4 ವರ್ಷಗಳ ನಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ಪ್ರೇಮ: ಥ್ರಿಲ್ಲಾದ್ರು ಅಭಿಮಾನಿಗಳು

Written by Soma Shekar

Updated on:

---Join Our Channel---

ಕನ್ನಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಕಂಡು, ಸ್ಟಾರ್ ನಟಿಯಾಗಿ ಸ್ಥಾನ ಗಿಟ್ಟಿಸಿಕೊಂಡು ಅನಂತರ ನೆರೆಯ ತೆಲುಗಿನಲ್ಲಿ ಸಹಾ ತನ್ನ ಮೋಡಿಯನ್ನು ಮಾಡಿದ್ದ ನಟಿ ಕನ್ನಡತಿ ಪ್ರೇಮಾ ಅವರನ್ನು ಸಿನಿ ರಸಿಕರು ಹೇಗೆ ತಾನೇ ಮರೆಯಲು ಸಾಧ್ಯ?? ಓಂ, ನಮ್ಮೂರ ಮಂದಾರ ಹೂವೇ ಸಿನಿಮಾಗಳಲ್ಲಿ ಪ್ರೇಮ ಅವರ ಅಭಿಯನವು ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಅವರ ಜೋಡಿಯ ಮೋಡಿಗೆ ಸಿನಿ ಪ್ರೇಕ್ಷಕ ಮನಸೋತಿದ್ದು ಕೂಡಾ ನಿಜ. ಪ್ರೇಮ ಅವರು ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿದ್ದವರು.

ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಪ್ರೇಮಾ‌ ಅವರು ತೆಲುಗಿನಲ್ಲೂ ಇಂದಿಗೂ ಜನ ಗುರ್ತಿಸುವಂತಹ ಪಾತ್ರಗಳನ್ನು ಮಾಡಿದ್ದಾರೆ. ಇಂತಹ ಯಶಸ್ವಿ ನಟಿ ಪ್ರೇಮಾ ಅವರು 2009 ರಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಕೆಲವು ವರ್ಷಗಳ ನಂತರ ಅವರು ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡಿದರು. ಆದರೆ ಹೆಚ್ಚು ಸಿನಿಮಾಗಳನ್ನು ಅವರು ಮಾಡಲಿಲ್ಲ. ಅವರು ಕಮ್ ಬ್ಯಾಕ್ ಮಾಡಿದಾಗ ಸಹಜವಾಗಿಯೇ ಅಭಿಮಾನಿಗಳು ಖುಷಿ ಪಟ್ಟಿದ್ದರು. ಆದರೆ ಪ್ರೇಮಾ ಅವರು ಹೆಚ್ಚು ಸಿನಿಮಾ ಮಾಡಲಿಲ್ಲ.

ಪ್ರೇಮಾ ಅವರ ಅಭಿಮಾನಿಗಳು ಮತ್ತೆ ಪ್ರೇಮಾ ಅವರು ಯಾವಾಗ ತೆರೆಯ ಮೇಲೆ ಕಾಣಿಸಿಕೊಳ್ಳುವರು ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ನಟಿ ಪ್ರೇಮಾ ಅವರು ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ಬಣ್ಣ ಹಚ್ಚಿ ತೆರೆಯ ಮೇಲೆ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ಪ್ರೇಮಾ ಅವರು ಕೊನೆಯದಾಗಿ 2017 ರಲ್ಲಿ ಬಂದ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ನಂತರ ಅವರು ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.

ಈಗ ಪ್ರೇಮಾ ಅವರು ವೆಡ್ಡಿಂಗ್ ಗಿಫ್ಟ್ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಲ್ಕು ವರ್ಷಗಳ ನಂತರ ಒಂದು ಖಡಕ್ ಪಾತ್ರದ ಮೂಲಕ ಪ್ರೇಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮಾ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ, ವಕೀಲೆಯಾಗಿ ತೆರೆಯ ಮೇಲೆ ಏನು ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಅವರ ಅಭಿಮಾನಿಗಳು ತೆರೆಯ ಮೇಲೆಯೇ ನೋಡಿ ಆನಂದಿಸಬೇಕಾಗಿದೆ.

Leave a Comment