24 ಗಂಟೆಗಳ ಮನರಂಜನೆ: ಬರ್ತಿದೆ ಓಟಿಟಿಯಲ್ಲಿ ಬಿಗ್ ಬಾಸ್ ನಾನ್ ಸ್ಟಾಪ್ ಮನರಂಜನೆ!!

Entertainment Featured-Articles News

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ತನ್ನ 15ನೇ ಸೀಸನ್ ಮುಗಿಸಿದೆ. ಹಿಂದಿಯಲ್ಲಿ ಮಾತ್ರವೇ ಅಲ್ಲದೇ ಬಿಗ್ಬಾಸ್ ಕನ್ನಡ, ತೆಲುಗು,‌ ತಮಿಳು, ಮಲಯಾಳಂ ಮರಾಠಿ ಹೀಗೆ ಅನ್ಯ ಭಾಷೆಗಳಲ್ಲಿ ಕೂಡಾ ಪ್ರಸಾರವಾಗುವ ಮೂಲಕ ಅಲ್ಲಿನ ಜನರ ಅಭಿಮಾನವನ್ನು ಪಡೆದುಕೊಂಡಿದೆ. ಪ್ರತಿ ಬಾರಿಯೂ ಕೂಡಾ ಎಲ್ಲಾ ಅಡ್ಡಿ-ಆ ತಂ ಕಗಳನ್ನು, ವಿ ವಾ ದ ಗಳನ್ನು ಹಿಂದೆ ಹಾಕಿ ಮತ್ತೊಮ್ಮೆ ಹೊಸದಾಗಿ ರೂಪುಗೊಂಡು, ತನ್ನ ಅಭಿಮಾನಿಗಳಿಗೆ ಮನರಂಜನೆಯ ವಿಷಯದಲ್ಲಿ ಹೊಸ ಹೊಸ ಅನುಭೂತಿ ನೀಡಲು ಬರುತ್ತದೆ ಬಿಗ್ ಬಾಸ್.

ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೇ ಯಶಸ್ವಿ 8 ಸೀಸನ್ ಗಳನ್ನು ಮುಗಿಸಿದೆ. 9ನೇ ಸೀಸನ್ ಯಾವಾಗ ಎನ್ನುವುದರ ಅಧಿಕೃತ ಪ್ರಕಟಣೆ ಇನ್ನೂ ಆಗಿಲ್ಲ. ನೆರೆಯ ತೆಲುಗು ರಾಷ್ಟ್ರಗಳಲ್ಲಿ ಬಿಗ್ ಬಾಸ್ ಐದು ಯಶಸ್ವಿ ಸೀಸನ್ ಗಳನ್ನು ಮುಗಿಸಿದೆ. ಆದರೆ ಈ ಬಾರಿ ಅಂದರೆ ಸೀಸನ್ 5 ಮಾತ್ರ ನಿರೀಕ್ಷಿತ ಮಟ್ಟಕ್ಕೆ ಯಶಸ್ಸು ಪಡೆಯುವಲ್ಲಿ ವಿಫಲವಾಗಿದೆ. ಬಿಗ್ ಬಾಸ್ ನಲ್ಲಿನ ಟಾಸ್ಕ್ ಹಾಗೂ ಮನರಂಜನೆ ವಿಷಯಕ್ಕಿಂತ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ನಡುವೆ ನಡೆದಂತಹ ಗ ಲಾ ಟೆ, ಗ ಲ ಭೆಗಳು, ಮಿತಿಮೀರಿದ ವರ್ತನೆ ಹಾಗೂ ಅನವಶ್ಯಕ ವಿಚಾರಗಳಿಂದಲೇ ಹೆಚ್ಚು ಸುದ್ದಿ ಯಾಯಿತು.

ಫ್ಯಾಮಿಲಿ ಆಡಿಯನ್ಸತ ಕುಳಿತು ನೋಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ವರ್ತನೆಗಳು ಹದ್ದು ಮೀರಿದ್ದವು. ಅದ್ದರಿಂದಲೇ ಸಹಜವಾಗಿ ತೆಲುಗು ಬಿಗ್ ಬಾಸ್ ನ‌‌ ಟಿ ಆರ್ ಪಿ ಸಹಾ ಕುಸಿಯಿತು. ಆದರೆ ಇವೆಲ್ಲವುಗಳ ನಡುವೆ ತೆಲುಗಿನಲ್ಲಿ 24 ಗಂಟೆಗಳ ಬಿಗ್ ಬಾಸ್ ಮನರಂಜನೆಯನ್ನು ಪ್ರೇಕ್ಷಕರ ಮುಂದೆ ಇರಿಸುವ ಸಲುವಾಗಿ ಈ ಶೋ ವನ್ನು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕೂಡಾ ತರಲು ಘೋಷಣೆ ಮಾಡಲಾಯಿತು. ಹಿಂದಿಯಲ್ಲಿ ಈಗಾಗಲೇ ಓಟಿಟಿಯಲ್ಲಿ ಬಿಗ್ ಬಾಸ್ ಮೊದಲನೇ ಸೀಸನ್ ಮುಗಿದಿದೆ.

ಇದೀಗ ಓಟಿಟಿ ಬಿಗ್ ಬಾಸ್ ದಕ್ಷಿಣ ಕಾಲಿಟ್ಟಿದ್ದು, ಈ ವಿಷಯ ಘೋಷಣೆಯಾದ ನಂತರ ಶೋ ಯಾವಾಗ ಪ್ರಾರಂಭವಾಗಲಿದೆ ? ಯಾರೆಲ್ಲಾ ಸ್ಪರ್ಧಿಗಳಾಗಿ ಬರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈಗ ಅದಕ್ಕೆಲ್ಲ ಉತ್ತರ ಎನ್ನುವಂತೆ ವ್ಯಾಲೆಂಟೈನ್ಸ್ ಡೇ ಗೆ ಒಂದು ದಿನ ಮುಂಚಿತವಾಗಿ ಬಿಗ್ ಬಾಸ್ ಓಟಿಟಿಯ ಪ್ರೋಮೋ ಒಂದು ಬಿಡುಗಡೆ ಆಗಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ತನ್ನ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆದಿದೆ.

ಡಿಸ್ಕಿ ಪ್ಲಸ್ ಹಾಟ್ ಸ್ಟಾರ್ ತನ್ನ ಟ್ವೀಟ್ ನಲ್ಲಿ, “ಬಿಗ್ ಬಾಸ್ ಮನೆಯಿಂದ 24 ಗಂಟೆಗಳ ನೇರ ಮನರಂಜನೆಯ ಪ್ರಸಾರಕ್ಕಾಗಿ ಸಿದ್ದರಾಗಿ,” ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದೆ. ಈ ಮೂಲಕ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಬಿಗ್ ಬಾಸ್ ತೆಲುಗು ಓಟಿಟಿಯಲ್ಲಿ ಬರುವುದು ಖಚಿತ ಎನ್ನುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದಂತಾಗಿದೆ. ಇನ್ನು ಇದರಲ್ಲಿ ಸ್ಪರ್ಧಿಗಳು ಯಾರು? ಮತ್ತು ಪ್ರಸಾರವಾಗುವ ದಿನಾಂಕ ಎಂದು? ಎನ್ನುವುದು ಮಾತ್ರ ಘೋಷಣೆಯಾಗಬೇಕಿದೆ.

Leave a Reply

Your email address will not be published.