200 ಮಂದಿಯ ಗುಂಪಿನಿಂದ ಇಸ್ಕಾನ್ ದೇವಾಲಯದ ಮೇಲೆ ದಾಳಿ: ಬಾಂಗ್ಲಾದೇಶ

Entertainment Featured-Articles News

ಬಾಂಗ್ಲಾದೇಶದಲ್ಲಿ ಒಂದು ದಾ ರು ಣ ವಾದ ಘಟನೆಯು ನಡೆದಿದೆ. ಮತ್ತೊಮ್ಮೆ ಹಿಂದೂ ಮಂದಿರುವೊಂದನ್ನು ಗುರಿಯಾಗಿಸಿಕೊಂಡು ಅಲ್ಲಿ ಅದರ ಮೇಲೆ ದಾ ಳಿ ಯನ್ನು ನಡೆಸಲಾಗಿದೆ. ಈ ಬಾರಿಯಂತೂ ನೇರವಾಗಿ ದೇಶದ ರಾಜಧಾನಿ ಢಾಕಾದಲ್ಲಿನ ಇಸ್ಕಾನ್ ದೇಗುಲದ ಮೇಲೆ ದಾ ಳಿ ಯನ್ನು ನಡೆಸಲಾಗಿದೆ.‌ ಒಟ್ಟು 200 ಜನರ ಗುಂಪೊಂದು ಇಸ್ಕಾನ್ ದೇವಾಲಯದ ಮೇಲೆ ಗುರುವಾರ ದಾ ಳಿ ಯನ್ನು ನಡೆಸಿದ್ದಾರೆ. ಈ ವೇಳೆ ಅವರು ಗುಡಿಯನ್ನು ಧ್ವಂಸ ಮಾಡಿ, ಗುಡಿಯಲ್ಲಿನ ಸಂಪತ್ತನ್ನು ದೋಚುವ ಕೆಲಸವನ್ನು ಮಾಡುವ ಮೂಲಕ ಭ ಯ, ಆ ತಂ ಕ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ.

ಈ ದಾ ರು ಣ ಘಟನೆಯಲ್ಲಿ ಅನೇಕ ಮಂದಿ ಹಿಂದೂಗಳು ಗಾಯಗೊಂಡಿದ್ದಾರೆ. ಢಾಕಾದ ವಾರಿ ನಲ್ಲಿ 222 ಲಾಲ್ ಮೋಹನ್ ಸಾಹಾ ಬೀದಿಯಲ್ಲಿ ಇರುವ ಇಸ್ಕಾನ್ ದೇಗುಲದ ಮೇಲೆ ಗುರುವಾರದಂದು ಕೆಲವರು ಗುಂಪನ್ನು ಕಟ್ಟಿಕೊಂಡು ಬಂದು ದಾ ಳಿ ಯನ್ನು ನಡೆಸಿದ್ದಾರೆ. ಈ ವೇಳೆ ಸುಮಂತ್ರ ಚಂದ್ರ ಶ್ರವಣ್, ನಿಹರ್ ಹಲ್ಡರ್, ರಾಜೀವ್ ಭದ್ರ ಸಹಿತವಾಗಿ ಇನ್ನೂ ಕೆಲವರಿಗೆ ತೀ ವ್ರ ವಾದ ಗಾಯಗಳು ಆಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

62 ವರ್ಷದ ಹಾಜಿ ಹಫೀವುಲ್ಲಾಹ್ ನೇತೃತ್ವದಲ್ಲಿ ಈ ದಾ ಳಿ ನಡೆದಿದೆ ಎಂದು ತಿಳಿದು ಬಂದಿದೆ. ಅತನ ನಾಯಕತ್ವದಲ್ಲಿ ಸುಮಾರು 150-200 ಜನರ ಗುಂಪು ಇಸ್ಕಾನ್ ದೇಗುಲವನ್ನು ಸುತ್ತುವರೆದು, ಅನಂತರ ದೇಗುಲದ ವಿಗ್ರಹವನ್ನು ಅಪವಿತ್ರಗೊಳಿಸಿ, ಆಲಯ ಪ್ರಾಂಗಣವನ್ನು ಧ್ವಂ ಸ ಮಾಡಿದ್ದಾರೆ. ಅನಂತರ ದೇಗುಲದಲ್ಲಿನ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಈ ವಿಷಯ ಸುದ್ದಿಯಾಗಿದ್ದು, ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

Leave a Reply

Your email address will not be published.