4 ಕಾರುಗಳು, 1 ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ಪರಾರಿಯಾದ ಆಫ್ಘನ್ ಅಧ್ಯಕ್ಷ ಆಶ್ರಫ್ ಘನಿ

0 2

ತಾ ಲಿ ಬಾ ನ್ ಅಟ್ಟಹಾಸಕ್ಕೆ ಆಫ್ಘಾನಿಸ್ತಾನ ಅಕ್ಷರಶಃ ನಲುಗಿ ಹೋಗುತ್ತಿದೆ. ಸಂಪೂರ್ಣವಾಗಿ ಅಫ್ಘಾನಿಸ್ತಾನವು ಉ” ಗ್ರರ ವಶಕ್ಕೆ ಒಳಪಟ್ಟಿದೆ. ಅಲ್ಲಿನ ಜನರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಜನ ತಮ್ಮ ದೇಶವನ್ನು ತೊರೆದು ಹೊರಗೆ ಸುರಕ್ಷಿತ ಸ್ಥಳಗಳಿಗೆ ಸೇರಲು ಪಡಿಪಾಟಲು ಪಡುವಂತಾಗಿದೆ. ಆದರೆ ಯಾವಾಗ ದೇಶವು ಉ ಗ್ರ ರ ಕೈಸೇರಿತೋ ಆ ಕೂಡಲೇ ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ಪರಾರಿಯಾಗಿದ್ದಾರೆ. ದೇಶ ಬಿಟ್ಟು ಓಡಿ ಹೋಗುವಾಗ ಆಫ್ಘನ್ ಅಧ್ಯಕ್ಷರು ಬರಿ ಕೈಯಲ್ಲಿ ಹೋಗಿಲ್ಲ, ಬದಲಾಗಿ ಸಾಕಷ್ಟು ಹಣವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸುದ್ದಿಯೊಂದು ಇದೀಗ ಹೊರ ಬಿದ್ದಿದ್ದು, ಕಾಬೂಲಿನಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಈ ವಿಷಯವನ್ನು ತಿಳಿಸಿದ್ದು, ಅಂತರರಾಷ್ಟ್ರೀಯ ಮಾದ್ಯಮ ಒಂದನ್ನು ಅದು ವರದಿ ಮಾಡಿದೆ.

ಆಫ್ಘನ್ ಅಧ್ಯಕ್ಷರು ತಮ್ಮ ಅರಮನೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಒಟ್ಟು ನಾಲ್ಕು ಕಾರುಗಳು ಹಾಗೂ ಒಂದು ಹೆಲಿಕಾಪ್ಟರ್ ನಲ್ಲಿ ತುಂಬಿಕೊಂಡು ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದಾರೆ ಎಂದು ರಷ್ಯಾದ ರಾಯಭಾರಿ ಕಚೇರಿ ವರದಿ ಮಾಡಿದೆ. ಅರಮನೆಯಲ್ಲಿ ರಹಸ್ಯವಾಗಿ ಇಟ್ಟಿದ್ದ ಹಣವನ್ನು ತುಂಬಿಕೊಂಡು ಹೋಗಲು ಸಾಧ್ಯವಾಗದ ಕಾರಣ ಆ ಹಣವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು, ಈಗ ಎಲ್ಲಾ ಹಣವು ಕೂಡ ಉ” ಗ್ರರ ಕೈ ಸೇರಲಿದೆ ಎಂದು ಕೂಡ ಹೇಳಲಾಗಿದೆ. ಆಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್ ಘನಿ ಪ್ರಸ್ತುತ ಎಲ್ಲಿ ಹೋಗಿದ್ದಾರೆ ಎನ್ನುವುದು ಇನ್ನೂ ರಹಸ್ಯವಾಗಿದೆ.

ಆಶ್ರಫ್ ಘನಿ ಅವರು ಮೊದಲು ತಜಕಿಸ್ತಾನ ಕ್ಕೆ ತೆರಳಲು ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಆದರೆ ತಜಕಿಸ್ತಾನದಲ್ಲಿ ಅವರ ವಿಮಾನವನ್ನು ಇಳಿಸಲು ಅಲ್ಲಿನ ಆಡಳಿತವು ಅನುಮತಿ ನೀಡಿಲ್ಲ. ತಜಕಿಸ್ತಾನದೊಳಕ್ಕೆ ಅವರ ಪ್ರವೇಶವನ್ನು ನಿರಾಕರಿಸಿದೆ ಎನ್ನಲಾಗಿದೆ. ಪ್ರಸ್ತುತ ಆಶ್ರಫ್ ಘನಿ ಅವರು ಓಮನ್ ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಕಡೆ ಅವರು ಅಮೆರಿಕದ ಕಡೆ ಪಯಣ ಬೆಳೆಸಿದ್ದಾರೆ ಎಂದು ವರದಿ ಮಾಡಲಾಗಿದೆ.
ದೇಶ ತೊರೆದು ಹೋಗುವ ಮುನ್ನ ಆಶ್ರಫ್ ಘನಿ ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ದೇಶದಲ್ಲಿ ರ ಕ್ತ ಪಾತವಾಗಲು ನಾನು ಬಿಡುವುದಿಲ್ಲ ಎಂದು ಬರೆದುಕೊಂಡು, ಅದಾದ ಕೆಲವೇ ಹೊತ್ತಿನಲ್ಲಿ ಅವರು ದೇಶದಿಂದ ಪಲಾಯನ ಮಾಡಿದ್ದಾರೆ.

ದೇಶದ ಅಧ್ಯಕ್ಷರೇ ದೇಶವನ್ನು ಬಿಟ್ಟು ಓಡಿ ಹೋಗಿರುವಾಗ ಅಲ್ಲಿನ ಪ್ರಜೆಗಳ ಪರಿಸ್ಥಿತಿ ಅತಂತ್ರವಾಗಿದೆ. ಅಲ್ಲಿನ ನಾಗರಿಕರು ಕೂಡ ದೇಶವನ್ನು ಬಿಟ್ಟು ಓಡಿ ಹೋಗುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ. ರಸ್ತೆ, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆಯು ಅಧಿಕವಾಗಿದೆ. ವಿಮಾನ ಏರಲು ಹೋಗಿ ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಮಾನದ ರೆಕ್ಕೆಗಳಲ್ಲಿ ಕುಳಿತು ಪಯಣಿಸಲು ಹೋಗಿರುವರು ಟೇಕಾಫ್ ವೇಳೆಯಲ್ಲಿ ಕೆಳಗೆ ಬಿದ್ದು ಸತ್ತಿದ್ದಾರೆ ಎನ್ನುವುದು ಕೂಡಾ ವರದಿಯಾಗಿದೆ.

Leave A Reply

Your email address will not be published.