40 ರ ವಸಂತಕ್ಕೆ ಕಾಲಿಟ್ಟ ಮೌರ್ಯ ನಾಯಕಿ: ಹಾಟ್ ಹಾಟ್ ಆಗಿ ಸಿನಿಮಾಕ್ಕೆ ರೀ ಎಂಟ್ರಿ ನೀಡ್ತಿದ್ದಾರೆ ನಟಿ!!

Entertainment Featured-Articles News

ದಕ್ಷಿಣ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರನ್ನು ಪಡೆದುಕೊಂಡು, ಅನಂತರ ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಂಡು, ಸಿನಿಮಾ ರಂಗದಿಂದ ದೂರ ಉಳಿದರೂ ಸಹಾ ಕೆಲವು ನಟಿಯರನ್ನು ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಮಾತ್ರ ಮರೆಯುವುದಿಲ್ಲ. ಅಲ್ಲದೇ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಾರೆ ಹಾಗೂ ಆ ನಟಿಯರ ಕಮ್ ಬ್ಯಾಕ್ ನ ನಿರೀಕ್ಷೆಯನ್ನು ಸಹಾ ಮಾಡುತ್ತಾರೆ ಅವರ ಅಭಿಮಾನಿಯಳು ಎನ್ನುವುದು ಸಹಾ ವಾಸ್ತವ. ಏಕೆಂದರೆ ಅಭಿಮಾನಿಗಳ ಅಭಿಮಾನ ಅಂತದ್ದು.

ಹೀಗೆ ಸಿನಿಮಾಗಳಿಂದ ದೂರ ಉಳಿದರೂ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದ ನಟಿಯರಲ್ಲಿ ಒಬ್ಬರು ಮೀರಾ ಜಾಸ್ಮೀನ್‌. 2004 ರಲ್ಲಿ ಮೌರ್ಯ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದ ಮೀರಾ ಜಾಸ್ಮೀನ್ ಅವರು 2006 ರಲ್ಲಿ ಅರಸು ಸಿನಿಮಾದಲ್ಲಿ ಕಾಣಿಸಿಕೊಂಡರು. ಪುನೀತ್ ರಾಜ್‍ಕುಮಾರ್ ಅವರ ಸಿ‌ನಿಮಾಗಳ ಮೂಲಕ ಭರವಸೆಯ ನಟಿಯಾಗಿ ಹೆಸರು ಮಾಡಿದರು. ಬಹುಭಾಷಾ ನಟಿಯಾದ ಮೀರಾ ಜಾಸ್ಮೀನ್ ಕನ್ನಡದಲ್ಲಿ ದೇವರು ಕೊಟ್ಟ ತಂಗಿ, ಹೂ ಸಿನಿಮಾಗಳಲ್ಲಿ ಸಹಾ ನಟಿಸಿದರು.

ಮೀರಾ ಜಾಸ್ಮೀನ್ ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲೂ ದೊಡ್ಡ ಜನಪ್ರಿಯತೆ ಪಡೆದಿರುವ ನಟಿಯಾಗಿದ್ದಾರೆ. ಆದರೆ ಮದುವೆಯ ನಂತರ ಮೀರಾ ಅವರು ಸಿನಿಮಾಗಳಿಂದ ದೂರವೇ ಉಳಿದಿದ್ದರು. ಮೀರಾ ಕಡೆಯದಾಗಿ ಪೂರ್ಣ ಪ್ರಮಾಣದಲ್ಲಿ ನಟಿಸಿದ್ದು 2016 ರಲ್ಲಿ ಬಿಡುಗಡೆಯಾದ ‘ಪಾತು ಕಲ್ಪನಾಕಲಿ’ ಸಿನಿಮಾದಲ್ಲಿ, ಅನಂತರ 2018 ರಲ್ಲಿ ಪೂಮಾರಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಾದ ನಂತರ ಯಾವುದೇ ಹೊಸ ಸಿನಿಮಾದಲ್ಲಿ ಮೀರಾ ಕಾಣಿಸಿಕೊಂಡಿಲ್ಲ.

ಈಗ ಮತ್ತೊಮ್ಮೆ ಸಿನಿಮಾಗಳಿಗೆ ರೀ ಎಂಟ್ರಿ ನೀಡಲು ಸಜ್ಜಾದಂತೆ ಇದೆ, ಮುಂಬೈನ ಪ್ರೊಫೆಷನಲ್ ಒಬ್ಬರಿಂದ ಮಾಡಿಸಿರುವ ಫೋಟೋ ಶೂಟ್ ನ ಮೀರಾ ಜಾಸ್ಮೀನ್ ಅವರ ಗ್ಲಾಮರ್ ಫೋಟೋಗಳು ಸದ್ದು ಮಾಡುತ್ತಿವೆ. ಕೆಲವೇ ತಿಂಗಳುಗಳ ಹಿಂದೆ ಮೀರಾ ಜಾಸ್ಮೀನ್ ಇನ್ಸ್ಟಾಗ್ರಾಂ ಗೆ ಸಹಾ ಎಂಟ್ರಿ ನೀಡಿದ್ದಾರೆ. ಅವರು ಎಂಟ್ರಿ ನೀಡಿದ ಮೊದಲ ದಿನವೇ ಲಕ್ಷಕ್ಕಿಂತ ಅಧಿಕ ಫಾಲೋಯರ್ಸ್ ಅನ್ನು ಮೀರಾ ಪಡೆದುಕೊಂಡಿದ್ದರು. ಇನ್ಸ್ಟಾಗ್ರಾಂ ನಲ್ಲಿ ಮೀರಾ ತಮ್ಮ ಹೊಸ ಹೊಸ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಇನ್ನು ಇದೀಗ ಒಂದು ವಿರಾಮದ ನಂತರ ಮೀರಾ ಜಾಸ್ಮೀನ್ ಮಕಲ್ ಎನ್ನುವ ಮಲೆಯಾಳಂ ಸಿನಿಮಾ ಮೂಲಕ ಸಿನಿ ಲೋಕಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಇಂದು ಮೀರಾ ಜಾಸ್ಮೀನ್ ಅವರ ಜನ್ಮದಿನವಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ನಟಿಯ ಫೋಟೋಗಳಿಗೆ ಕಾಮೆಂಟ್ ಗಳನ್ನು ಮಾಡುತ್ತಾ ಜನ್ಮದಿನಕ್ಕೆ ತಮ್ಮ ಕಡೆಯಿಂದ ಶುಭ ಹಾರೈಸುತ್ತಿದ್ದಾರೆ ಅಲ್ಲದೇ ನಟಿಯ ಕಮ್ ಬ್ಯಾಕ್ ವಿಷಯ ತಿಳಿದು ಖುಷಿ ಪಡುತ್ತಿದ್ದಾರೆ.

Leave a Reply

Your email address will not be published.