42ರ ಮಹಿಳೆಯನ್ನು 28ರ ಯುವತಿ ಆಂಟಿ ಅಂದ್ರೆ ತಪ್ಪಾ? ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಚರ್ಚೆ, ಕಣ್ಣೀರು

0 10

ಹಿಂದಿಯ ಬಹು ಚರ್ಚಿತ , ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತನ್ನ 15ನೇ ಸೀಸನ್ನು ಕೊನೆಯ ಹಂತವನ್ನು ಬಂದು ತಲುಪಿದೆ. ಇಂದು ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ಈಗಾಗಲೇ ಫಿನಾಲೆ ಪ್ರೋಮೋಗಳು ಎಲ್ಲರ ಗಮನವನ್ನೂ ಸೆಳೆದಿದೆ. ಹಿಂದಿ ಬಿಗ್ ಬಾಸ್ ಪ್ರತಿ ಸೀಸನ್ ನಲ್ಲಿ ಕೂಡಾ ಒಂದಷ್ಟು ಗ ಲಾ ಟೆ ಗಳು ಹಾಗೂ ವಿವಾದಗಳಿಂದ ಸಾಕಷ್ಟು ಸದ್ದು ಸುದ್ದಿಯಾಗುತ್ತದೆ ಈ ಬಾರಿ ಟಿ ಆರ್ ಪಿ ಯ ವಿಷಯದಲ್ಲಿ ಬಿಗ್ ಬಾಸ್ ಕೊಂಚ ಹಿಂದೆ ಬಿದ್ದಿರಬಹುದು ಆದರೆ ಜ ಗ ಳ ಮತ್ತು ಗ ಲಾ ಟೆಗಳಲ್ಲಿ ಮಾತ್ರ ಮುಂದೆ ಇದೆ.

ಜ ಗ ಳ ಗಳು ಮಾತಿನ ಚಕಮಕಿಗಳು ಯಾವ ಹಂತದವರೆಗೂ ಇದೆ ಎಂದರೆ ಫಿನಾಲೆ ತಲುಪಿದ್ದರೂ ಕೂಡಾ ಇನ್ನೂ ಕೆಲವು ಸ್ಪರ್ಧಿಗಳ ನಡುವಿನ ಮನಸ್ತಾಪ ಕಡಿಮೆಯಾಗಿಲ್ಲ. ಅದರಲ್ಲೂ ವಿಶೇಷವಾಗಿ ಈಗ ಟಾಪ್ ಫೈವ್ ಗೆ ಆಯ್ಕೆಯಾಗಿ ಫೈನಲ್ ಹಂತಕ್ಕೆ ತಲುಪಿರುವ ಪ್ರಮುಖ ಸ್ಪರ್ಧಿಗಳಾಗಿರುವ ನಟಿ ಶಮಿತಾ ಶೆಟ್ಟಿ ಹಾಗೂ ಕಿರುತೆರೆಯ ಜನಪ್ರಿಯ ನಟಿ ತೇಜಸ್ವಿ ಪ್ರಕಾಶ್ ಇಬ್ಬರ ನಡುವಿನ ಮನಸ್ತಾಪ ಕಡಿಮೆಯಾಗಿಲ್ಲ. ಗ್ರಾಂಡ್ ಫಿನಾಲೆ ಯ ಒಂದು ದಿನ ಮೊದಲು ಸಹಾ ಇಬ್ಬರ ನಡುವೆ ತೀ ವ್ರವಾದ ಮಾತಿನ ಚ ಕ ಮ ಕಿ ನಡೆದಿದೆ.

ಫಿನಾಲೆಗಾಗಿ ಭರ್ಜರಿಯಾಗಿ ಡ್ರೆಸ್ ಮತ್ತು ಮೇಕಪ್ ಹಾಕಿ ಸಿದ್ಧರಾಗಿದ್ದ ಈ ಇಬ್ಬರು ನಟಿಯರು ಒಂದು ವಿಚಾರಕ್ಕೆ ಸಂಬಂಧಿಸಿದ ಒಬ್ಬರ ಮೇಲೆ ಮತ್ತೊಬ್ಬರು ಅರಚಿ, ಕೂಗಾಡಿ ರಂಪ, ರಾಮಾಯಣ ಮಾಡಿದ್ದು, ಬೇಸರಗೊಂಡ ನಟಿ ಶಮಿತ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಗೆ ಅಭಿಮಾನಿಗಳಿಗೆ ಪ್ರವೇಶವನ್ನು ನೀಡಲಾಗಿತ್ತು. ಈ ವೇಳೆ ಅಭಿಮಾನಿಗಳು ಹೇಳಿದ ಕೆಲಸವನ್ನು ಮನೆಯ ಸ್ಪರ್ಧಿಗಳು ಮಾಡಬೇಕಿತ್ತು. ಆಗ ಮನೆಯ ಸ್ಪರ್ಧಿ ಆಗಿರುವ ಕರನ್ ಕುಂದ್ರಾ ಅವರಿಗೆ ಶಮಿತಾ ಮಸಾಜ್ ಮಾಡಬೇಕೆಂದು ಫ್ಯಾನ್ಸ್ ಹೇಳಿದರು.

ಅದನ್ನು ಒಂದು ಟಾಸ್ಕ್ ಎಂದು ಬಹಳ ಖುಷಿಯಿಂದ ಶಮಿತಾ, ಜೋಷ್ ನಿಂದ ಬಂದು ಕರನ್ ಕುಂದ್ರಾ ಬೆನ್ನಿನ ಮೇಲೆ ಕುಳಿತುಕೊಂಡು ಮಸಾಜ್ ಮಾಡಿದ್ದರು. ಆ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿಯೇ ಕರನ್ ಕುಂದ್ರಾಗೆ ಗೆಳತಿ, ಪ್ರಿಯತಮೆಯಾಗಿ ಬೆಸೆದುಕೊಂಡಿರುವ ತೇಜಸ್ವಿ ಪ್ರಕಾಶ್, “ಆಂಟಿ ಬೆನ್ನ ಮೇಲೆ ಹತ್ತಿ ಕೂತರು” ಎನ್ನುವ ಮಾತನ್ನು ಹೇಳಿಬಿಟ್ಟರು. ತನ್ನನ್ನು ಆಂಟಿ ಎಂದು ಕರೆದ ವಿಚಾರಕ್ಕೆ ಶಮಿತಾ ಶೆಟ್ಟಿ ಸಿಕ್ಕಾಪಟ್ಟೆ ಸಿ ಟ್ಟಾ ದರು. ತೇಜಸ್ವಿ ಮೇಲೆ ತನ್ನ ಸಿ ಟ್ಟು, ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಲ್ಲದೇ ರಾಷ್ಟ್ರೀಯ ವಾಹಿನಿಯಲ್ಲಿ ತನ್ನನ್ನು ಆಂಟಿ ಎಂದು ಕರೆದು ವಯಸ್ಸಿನ ವಿಷಯವಾಗಿ ಅ ವ ಹೇ ಳ ನ ಮಾಡುವುದು ಸರಿಯಲ್ಲ ಎಂದು ಅರಚಾಡಿ ಕೂಗಾಡಿದರು. ಕೊನೆಗೆ ತೇಜಸ್ವಿ ಪ್ರಕಾಶ್ ಈ ವಿಷಯವಾಗಿ ಕ್ಷಮೆಯನ್ನು ಕೇಳಿದರು. ಆದರೆ ಈ ವಿಷಯ ಅಷ್ಟಕ್ಕೇ ನಿಲ್ಲಲಿಲ್ಲ. ತೇಜಸ್ವಿ ಪ್ರಕಾಶ್ ಮತ್ತೆ ಮತ್ತೆ ತಾನು ಮಾತಿನ ಭರದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ಹೇಳಿದೆ ಅಷ್ಟೇ, ಅದರಲ್ಲಿ ತಪ್ಪಿಲ್ಲ ಎಂದು ತಾನು ಆಂಟಿ ಎಂದು ಕರೆದ ವಿಚಾರಕ್ಕೆ ಸಮಜಾಯಿಷಿ ನೀಡಿದರು.

ತೇಜಸ್ವಿ ಪ್ರಕಾಶ್ ತಾನು ಆಡಿದ ಮಾತು ಪರಿಸ್ಥಿತಿಯ ಪ್ರಭಾವವೇ ಹೊರತು ಅದು ಉದ್ದೇಶ ಪೂರ್ವಕ ಅಲ್ಲ ಎಂದು ಸಮರ್ಥನೆ ನೀಡಲು ಆರಂಭಿಸಿದರು. ಫಿನಾಲೆಗೆ ಒಂದು ದಿನ ಮುಂಚೆ ಕೂಡಾ ಇಬ್ಬರ ನಡುವೆ ಮತ್ತೊಮ್ಮೆ‌ ಈ ವಿಷಯ ಪ್ರಸ್ತಾಪವಾಯಿತು. ಶಮಿತಾ ಆಗ ತೇಜಸ್ವಿ ಪ್ರಕಾಶ್ ಗೆ,‌ ನೀನು ನನ್ನನ್ನು ಆಂಟಿ ಎಂದು ಕರೆದದ್ದು ತಪ್ಪು, ಅದನ್ನು ಯಾರೂ ಒಪ್ಪುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳಬೇಕೆ ಹೊರತು ಅದಕ್ಕೆ ಸಮರ್ಥನೆಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಆದರೆ ತೇಜಸ್ವಿ ಪ್ರಕಾಶ್ ನಾನು ನಿಮ್ಮನ್ನು ಕ್ಷಮಾಪಣೆ ಕೇಳಿದ್ದೇನೆ, ಆದರೆ ನಾನು ಆಂಟಿ ಎಂದು ಕರೆಯಬೇಕು ಎಂದು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ, ಆ ಸಂದರ್ಭದಲ್ಲಿ ಮಾತಿನ ಭರದಲ್ಲಿ, ಜನರು ಸಾಮಾನ್ಯವಾಗಿ ಬಳಸುವ ಪದವಾಗಿ ನಾನು ಆಂಟಿ ಎನ್ನುವ ಪದ ಬಳಸಿ ಬಿಟ್ಟೆ ಎಂದು ಮತ್ತೆ ಮೂರ್ನಾಲ್ಕು ಬಾರಿ ಆಗ ನಾನು ಆಂಟಿ, ಆಂಟಿ ಎನ್ನುವ ಪದ ಬಳಸಿಬಿಟ್ಟೆ ಎಂದು ಮತ್ತೆ ಮತ್ತೆ ಅದೇ ಪದ ಬಳಸಿದ್ದಾರೆ.

ಇದರಿಂದ ಬೇಸತ್ತ ಶಮಿತಾ ಅರಚಾಡುತ್ತಾ, ಕಣ್ಣೀರು ಹಾಕುತ್ತಾ ನಿನ್ನ ಮಾತನ್ನು ನಾನು ಒಪ್ಪುವುದಿಲ್ಲ, ನಿನ್ನ ಸಮರ್ಥನೆ ನನಗೆ ಬೇಡ ಎಂದು ಅಲ್ಲಿಂದ ಬಾತ್ರೂಮ್ ಏರಿಯಾಗೆ ಹೋಗಿದ್ದಾರೆ. ಅಲ್ಲಿ ತೇಜಸ್ವಿ ಪ್ರಕಾಶ್ ಅವರ ಬಾಯ್ ಫ್ರೆಂಡ್ ಕರನ್ ಕುಂದ್ರಾ ಹತ್ತಿರ ನಿನ್ನ ಗರ್ಲ್ ಫ್ರೆಂಡ್ ಔಟ್ ಆಫ್ ದಿ‌ ಮೈಂಡ್ ಆಗಿದ್ದಾಳೆ, ಆಡಿದ ಮಾತನ್ನು ತಪ್ಪೆಂದು ಒಪ್ಪದೇ ಸಮರ್ಥನೆ ಕೊಡ್ತಾ ಇದ್ದಾಳೆ ಎಂದಿದ್ದು, ಆಗ ಅಲ್ಲಿ ಕರನ್ ಮತ್ತು ಶಮಿತಾ ನಡುವೆ ಇನ್ನಷ್ಟು ಮಾತಿನ ಸ ಮ ರ ನಡೆದಿದೆ.

Leave A Reply

Your email address will not be published.