30 ವರ್ಷಗಳ ನಂತರ ತನ್ನ ಮುಂದೆ ನಿಂತಿದ್ದ ಬಾಲ ನಟನ ಕಂಡು ನಟಿ ಖುಷ್ಬೂ ಮಾಡಿದ್ದು ಶಾಕಿಂಗ್!!

Entertainment Featured-Articles Movies News

ಮಾಸ್ಟರ್ ಮಂಜುನಾಥ್ ಕನ್ನಡ ಚಿತ್ರರಂಗ ಎಂದೂ ಕರೆಯಲಾಗದ ನಟ. ಬಾಲ ನಟನಾಗಿಯೇ ತನ್ನದೇ ಆದ ಛಾಪನ್ನು ಮೂಡಿಸಿದ ಮಾಸ್ಟರ್ ಮಂಜುನಾಥ್ ಅವರು ಕನ್ನಡದ ಯಾವುದೇ ಸ್ಟಾರ್ ನಟನಿಗಿಂತ ಕಡಿಮೆಯೇನಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಮಾಸ್ಟರ್ ಮಂಜುನಾಥ್ ಬಾಲನಟನಾಗಿರುವಾಗಲೇ ಚಿತ್ರರಂಗದಿಂದ ದೂರಾದರು. ಆದರೆ ಕನ್ನಡ ಚಿತ್ರ ಪ್ರೇಮಿಗಳು ಮಾತ್ರ ಅವರನ್ನು ಮರೆತಿಲ್ಲ. ಜನ ಅವರನ್ನು ಇಂದಿಗೂ ಮಾಸ್ಟರ್ ಮಂಜುನಾಥ್ ಎಂದೇ ಗುರ್ತಿಸುವುದು ಕೂಡಾ ಸತ್ಯ.

ಮಾಸ್ಟರ್ ಮಂಜುನಾಥ್ ಅವರು ನಟಿಸಿರುವ ಸಿನಿಮಾಗಳ ಹೆಸರು ಅನೇಕ ಇದೆ. ಅದರಲ್ಲಿ ರವಿಚಂದ್ರನ್ ಅವರ ರಣಧೀರ ಸಿನಿಮಾ ಸಹಾ ಒಂದು. ಈ ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ ನಾಯಕಿ ಖುಷ್ಬೂ ಅವರನ್ನು ರೇಗಿಸುವ ಏನ್ ಹುಡ್ಗೀರೋ, ಅದ್ಯಾಕಿಂಗ್ ಆಡ್ತೀರೋ ಹಾಡು ಇಂದಿಗೂ ಸಹಾ ಪಡ್ಡೆಗಳಿಗೆ ಫೇವರಿಟ್ ಹಾಡು. ಈ ಹಾಡಿನಲ್ಲಿ ಮಾಸ್ಟರ್ ಮಂಜುನಾಥ್ ಮತ್ತು ಖುಷ್ಬೂ ಜೊತೆಯಾಗಿ ಕಾಣಿಸಿದ್ದಾರೆ.

ವಾಹಿನಿಯೊಂದರ ಸಂದರ್ಶನದಲ್ಲಿ ಆ ದಿನಗಳನ್ನು ನೆನಪಿಸಿಕೊಂಡ ಮಾಸ್ಟರ್ ಮಂಜುನಾಥ್ ಅವರು ಸುಮಾರು 30 ವರ್ಷಗಳ ನಂತರ ಖುಷ್ಬೂ ಅವರನ್ನು ಭೇಟಿಯಾದಾಗ ನಡೆದ ಒಂದು ಆಸಕ್ತಿಕರ ಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ ಅವರ ಬಳಿ ಹೋಗಿ ಒಬ್ಬ ಅಭಿಮಾನಿಯಂತೆ ನಿಂತುಕೊಂಡರಂತೆ. ಆದರೆ ಖುಷ್ಬೂ ಅವರಿಗೆ ಅದು ಯಾರೆಂದು ಗುರುತು ಸಿಕ್ಕಿಲ್ಲ. ಈ ವೇಳೆ ಮಾಸ್ಟರ್ ಮಂಜುನಾಥ್ ನಟಿಗೆ ಊಟಕ್ಕೂ ಹೋಗದೇ ಬಿಡದೇ ನೋಡುತ್ತಿದ್ದರಂತೆ.

ಆಗ ಅಲ್ಲಿದ್ದವರು ನಟಿಗೆ ಹೋಗಲು ಬಿಡಿ ಎಂದು ಮಾಸ್ಟರ್ ಮಂಜುನಾಥ್ ಅವರಿಗೆ ಹೇಳಿದರೂ, ಅವರು ಅಲ್ಲಿಂದ ಕದಲಲೇ ಇಲ್ವಂತೆ. ಆಗ ಸಿಕ್ಕಾಪಟ್ಟೆ ಕೋಪಗೊಂಡ ಖುಷ್ಬೂ ಅವರು, ನಿಮಗೇನು ಬೇಕಾಗಿದೆ ಎಂದರಂತೆ.. ಮಾಸ್ಟರ್ ಮಂಜುನಾಥ್ ಅವರು ಮೇಡಂ ನಿಮಗಾಗಿ ಒಂದು ಹಾಡು ಹಾಡಬಹುದಾ? ಎಂದು ಕೇಳಿದ್ರಂತೆ. ಖುಷ್ಬೂ ಸರಿ ಎಂದಾಗ, ಮಾಸ್ಟರ್ ಮಂಜುನಾಥ್ ರಣಧೀರ ಸಿನಿಮಾದ ಏನ್ ಹುಡ್ಗೀರೋ, ಅದ್ಯಾಕಿಂಗ್ ಆಡ್ತೀರೋ ಹಾಡು ಹಾಡಿದರಂತೆ.

ಈ ಹಾಡು ಕೇಳಿದಾಗ ಖುಷ್ಬೂ ಅವರು ಮಾಸ್ಟರ್ ಮಂಜುನಾಥ್ ಅವರನ್ನು ನೋಡಿ, ಗುರುತು ಹಿಡಿದು ಸಿಕ್ಕಾಪಟ್ಟೆ ಆಶ್ಚರ್ಯ ಪಟ್ಟರಂತೆ. ಮಾಸ್ಟರ್ ಮಂಜುನಾಥ್ ಅವರನ್ನು ಬರೋಬ್ಬರಿ ಮೂವತ್ತು ವರ್ಷಗಳ ನಂತರ ನೋಡಿದ ಖುಷ್ಬೂ ಅವರು ಆ ಕ್ಷಣದಲ್ಲಿ ಖಂಡಿತ ಶಾಕ್ ಆಗಿದ್ರಂತೆ.. ಮಾಸ್ಟರ್ ಮಂಜುನಾಥ್ ಈ ಆಸಕ್ತಿಕರ ಹಾಗೂ ಕುತೂಹಲಕಾರಿ ಮಾಹಿತಿಯನ್ನು ಸುದ್ದಿ ಮಾದ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *