4 ಕೆಜಿ ತೂಕದ ಮದುವೆ ಆಮಂತ್ರಣ ಪತ್ರ: ಅದ್ದೂರಿ ಮದುವೆಯ ಈ ಕಾರ್ಡ್ ಒಂದರ ಬೆಲೆ ಎಷ್ಟು ಗೊತ್ತಾ??

0
204

ನಮ್ಮ ಭಾರತದಲ್ಲಿ ಮದುವೆಗಳಿಗೆ ವಿಶೇಷವಾದ ಸ್ಥಾನವಿದೆ. ಮದುವೆ ಎನ್ನುವುದೊಂದು ಸಂಭ್ರಮದ ಹಾಗೂ ಸಡಗರದ ಸಮಾರಂಭವಾಗಿರುತ್ತದೆ. ಮದುವೆ ಎನ್ನುವುದು ಒಂದು ಸಂಪ್ರದಾಯವೂ ಹೌದು. ಮನೆಯಲ್ಲಿ ಮದುವೆ ಇದೆ ಎಂದರೆ ಬಹಳಷ್ಟು ತಿಂಗಳುಗಳ ಹಿಂದೆಯೇ ಮದುವೆಯ ಕಾರ್ಯಗಳನ್ನು ಪ್ರಾರಂಭಿಸಲಾಗುತ್ತದೆ. ಮದುವೆಯ ಸಿದ್ಧತೆಗಳು ಬಹಳ ಜೋರಾಗಿ ನಡೆಯುತ್ತದೆ. ಇನ್ನು ಶ್ರೀಮಂತರು ಹಾಗೂ ಸೆಲೆಬ್ರಿಟಿಗಳ ಆದರೆ ಮದುವೆಯ ವಿಚಾರವು ಬಂದಾಗ ಅವರು ಅದ್ದೂರಿ ಮದುವೆಗಳಿಗಾಗಿ ಲಕ್ಷ ಗಳಿಂದ ಹಿಡಿದು ಕೋಟಿಗಳ ವರೆಗೂ ಹಣವನ್ನು ಖರ್ಚು ಮಾಡುತ್ತಾರೆ.

ಸಾಮಾನ್ಯ ಜನರು ಕೂಡಾ ಮದುವೆಯನ್ನು ತಮ್ಮ ಮನೆತನದ ಮಟ್ಟಿಗೆ ಬಹಳ ಅದ್ದೂರಿಯಾಗಿ ಮಾಡುವ ಪ್ರಯತ್ನವನ್ನು ಮಾಡುವುದು ಕೂಡಾ. ಸಾಲವನ್ನಾದರೂ ಮಾಡಿ ವೈಭವದ ಮದುವೆಯನ್ನು ಮಾಡಲಾಗುತ್ತದೆ. ಮದುವೆ ಎಂಬುದು ಜೀವನದಲ್ಲಿ ಒಂದು ಮರೆಯಲಾಗದ ಸಂಭ್ರಮದ ಕ್ಷಣವಾಗಬೇಕು, ಎಲ್ಲರೂ ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ಬಹಳ ಪ್ರಯತ್ನಗಳನ್ನು ಮಾಡುವರು.

ಇತ್ತೀಚಿನ ವರ್ಷಗಳಲ್ಲಂತೂ ಮದುವೆ ಒಂದು ಅದ್ದೂರಿ ಹಾಗೂ ವೈಭವದ ಸಂಕೇತ ಎನ್ನುವಂತೆ ಆಗಿದೆ. ಒಂದಕ್ಕಿಂತ ಇನ್ನೊಂದು ಮದುವೆ ಜನರ ಗಮನವನ್ನು ಸೆಳೆಯುತ್ತದೆ. ಈಗ ಇಂತಹದೇ ಒಂದು ಅದ್ದೂರಿ ಮದುವೆಯಲ್ಲಿ ವ್ಯಕ್ತಿಯೊಬ್ಬರು ಮಗನ ಮದುವೆಗೆ ವಿಭಿನ್ನವಾದ ರೀತಿಯಲ್ಲಿ ಆಮಂತ್ರಣ ಪತ್ರವನ್ನು ಮಾಡಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರದ ಫೋಟೋಗಳು ವೈರಲ್ ಆಗುತ್ತಿದೆ.

ಗುಜರಾತಿನ ಉದ್ಯಮಿಯಾಗಿರುವ ಮೌಲೇಶ್ ಬಾಯಿ ಉಖಾನಿ ಹಾಗೂ ಸೋನಲ್ ಬೇನ್ ಉಖಾನಿ ದಂಪತಿ ತಮ್ಮ ಮಗನ ವಿವಾಹದ ಸಂದರ್ಭದಲ್ಲಿ 4ಕೆಜಿ 280 ಗ್ರಾಂ ತೂಕದ ವಿಶೇಷವಾದ ಆಮಂತ್ರಣ ಪತ್ರವನ್ನು ಮಾಡಿಸಿದ್ದಾರೆ. ಈ ದಂಪತಿಯ ಮಗನ ಮದುವೆ ರಾಜಸ್ಥಾನದ ಜೋದ್ಪುರ ದಲ್ಲಿರುವ ಉಮೈದ್ ಭವನದಲ್ಲಿ ಇದೇ ನವೆಂಬರ್ 14ರಿಂದ 16ರವರೆಗೆ ಬಹಳ ಅದ್ದೂರಿಯಾಗಿ ನಡೆದಿದೆ. ಮೂರು ದಿನಗಳ ಈ ಮದುವೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ.

ಮದುವೆ ಈಗಾಗಲೇ ಮುಗಿದು ಹೋಗಿದ್ದರೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಆಮಂತ್ರಣ ಪತ್ರದ ಫೋಟೋಗಳು ಮಾತ್ರ ಇನ್ನೂ ಸದ್ದು ಮಾಡುತ್ತಿದೆ. ಈ ಮದುವೆ ಆಮಂತ್ರಣ ಪತ್ರ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಾಲ್ಕು ಕೆಜಿ ಗಿಂತಲೂ ಅಧಿಕ ತೂಕ ಇರುವ ಒಂದು ಆಮಂತ್ರಣ ಪತ್ರಿಕೆಗೆ ಎಷ್ಟು ಖರ್ಚಾಗಿದೆ ಎನ್ನುವುದು ಕೂಡಾ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ವರದಿಗಳ ಪ್ರಕಾರ ಒಂದು ಆಮಂತ್ರಣ ಪತ್ರಿಕೆಗೆ ಸುಮಾರು ಏಳು ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಆಮಂತ್ರಣ ಪತ್ರದ ಜೊತೆಗೆ ಡ್ರೈ ಫ್ರೂಟ್ಸ್, ದುಬಾರಿ ಬೆಲೆಯ ಚಾಕಲೇಟ್ ಗಳನ್ನು ಇರಿಸಲಾಗಿದೆ ಎನ್ನಲಾಗಿದೆ. ಇನ್ನು ಮೌಲೇಶ್ ಭಾಯ್ ಉಖಾನಿ ಗುಜರಾತಿನ ಸುಪ್ರಸಿದ್ಧ ಉದ್ಯಮಿಯಾಗಿದ್ದಾರೆ. ಇವರು ದ್ವಾರಕಾ ಶ್ರೀಕೃಷ್ಣ ಮಂದಿರದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ ಎನ್ನುವುದು ವಿಶೇಷ. ಮಗನ ಮದುವೆಯನ್ನು ಅವರು ಬಹಳ ಅದ್ದೂರಿಯಾಗಿ ನೆರವೇರಿಸಿದ್ದಾರೆ.

LEAVE A REPLY

Please enter your comment!
Please enter your name here