25 ವರ್ಷಗಳ ಹಿಂದೆಯೇ ಐಶ್ವರ್ಯ ರೈಗೆ RTPCR ಟೆಸ್ಟ್: ನಟ ಬಾಬ್ಬಿ ಡಿಯೋಲ್ ಮಾತು ಕೇಳಿ ಅಭಿಮಾನಿಗಳು ಶಾಕ್!!

Entertainment Featured-Articles News

ಕೋವಿಡ್ ಬಂದ ಮೇಲೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಎನ್ನುವುದು ಒಂದು ಸಾಮಾನ್ಯವಾದ ವಿಷಯವಾಗಿ ಹೋಯಿತು. ಪ್ರತಿಯೊಂದು ವಿಚಾರದಲ್ಲೂ ಸಹಾ ಆರ್ ಟಿ ಪಿ ಸಿ ಆರ್ ಟೆಸ್ಟ್ ನ ವರದಿಯನ್ನು ಕಡ್ಡಾಯ ಕೂಡಾ ಮಾಡಲಾಯಿತು. ಈಗ ಇದೇ ಟೆಸ್ಟ್ ಕುರಿತಾಗಿ ಅಂದರೆ ಆರ್ ಟಿ ಪಿ ಸಿ ಆರ್ ನ ಸ್ವ್ಯಾಬ್ ಟೆಸ್ಟ್ ಕುರಿತಾಗಿ ಒಂದು ಫೋಟೋ ವೈರಲ್ ಆಗುವ ಮೂಲಕ ಸಖತ್ ಸದ್ದು ಮಾಡುತ್ತಿದೆ. ಹೌದು, ನಟಿ ಐಶ್ವರ್ಯ ರೈ ಅವರು ಸುಮಾರು 25 ವರ್ಷಗಳ ಹಿಂದೆಯೇ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು ಎನ್ನುವ ಮೂಲಕ ನಟ ಬಾಬ್ಬಿ ಡಿಯೋಲ್ ಅವರು ಐಶ್ವರ್ಯ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ಈ ಫೋಟೋವನ್ನು ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಾಬಿ ಡಿಯೋಲ್ ಇನ್ಸ್ಟಾಗ್ರಾಂ ನಲ್ಲಿ ಸಣ್ಣ ವೀಡಿಯೋ ಶೇರ್ ಮಾಡಿಕೊಂಡಿದ್ದು, ಅವರನ್ನು ಗೇಲಿ ಮಾಡುವ, ವ್ಯಂಗ್ಯ ಮಾಡಿರುವ ಮೀಮ್ಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಅವರು ಐಶ್ವರ್ಯ ರೈ ದಶಕಗಳ ಮೊದಲೇ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು ಎಂದಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಇದೇನಾಯ್ತು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಬಾಬಿ ಹಾಗೂ ಐಶ್ವರ್ಯ ರೈ ಔರ್ ಪ್ಯಾರ್ ಹೋಗಯಾ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆ ಸಿನಿಮಾದ ಒಂದು ದೃಶ್ಯವನ್ನು ಟ್ರೋಲಿಗರು ಬಾಬಿ ದಶಕಗಳ ಹಿಂದೆಯೇ ಸ್ವ್ಯಾಬ್ ಟೆಸ್ಟ್ ನ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು ಎನ್ನುವ ಮಾತನ್ನು ಹೇಳಿ ಕಾಲೆಳೆದಿದ್ದಾರೆ. ಬಾಬಿ ಈ ಫೋಟೋವನ್ನು ಸಹಾ ವೀಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಬಾಬಿ ಅದರ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡು ತಮಾಷೆ ಮಾಡಿದ್ದಾರೆ.

ಬಾಬ್ಬಿ ನನ್ನ ವೇಗ ಕಾಲಕ್ಕಿಂತಲೂ ಸೂಪರ್ ಫಾಸ್ಟ್. ಹಲವು ವಿಷಯಗಳಲ್ಲಿ ನಾನು ಪೇಟೆಂಟ್ ಪಡೆಯಬೇಕಾಗಿದೆ. ಆ ಆರ್ ಟಿ ಪಿ ಸಿ ಆರ್ ಬಗ್ಗೆ ನಾನು ನೆನಪಿಸಲೇ ಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯ ರೈ 25 ವರ್ಷಗಳ ಹಿಂದೆಯೇ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡಿಸಿದ್ದರು. ನಿಮಗೆ ನಂಬಿಕೆ ಇಲ್ಲ ಎಂದರೆ ಔರ್ ಪ್ಯಾರ್ ಹೋಗಯಾ ಸಿನಿಮಾ ನೋಡಿ ಎಂದು ಹೇಳಿದ್ದಾರೆ. ಅಲ್ಲದೇ ನಾನೇ ಅವರಿಗೆ ಸ್ವ್ಯಾಬ್ ಟೆಸ್ಟ್ ಮಾಡಿದ್ದೆ ಎಂದಿದ್ದಾರೆ ಬಾಬ್ಬಿ.

ವೀಡಿಯೋ ಶೇರ್ ಮಾಡಿದ ನಂತರ ಬಾಬ್ಬಿ ಐಶ್ವರ್ಯ ರೈ ಅವರಿಗೆ ಕ್ಷಮೆ ಯನ್ನು ಸಹಾ ಹೇಳಿದ್ದಾರೆ. ಬಾಬ್ಬಿ ಡಿಯೋಲ್ ಶೇರ್ ಮಾಡಿದ ಈ ವೀಡಿಯೋ ವನ್ನು ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಅಲ್ಲದೇ ಅನೇಕರು ಮೆಚ್ಚುಗೆಯನ್ನು ನೀಡಿದ್ದಾರೆ. ನೆಟ್ಟಿಗರು ವೀಡಿಯೋಗೆ ತಮಾಷೆಯಿಂದ ಉತ್ತರಗಳನ್ನು ಸಹಾ ನೀಡಿ ನಗುತ್ತಿದ್ದಾರೆ. ಒಟ್ಟಾರೆ ಐಶ್ವರ್ಯ ರೈ ಅನ್ನು ಬಾಬ್ಬಿ ಚೆನ್ನಾಗಿ ಟ್ರೋಲ್ ಮಾಡಿದ್ದಾರೆ ಅನ್ನೋದು ನೆಟ್ಟಿಗರ ಅಭಿಪ್ರಾಯ.

Leave a Reply

Your email address will not be published.