4 ವರ್ಷ ಹಳೆಯ ಕೇಸ್ ನಲ್ಲಿ ತೆಲುಗಿನ ಸ್ಟಾರ್ ನಟರಿಗೆ ED ಯಿಂದ ಸಮನ್ಸ್ ಜಾರಿ: ನಟರಿಗೆ ಶುರುವಾಯ್ತಾ ನಡುಕ

Written by Soma Shekar

Published on:

---Join Our Channel---

ಸ್ಯಾಂಡಲ್ ವುಡ್ ನಲ್ಲಿ ಡ್ರ” ಗ್ಸ್ ಸಂಬಂಧಿಸಿದಂತೆ ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಡ್ರ” ಗ್ಸ್ ವಿಚಾರದಲ್ಲಿ ಕಳೆದ ವರ್ಷ ಬಾಲಿವುಡ್ ನಲ್ಲಿ ಕೂಡಾ ಸಾಕಷ್ಟು ಸದ್ದು-ಸುದ್ದಿ ಗಳಾಗಿತ್ತು. ಈಗ ಇವೆಲ್ಲವುಗಳ ನಡುವೆ ತೆಲುಗು ಚಿತ್ರರಂಗದಲ್ಲಿ ನಾಲ್ಕು ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಡ್ರ” ಗ್ಸ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಜಾರಿ ನಿರ್ದೇಶನಾಲಯವು (ED) ತೆಲುಗಿನ ಸ್ಟಾರ್ ನಟ-ನಟಿಯರಿಗೆ ಸಮನ್ಸ್ ಜಾರಿ ಮಾಡಿರುವ ವಿಷಯ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ತೆಲುಗು ಚಿತ್ರರಂಗದ ಖ್ಯಾತನಾಮರ ಹೆಸರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿರುವುದು ಇದೀಗ ಎಲ್ಲೆಡೆ ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಅಲ್ಲದೇ ನಾಲ್ಕು ವರ್ಷಗಳ ನಂತರ ತೆಲುಗು ಸಿನಿ ರಂಗದ ಸೆಲೆಬ್ರಿಟಿಗಳ ವಿಚಾರಣೆ ಮತ್ತೊಮ್ಮೆ ಎನ್ನುವ ವಿಚಾರ ಚರ್ಚೆಗಳನ್ನು ಹುಟ್ಟು ಹಾಕಿದೆ.

ಜಾರಿ ನಿರ್ದೇಶನಾಲಯವು ತೆಲುಗಿನ ನಟರು ಹಾಗೂ ನಿರ್ದೇಶಕರು ಸೇರಿದಂತೆ ಒಟ್ಟು 12 ಜನಕ್ಕೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ಇದರಲ್ಲಿ ಸ್ಟಾರ್ ನಟ ರವಿತೇಜ,‌ ರಾಣಾ ದಗ್ಗುಬಾಟಿ, ಸ್ಟಾರ್ ನಟಿಯಾಗಿರುವ ರಕುಲ್ ಪ್ರೀತ್ ಸಿಂಗ್ ಅಲ್ಲದೇ ಖ್ಯಾತ ನಟಿಯರಾದ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಅವರಿಗೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರಿಗೂ ಕೂಡಾ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದಿನ ಮಾ‌ ದ ಕ ವಸ್ತುಗಳ ಸೇವನೆಯ ಪ್ರಕರಣವು ಈ ಮೂಲಕ ಇದೀಗ ಮತ್ತೊಮ್ಮೆ ಜೀವ ಪಡೆದುಕೊಂಡಿದೆ.

ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೆ ಇದೇ ಆಗಸ್ಟ್ 31, ರಕುಲ್ ಪ್ರೀತ್ ಸಿಂಗ್ ಸೆಪ್ಟೆಂಬರ 6,‌ ರಾಣಾ ಮತ್ತು ರವಿತೇಜ ಸೆಪ್ಟೆಂಬರ್ 8 ಮತ್ತು 9 ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯವು ಸಮನ್ಸ್ ನಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎನ್ನಲಾಗಿದ್ದು, ನಟರು ಹಾಗೂ ನಿರ್ದೇಶಕರು ಸೇರಿದಂತೆ ಒಟ್ಟು 12 ಮಂದಿಯನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಯನ್ನು ನಡೆಸಲಿದೆ ಎಂದು ತಿಳಿಸಲಾಗಿದೆ. ಡ್ರ” ಗ್ಸ್ ಪ್ರಕರಣದಲ್ಲಿ 2017ರಲ್ಲಿ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್‌ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Leave a Comment