3ನೇ ಮದುವೆಗೆ ಸಜ್ಜಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ? ಆತನೊಂದಿಗೆ ಶ್ರೀಜಾ ಮೂರನೇ ವಿವಾಹ ಆಗ್ತಾರಂತೆ

Entertainment Featured-Articles Movies News

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಮದುವೆಯೆಂದರೆ ಅದೊಂದು ಫೋಟೋ ಈವೆಂಟ್ ಎನ್ನುವ ಹಾಗೆ ಆಗಿದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಮದುವೆಯೆನ್ನುವುದು ಒಂದು ಜೋಕ್ ಆದಂತೆ ಕಾಣುತ್ತಿದೆ. ಈಗ ಪ್ರೀತಿ ಅನ್ನುತ್ತಾರೆ, ನಂತರ ಮದುವೆ ಎನ್ನುತ್ತಾರೆ, ಅನಂತರ ಮಕ್ಕಳು ಎನ್ನುವ ಅವರು ಕೊನೆಗೆ ವಿಚ್ಛೇದನ ಘೋಷಣೆ ಮಾಡುತ್ತಾರೆ. ಪ್ರೀತಿ ಎಷ್ಟು ಬೇಗ ಈ ಸೆಲೆಬ್ರಿಟಿಗಳ ನಡುವೆ ಹುಟ್ಟುತ್ತದೆಯೋ ವಿಚ್ಛೇದನ ಕೂಡಾ ಅಷ್ಟೇ ಬೇಗ ಆಗುತ್ತಿದೆ. ಹೀಗೆ ಪ್ರೀತಿಸಿ ಮದುವೆಯಾಗಿ ಅನಂತರ ಬೇರೆಯಾದವರ ಪಟ್ಟಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳೇ ಇದ್ದಾರೆ.

ತೆಲುಗು ಸಿನಿಮಾ‌ ರಂಗದ ಸ್ಟಾರ್ ಜೋಡಿ ಸಮಂತಾ ನಾಗಚೈತನ್ಯ, ಬಾಲಿವುಡ್ ನಟ ಅಮೀರ್ ಖಾನ್, ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ವಿಷಯ ಹೀಗಿರುವಾಗಲೇ ಕೆಲವು ಜೋಡಿಗಳು ಮಾತ್ರ ಅಧಿಕೃತವಾಗಿ ತಮ್ಮ ವಿಚ್ಛೇದನದ ವಿಷಯವನ್ನು ಪ್ರಕಟಣೆ ಮಾಡದೇ, ಸೋಶಿಯಲ್ ಮೀಡಿಯಾ ಗಳಲ್ಲಿ ವಿವಿಧ ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನದ ವಿಷಯವನ್ನು ಪರೋಕ್ಷವಾಗಿ ಬಹಿರಂಗ ಪಡಿಸುತ್ತಿದ್ದಾರೆ.

ಈಗ ಈ ಪಟ್ಟಿಗೆ ಸೇರ್ಪಡೆಯಾಗಿರುವುದು ತೆಲುಗು ಚಿತ್ರರಂಗದ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಶ್ರೀಜಾ. ಮೆಗಾಸ್ಟಾರ್ ಚಿರಂಜೀವಿ ಅವರ ಮಗಳಾದ ಶ್ರೀಜಾ ಮೊದಲು ಪ್ರೇಮದಲ್ಲಿ ಬಿದ್ದು ಶಿರೀಷ್ ಭರದ್ವಾಜ್ ಜೊತೆ ಮದುವೆಯಾದರು. ಆಕೆ ಒಂದು ಮಗುವಿನ ತಾಯಿಯಾದರು. ಆದರೆ ಆನಂತರ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ನೀಡಿ ಪತಿಯಿಂದ ದೂರವಾದರು.‌ ಆನಂತರ ತಂದೆ ನೋಡಿ ಕಲ್ಯಾಣ್ ದೇವ್ ಜೊತೆಗೆ ವೈವಾಹಿಕ ಜೀವನಕ್ಕೆ ಮತ್ತೊಮ್ಮೆ ಅಡಿಯಿಟ್ಟರು.

ಶ್ರೀಜಾ ಮತ್ತೊಂದು ಮಗುವಿನ ತಾಯಿಯಾದರು, ಆದರೆ ಕಲ್ಯಾಣ್ ದೇವ್ ಜೊತೆಗೂ ಕೂಡಾ ವೈಮನಸ್ಸು ಉಂಟಾದ ಕಾರಣ ಆತನಿಂದ ದೂರವಾಗಿದ್ದು, ಅವರು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶ್ರೀಜಾ ತಮ್ಮ ವಿಚ್ಛೇದನದ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರಿನಲ್ಲಿ ಆದ ಬದಲಾವಣೆ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಪರೋಕ್ಷವಾಗಿ ಪತಿಯಿಂದ ದೂರವಾಗಿರುವ ವಿಷಯವನ್ನು ತಿಳಿಸಿದ್ದಾರೆ.

ಈಗ ಇವೆಲ್ಲವುಗಳ ನಡುವೆ ಶ್ರೀಜಾ ಕುರಿತಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಶ್ರೀಜಾ ತಮ್ಮ ಆತ್ಮೀಯ ಗೆಳೆಯನೊಬ್ಬನನ್ನು ಮೂರನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಸುದ್ದಿಗಳು ಹರಿದಾಡಿದರೂ ಸಹಾ ಮೆಗಾ ಕುಟುಂಬದ ಯಾವುದೇ ಒಬ್ಬ ಸದಸ್ಯರು ಈ ವಿಷಯದ ಕುರಿತಾಗಿ ಮಾತನಾಡಿಲ್ಲ. ಈ ವಿಚಾರವಾಗಿ ಮೆಗಾಸ್ಟಾರ್ ಕುಟುಂಬ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಗಳ ಮೊದಲನೇ ಮದುವೆ ಮುರಿದು ಬಿದ್ದ ನಂತರ ಏಳು ವರ್ಷಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ತಮ್ಮ ಮಗಳಿಗೆ ಕಲ್ಯಾಣ್ ದೇವ್ ಜೊತೆಗೆ ಎರಡನೇ ಮದುವೆಯನ್ನು ಮಾಡಿಸಿದ್ದರು. ಆದರೆ ಈಗ ಆ ಮದುವೆಯು ಕೂಡಾ ವಿಫಲವಾಗಿರುವ ಕಾರಣದಿಂದ ಪತಿಯಿಂದ ದೂರಾಗಿರುವ ತಮ್ಮ ಮಗಳ ವಿಚಾರದಲ್ಲಿ‌ ಮೆಗಾಸ್ಟಾರ್ ಯಾವ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.