45 ರ ವರ, 25 ರ ವಧು: ಗೇಲಿ ಮಾಡುವ ಮುನ್ನ ವಾಸ್ತವ ತಿಳಿಯಿರಿ!! ಈ ವಿವಾಹದ ಹಿಂದೆ ಇದೆ ಭಾವುಕ ಕಥೆ

Written by Soma Shekar

Updated on:

---Join Our Channel---

ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗಳದ್ದೇ ದರ್ಬಾರು ಎನ್ನುವ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರ ನಿರ್ಮಾಣವಾಗುತ್ತಿದೆ. ಸೋಶಿಯಲ್ ಮೀಡಿಯಾ ಗಳಿಂದಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ರಾತ್ರೋ ರಾತ್ರಿ ಸೆಲೆಬ್ರಿಟಿ ಆಗಿ ಬಿಡುತ್ತಾನೆ. ಅದೇ ರೀತಿ ಇದೇ ಸೋಶಿಯಲ್ ಮೀಡಿಯಾ ಕಾರಣದಿಂದ ಕೆಲವರ ಬದುಕು ಹಾಗೂ ಚಾರಿತ್ಯ್ರ ವಧೆ ಕೂಡಾ ಪ್ರಾರಂಭವಾಗಿಬಿಡುತ್ತದೆ. ಅದರಲ್ಲೂ ಫೇಸ್ ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಗಳಲ್ಲಿ ಟ್ರೋಲ್ ಪೇಜ್ ಗಳಲ್ಲಿ ಕೆಲವೊಮ್ಮೆ ವಿಷಯ ಸಂಪೂರ್ಣವಾಗಿ ತಿಳಿಯದೆ ಮಾಡುವ ತಪ್ಪಿನಿಂದ ಜನರ ಬದುಕು ನ ಗೆಪಾಟಲಿಗೆ ಗುರಿಯಾಗುತ್ತದೆ. ಅವರು ಮುಜುಗರ ಅನುಭವಿಸುವಂತಾಗುತ್ತದೆ.

ಕಳೆದ ಮೂರ್ನಾಲ್ಕು ದಿನಗಳಿಂದ 45 ವರ್ಷ ವಯಸ್ಸಿನ ವ್ಯಕ್ತಿಗೆ 25 ವಯಸ್ಸಿನ ಮಹಿಳೆಯ ಮದುವೆ ಎನ್ನುವ ಸುದ್ದಿಯೊಂದು ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿದೆ. ಈ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಅನ್ನುಮಾಡಲಾಗುತ್ತಿದೆ. ಇಂತಹದೊಂದು ಮದುವೆ ನಡೆದಿರುವುದು ವಾಸ್ತವವೇ ಆದರೂ ಆ ಮದುವೆಯ ಹಿಂದೆ ಒಂದು ಭಾವನಾತ್ಮಕ ಕಥೆ ಇದೆ ಎನ್ನುವುದು ಕೂಡಾ ಅಷ್ಟೇ ವಾಸ್ತವವಾಗಿದೆ. ಇನ್ನು ಈ ಮದುವೆ ನಡೆದಿರುವುದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಎನ್ನುವ ಗ್ರಾಮದಲ್ಲಿ.

45 ವರ್ಷ ವಯಸ್ಸಿನ ಶಂಕರ್ ಹಾಗೂ 25 ವರ್ಷ ವಯಸ್ಸಿನ ಮೇಘನಾ ತಮ್ಮ ಎರಡು ಕುಟುಂಬಗಳ ಒಪ್ಪಿಗೆಯನ್ನು ಪಡೆದು, ತಮ್ಮ ಕುಟುಂಬದವರ ಸಮ್ಮುಖದಲ್ಲಿಯೇ ಬಹಳ ಸಡಗರ, ಸಂಭ್ರಮದಿಂದ ಮದುವೆಯಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಯಸ್ಸನ್ನೇ ದಾಳವನ್ನಾಗಿಸಿಕೊಂಡು ವ್ಯಂಗ್ಯ ಮಾಡಲಾಗುತ್ತಿದೆ. ವಯಸ್ಸು 45 ಆದರೂ ಶಂಕರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಇನ್ನೊಂದು ಕಡೆ ಅವರು ಮದುಗೆಯಾದ ಮೇಘನಾ ಅವರ ಬದುಕಿನಲ್ಲೂ ಒಂದು ನೋವಿನ ಕಥೆ ಇತ್ತು.

ಮೇಘನಾ ಅವರಿಗೆ ಈ ಮೊದಲೇ ವಿವಾಹವಾಗಿತ್ತು. ಆದರೆ ಕೌಟುಂಬಿಕ ಜೀವನದಲ್ಲಿ ಎದ್ದ ಬಿರುಗಾಳಿಯ ಕಾರಣ ಅವರ ಪತಿ ಆಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ವಿಚ್ಛೇದನ ನೀಡಿ ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದರು. ಸಮಾಜದ ಮುಂದೆ ಗಂಡ ಬಿಟ್ಟವಳು ಎಂದು ನಿಂದನೆಗೆ ಗುರಿಯಾಗಿದ್ದರು ಮೇಘನಾ ಅವರು ನೋವನ್ನು ಅನುಭವಿಸುತ್ತಾ, ಸಮಾಜದಲ್ಲಿ ಒಂದು ಸರಿಯಾಗ ಗೌರವ ಸಿಗದೇ ಇರುವಾಗಲೇ ಶಂಕರ್ ಅವರು ಮೇಘನಾ ಅವರನ್ನು ನೋಡಿ ಅವರನ್ನು ಮೆಚ್ಚಿಕೊಂಡಿದ್ದಾರೆ. ಅನಂತರ ಇಬ್ಬರು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.

ಶಂಕರ್ ಹಾಗೂ ಮೇಘನಾ ಮದುವೆಯಾಗಲು ನಿರ್ಧರಿಸಿದ ಮೇಲೆ ಎರಡೂ ಕುಟುಂಬದವರ ಒಪ್ಪಿಗೆಯನ್ನು ಪಡೆದುಕೊಂಡು, ಸ್ಥಳೀಯ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡ ಬಳಿಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಈ ವಿಷಯ ತಿಳಿಯದೆ ಬಹಳಷ್ಟು ಜನ ಈ ಜೋಡಿಗೆ ಹೊಸ ಜೀವನಕ್ಕೆ ಶುಭ ಕೋರುವ ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಮನಬಂದಂತೆ ಮಾತನಾಡುತ್ತಾ, ವ್ಯಂಗ್ಯ ಮಾಡುತ್ತಿದ್ದಾರೆ.

Leave a Comment