ್ ಕುಂದ್ರಾ ಅವರಿಗೆ ಜಾಮೀನು ದೊರೆತ ವಿಷಯ ಸುದ್ದಿಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕೇವಲ 50 ಶ್ಯೂರಿಟಿ ಆಧಾರದಲ್ಲಿ ರಾಜ್ ಕುಂದ್ರಾ ಗೆ ಬೇಲ್ ದೊರೆತ ವಿಚಾರ ಕೇಳಿ ನೆಟ್ಟಿಗರು ಶಾ ಕ್ ಆಗಿದ್ದಾರೆ. ಈ ಮಾತ್ರಕ್ಕೆ ಇಷ್ಟೆಲ್ಲಾ ಅಗತ್ಯವಿತ್ತಾ? ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ ನಮ್ಮ‌ ದೇಶದಲ್ಲಿ ಕಾನೂನುಗಳು ಸಾಮಾನ್ಯ ಜನರಿಗೆ ಕಠಿಣ, ಸೆಲೆಬ್ರಿಟಿಗಳು ಹಾಗೂ ಶ್ರೀಮಂತರಿಗೆ ಅದರ ಪರಿಣಾಮ ಬೀರುವುದೇ ಇಲ್ಲ ಎಂದು ಸಹಾ ಸಿಟ್ಟು, ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here