HomeEntertainment40ರ ಸಂಭ್ರಮದಲ್ಲಿ ರಮ್ಯಾ: ಪೋಸ್ಟರ್, ಫಸ್ಟ್ ಲುಕ್ ಯಾವುದೂ ಇಲ್ಲ ಏಕೆ? ಇಲ್ಲಿದೆ ಉತ್ತರ

40ರ ಸಂಭ್ರಮದಲ್ಲಿ ರಮ್ಯಾ: ಪೋಸ್ಟರ್, ಫಸ್ಟ್ ಲುಕ್ ಯಾವುದೂ ಇಲ್ಲ ಏಕೆ? ಇಲ್ಲಿದೆ ಉತ್ತರ

ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ರಮ್ಯಾ ಅವರು ನಿನ್ನೆ ನಲ್ವತ್ತನೇ ವಸಂತಕ್ಕೆ‌ ಕಾಲಿರಿಸಿದ್ದಾರೆ. ನಟಿಯ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿ ಸೆಲೆಬ್ರಿಟಿಗಳು ಸಹಾ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ. ಆದರೆ ಜನ್ಮದಿನದ ವಿಶೇಷ ದಿನದಂದು ನಟಿ ಕರ್ನಾಟಕದಲ್ಲಿ ಇಲ್ಲ, ಬದಲಾಗಿ ಅವರು ಜಪಾನ್ ನಲ್ಲಿ ಇದ್ದಾರೆ ಎನ್ನುವುದು ವಿಶೇಷವಾಗಿದೆ. ಹೌದು, ನಟಿ ಜಪಾನ್ ನಿಂದಲೇ ತಮ್ಮ ವಯಸ್ಸಿನ ಕುರಿತಾಗಿ ಅಭಿಮಾನಿಗಳಿಗೆ‌ ಸಂದೇಶವನ್ನು ನೀಡಿದ್ದಾರೆ.‌ ವಯಸ್ಸು ನಲ್ವತ್ತಾದ ಖುಷಿಯಲ್ಲಿ ನಟಿಯು ಈ ವಿಚಾರವನ್ನು ತಾವೇ ಸ್ವತಃ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.‌

ರಮ್ಯಾ ಅವರಿಗೆ ಅವರ ಹೊಸ ಸಿನಿಮಾದ ನಾಯಕ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಇನ್ನೂ ಅನೇಕರು ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. ನಟಿಯು ತಮಗೆ ಶುಭಾಶಯ ಕೋರಿದವರಿಗೆ ಪ್ರತಿಕ್ರಿಯೆಯನ್ನು ಸಹಾ ನೀಡಿದ್ದಾರೆ. ಈ ಬಾರಿ ನಟಿಯ ಜನ್ಮದಿನಕ್ಕೆ ವಿಶೇಷ ಸಹಾ ಇದೆ. ಏಕೆಂದರೆ ರಮ್ಯಾ ಅವರ ನಿರ್ಮಾಣದ ಹೊಸ ಸಿನಿಮಾ ಶೂಟಿಂಗ್ ಮುಗಿದಾಗಿದೆ. ಅದೇ ವೇಳೆ ನಟಿ ಬಹುವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವ ಹೊಸ ಸಿನಿಮಾ ಉತ್ತರಾಕಾಂಡ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ನಟಿಯ ಜನ್ಮದಿನದಂದು ಅವರ ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ.

ಇನ್ನು ನಟಿ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರ ಜನ್ಮದಿನದಂದು ಅವರ ಸಿನಿಮಾದ ಪೋಸ್ಟರ್ ಅಥವಾ ಉತ್ತರಕಾಂಡ ಸಿನಿಮಾದ ಫಸ್ಟ್ ಲುಕ್ ಹೀಗೆ ಯಾವುದಾದರೊಂದು ಹೊರ ಬರುವುದು ಎಂದು ನಟಿಯ ಅಭಿಮಾನಿಗಳು ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಹಾಗೆ ಆಗಲಿಲ್ಲ. ಏಕೆಂದರೆ ನಟಿ ಜನ್ಮದಿನದಂದು ದೇಶದಲ್ಲೇ ಇಲ್ಲ.‌ ಅವರು ಜಪಾನ್ ಗೆ ಹಾರಿದ್ದಾರೆ. ಬಹುಶಃ ಅವರು ಇಲ್ಲಿ ಇರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಜನ್ಮದಿನದಂದು ಅವರು ಸಿನಿಮಾಗಳ ಹೊಸ ಅಪ್ಡೇಟ್ ಯಾವುದೂ ಬಂದಿಲ್ಲ ಎಂದು ಹೇಳಲಾಗುತ್ತಿದೆ.

- Advertisment -