3ನೇ ಮದುವೆಗೆ ಸಜ್ಜಾದ ಮಿ.ಪರ್ಫೆಕ್ಟ್ ಆಮೀರ್ ಖಾನ್: ಅವರ 3 ನೇ ಹೆಂಡತಿ ಆಗೋದು ಇವರೇ ನೋಡಿ

Written by Soma Shekar

Published on:

---Join Our Channel---

ಬಾಲಿವುಡ್ ಎಂದೊಡನೆ ಅಲ್ಲಿ ಖಾನ್ ತ್ರಯರ ಅಬ್ಬರ ಮೊದಲಿನಿಂದಲೂ ಇರುವ ವಿಷಯ ತಿಳಿದೇ ಇದೆ. ಸಲ್ಮಾನ್ ಖಾನ್, ಶಾರೂಖ್ ಖಾನ್ ಹಾಗೂ ಅಮೀರ್ ಖಾನ್ ಬಾಲಿವುಡ್ ನಲ್ಲಿ ದಿಗ್ಗಜ ನಟರೆನಿಸಿಕೊಂಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಇನ್ನೂ ಅವಿವಾಹಿತರಾಗಿಯೇ ಉಳಿದು ಹೋದರೆ, ಶಾರೂಖ್ ಖಾನ್ ಗೌರಿ ಖಾನ್ ಹಾಗೂ ಮಕ್ಕಳ ಜೊತೆ ನೆಮ್ಮದಿಯ ಸಂಸಾರ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಮತ್ತೋರ್ವ ಖಾನ್ ಅಮೀರ್ ಖಾನ್ ತನ್ನ ಮದುವೆಗಳಿಂದಲೇ ದೊಡ್ಡ ಸದ್ದು ಮಾಡಿರುವುದು ಗೊತ್ತಿರುವ ವಿಷಯವೇ ಆಗಿದೆ.

ಅಮೀರ್ ಖಾನ್ ಕೆಲವೇ ದಿನಗಳ ಹಿಂದೆ ಎರಡನೇ ಪತ್ನಿಗೂ ವಿಚ್ಛೇದನವನ್ನು ನೀಡಿದ್ದಾರೆ. ಹೀಗೆ ತಮ್ಮ ಎರಡು ಮದುವೆಗಳಿಂದ, ಇಬ್ಬರು ಪತ್ನಿಯರಿಂದ ಅಮೀರ್ ಖಾನ್ ದೂರಾಗಿದ್ದಾರೆ. ಅಮೀರ್ ಖಾನ್ ಕಿರಣ್ ರಾವ್ ಜೊತೆಗೆ ಮದುವೆಯಾಗಲು ತಮ್ಮ ಮೊದಲ ವಿವಾಹಕ್ಕೆ ಅಂತ್ಯ ಹಾಡಿದ್ದರು. ಹೀಗೆ ಇಷ್ಟಪಟ್ಟು ಮದುವೆಯಾದ ಪತ್ನಿಗೆ ಆಗಸ್ಟ್ ನಲ್ಲಿ ವಿಚ್ಛೇದನ ನೀಡಿದಾಗ ಎಲ್ಲರಿಗೂ ಇದು ಶಾ ಕ್ ನೀಡಿತ್ತು. ಅಲ್ಲದೇ ಇಬ್ಬರೂ ಕೂಡಾ ಪರಸ್ಪರ ಒಪ್ಪಿಗೆಯಿಂದಲೇದಲ ದೂರಾಗುತ್ತಿರುವುದಾಗಿ ಹೇಳಿದ್ದರು.

ಇನ್ನು ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಇದೀಗ ಅಮೀರ್ ಖಾನ್ ಮೂರನೇ ಮದುವೆಗೆ ಸಜ್ಜಾಗಿದ್ದಾರೆನ್ನುವ ಸುದ್ದಿಯೊಂದು ಬಾಲಿವುಡ್ ನಲ್ಲಿ ಸದ್ದು ಮಾಡಿದೆ. ಹಾಗಾದ್ರೆ ಅಮೀರ್ ಖಾನ್ ಮೂರನೇ ಪತ್ನಿಯಾಗಲಿರುವ ಅದೃಷ್ಟವಂತೆಯಾದರೂ ಯಾರು?? ಎನ್ನುವುದಾದರೆ, ಅದು ಕೂಡಾ ಒಬ್ಬ ಜನಪ್ರಿಯ ನಟಿಯೇ ಎನ್ನುವುದು ಇನ್ನೂ ಆಸಕ್ತಿಕರ ವಿಷಯವಾಗಿದೆ. ಹಾಗಾದರೆ ಅಮೀರ್ ಖಾನ್ ಮದುವೆಯಾಗಲಿರುವ ಆ ನಟಿ ಯಾರು?? ತಿಳಿಯೋಣ ಬನ್ನಿ.

ಸದ್ಯಕ್ಕೆ ಹರಡಿರುವ ಸುದ್ದಿಗಳೇನೆಂದರೆ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ ಬಿಡುಗಡೆ ನಂತರ ಅಮೀರ್ ಖಾನ್ ಮೂರನೇ ಮದುವೆಯನ್ನು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಮೀರ್ ಖಾನ್ ನಟಿಸಿದ್ದ ಸೂಪರ್‌ ಹಿಟ್ ಸಿನಿಮಾ ದಂಗಲ್ ನಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಫಾತಿಮಾ ಸನಾ ಶೇಕ್ ಜೊತೆಗೆ ಅಮೀರ್ ವಿವಾಹ ನಡೆಯಲಿದೆ ಎನ್ನಲಾಗಿದೆ. ಫಾತಿಮಾ ಹಾಗೂ ಅಮೀರ್ ನಡುವಿನ ಸಂಬಂಧದ ಕುರಿತಾಗಿ ಈ ಹಿಂದೆ ಕೂಡಾ ಸುದ್ದಿಗಳಾಗಿದ್ದವು.

ಅಮೀರ್ ಹಾಗೂ ಫಾತಿಮಾ ನಡುವಿನ ಸ್ನೇಹ, ಒಡನಾಟ ಹಾಗೂ ಅವರ ಆತ್ಮೀಯತೆ ಗಳ ಕಾರಣದಿಂದಾಗಿಯೇ ಕಿರಣ್ ರಾವ್ ಪತಿಗೆ ವಿಚ್ಛೇದನ ನೀಡುವ ನಿರ್ಣಯವನ್ನು ಮಾಡಿದ್ದರು ಎನ್ನಲಾಗಿದೆ. ಆದರೆ ಅದನ್ನು ಕಿರಣ್ ರಾವ್ ಅವರು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಅಮೀರ್ ಹಾಗೂ ಕಿರಣ್ ರಾವ್ ನಡುವಿನ ವಿಚ್ಚೇದನಕ್ಕೆ ಕಾರಣ ಫಾತಿಮಾ ಸನಾ ಶೇಕ್ ಎಂದು ಅಭಿಮಾನಿಗಳು ಫಾತಿಮಾ ರನ್ನು ಟ್ರೋಲ್ ಮಾಡಿದ್ದು ಉಂಟು.

Leave a Comment