24 ಗಂಟೆಗೂ ಮೊದಲೇ ತಿರುಗಿ ಹೊಸ ದಾಖಲೆ ಬರೆದ ಭೂಮಿ: ಕಾದಿದೆಯಾ ಗಂಡಾಂತರ? ಎಚ್ಚರಿಕೆ ನೀಡಿದ ಸಂಶೋಧಕರು!!

Written by Soma Shekar

Published on:

---Join Our Channel---

ನಮ್ಮ ಭೂಮಿಯು ತನ್ನ ಕಕ್ಷೆಯ ತಾನು ಸುತ್ತುತ್ತದೆ ಎನ್ನುವುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಅಲ್ಲದೇ ಭೂಮಿಯು ಈ ರೀತಿ ಸುತ್ತುವುದಕ್ಕೆ ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳತ್ತದೆ ಎ‌ಂದು ವೈಜ್ಞಾನಿಕವಾಗಿ ತಿಳಿಸಲಾಗಿದೆ. ಈ ಸಮಯದಲ್ಲಿ ಹೆಚ್ಚು ಕಡಿಮೆಯಾದರೆ ಅನಾಹುತಗಳು ಸಂಭವಿಸಬಹುದು ಎಂದು ಹೇಳುವರು. ಆದರೆ ಕೆಲವು ತಜ್ಞರು ಇದರಿಂದ ತೊಂದರೆಗಳು ಅಥವಾ ಅನಾಹುತಗಳು ಏನೂ ಸಂಭವಿಸುವುದಿಲ್ಲ ಎಂದು ಸಹಾ ಹೇಳುತ್ತಾರೆ. ಈಗ ತಜ್ಞರು ನುಡಿದಂತೆ ನಡೆದಿದೆಯೇನೋ ಎನ್ನುವ ಒಂದು ಅಚ್ಚರಿಯ ವಿದ್ಯಾಮಾನವೊಂದು ನಮ್ಮ ನಭೋಮಂಡಲದಲ್ಲಿ ನಡೆದಿದೆ‌.

ಇದೇ ಜುಲೈ 29 ರಂದು ನಮ್ಮ ಭೂಮಿ ತಾನು ನಿರ್ದಿಷ್ಟ ಸಮಯಕ್ಕಿಂತ ಮೊದಲೇ ತನ್ನ ಸುತ್ತನ್ನು ಪೂರ್ಣ ಮಾಡಿದೆ ಎನ್ನಲಾಗಿದೆ. ಹೌದು ಜುಲೈ 29 ರಂದು ಭೂಮಿ 24 ಗಂಟೆಗಳಿಗಿಂತ 1.59 ಮಿಲಿಯನ್ ಸೆಕಂಡ್ ಕಡಿಮೆ ಅವಧಿಯಲ್ಲಿ ತನ್ನ ಸುತ್ತನ್ನು ಪೂರ್ಣ ಗೊಳಿಸಿದೆ ಎನ್ನುವ ಅಚ್ಚರಿಯ ವಿಚಾರವೊಂದು ಹೊರ ಬಂದಿದ್ದು, ಈ ಸುದ್ದಿ ಕೇಳಿ ಎಲ್ಲರೂ ಸಹಾ ಆಶ್ಚರ್ಯ ಪಡುತ್ತಿದ್ದಾರೆ. ಭೂಮಿಯ ಈ ಚಲನೆಯು ಇದೀಗ ಅತಿ ಚಿಕ್ಕ ದಿನದ ಹೊಸ ದಾಖಲೆಯೊಂದನ್ನು ಬರೆದಿದೆ. ಅಲ್ಲದೇ ಈ ವಿಚಾರವಾಗಿ ಸಂಶೋಧಕರು ಹೊಸ ಎಚ್ಚರಿಕೆಯ ಸಂದೇಶವನ್ನು ಸಹಾ ನೀಡಿದ್ದಾರೆ.

ಹೌದು, ಸಂಶೋಧಕರು ಇಂತಹುದೊಂದು ವಿದ್ಯಮಾನದಿಂದ ಸ್ಮಾರ್ಟ್‌ಫೋನ್, ಕಂಪ್ಯೂಟರ್‌ ಹಾಗೂ ಸ್ಯಾಟಲೈಟ್ ಸೇರಿದಂತೆ ಸಂಪೂರ್ಣ ಸಂವಹನ ವ್ಯವಸ್ಥೆಯಲ್ಲಿ ಭಾರೀ ಗೊಂದಲ ಸೃಷ್ಟಿಯಾಗಬಹುದಾದ ಸಾಧ್ಯತೆಯ ಎಚ್ಚರಿಕೆಯನ್ನು ನೀಡಿದ್ದಾರೆ. ವಿಶ್ವದ ಪ್ರಮುಖ ಮಾದ್ಯಮಗಳು ಈ ವಿಚಾರವನ್ನು ವರದಿ ಮಾಡಿದ್ದು, ಭೂಮಿ ತನ್ನ ಸುತ್ತುವ ವೇಗವನ್ನು ಹೆಚ್ಚು ಮಾಡಿಕೊಂಡಿದ್ದು, 50 ವರ್ಷಗಳ ಚಿಕ್ಕ ದಿನಗಳ ಹಂತವು ಈಗ ಆರಂಭವಾಗಿರಬಹುದು ಎಂದು ಸಹಾ ಹೇಳಲಾಗಿದೆ.

ಭೂಮಿಯು ಸುತ್ತುವ ವೇಗವನ್ನು 1960 ರಿಂದಲೂ ಮಾಪನ ಮಾಡಲಾಗುತ್ತಿದ್ದು, ಜುಲೈ 19,2020 ರಂದು ಭೂಮಿ 1.47 ಮಿಲಿ ಸೆಕೆಂಡ್‌ ಕಡಿಮೆ ಅವಧಿಯಲ್ಲಿ ಭೂಮಿ ತನ್ನನ್ನು ತಾನು ಸುತ್ತಿಕೊಂಡಿದ್ದು ಅದು ಇದುವರೆಗಿನ ಅತಿ ಚಿಕ್ಕ ದಿನದ ದಾಖಲೆಯಾಗಿತ್ತು ನಂತರ 2021 ರಲ್ಲೂ ಸಹ ಭೂಮಿ ಸುತ್ತುವಿಕೆ ವೇಗವನ್ನು ಸ್ವಲ್ಪ ಹೆಚ್ಚಿಸಿಕೊಂಡಿದ್ದರೂ ಈ ದಾಖಲೆಯನ್ನು ಮುರಿದಿರಲಿಲ್ಲ. ಆದರೆ ಈಗ ಜುಲೈ 29 ರಂದು ಭೂಮಿ 1.59 ಮಿಲಿ ಸೆಕೆಂಡ್ ಕಡಿಮೆ ಅವಧಿಯಲ್ಲಿ ಸುತ್ತುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

Leave a Comment