200 ಕೋಟಿ ವಂಚಕನ ಮೇಲೆ ರಕ್ಕಮ್ಮನಿಗೆ ಲವ್: ಆತ ಕನಸಿನ ಹುಡುಗ ಎಂದ ಜಾಕ್ವೆಲಿನಾ!! ಹುಚ್ಚು ಪ್ರೀತಿ ಇದೇನಾ?

Entertainment Featured-Articles Movies News

ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇರುವ ವಿಷಯದ ಕುರಿತಾಗಿ ಆಗಾಗ ಸುದ್ದಿಗಳು ಆಗುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಆತನಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎನ್ನುವ ಕಾರಣಕ್ಕೆ ಈಗಾಗಲೇ ಬಾಲಿವುಡ್ ನಟಿ ಜಾಕ್ವಿಲಿನಾ ಫರ್ನಾಂಡಿಸ್ ಕೂಡಾ ವಿಚಾರಣೆಯನ್ನು ಎದುರಿಸಿದ್ದಾರೆ. ಅಲ್ಲದೇ ಸುಕೇಶ್ ಜೊತೆಗಿನ ತನ್ನ ಆತ್ಮೀಯತೆ ಹಾಗೂ ಒಡನಾಟದ ಕಾರಣದಿಂದಾಗಿ ನಟಿಯು ಸಾಕಷ್ಟು ಟ್ರೋಲ್ ಸಹಾ ಆಗಿದ್ದಾರೆ. ನಟಿಯು ಸುಕೇಶ್ ಜೊತೆಗೆ ಕಳೆದಿದ್ದು ಕ್ಷಣಗಳ ಖಾಸಗಿ ಫೋಟೋಗಳು ಸಹಾ ವೈರಲ್ ಆದ ಮೇಲೆ ನಟಿಯ ಬಗ್ಗೆ ಸಾಕಷ್ಟು ಟೀಕೆಗಳು ನೆಟ್ಟಿಗರಿಂದ ಹರಿದು ಬಂದಿದ್ದು ವಾಸ್ತವದ ವಿಚಾರವಾಗಿದೆ.

ಸುಕೇಶ್ ನಟಿ ಜಾಕ್ವಿಲಿನಾ ಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಿದ್ದನು. ಪರ್ಷಿಯನ್ ಬೆಕ್ಕು, ಕುದುರೆ ಮಾತ್ರವೇ ಅಲ್ಲದೇ ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗ್, ಶೂ ಗಳು, ಒಡವೆಗಳು, ಕಾರು ಹೀಗೆ ಸಾಕಷ್ಟು ಉಡುಗೊರೆಗಳನ್ನು ನಟಿ ಪಡೆದುಕೊಂಡಿದ್ದರು. ಅಲ್ಲದೇ ಸುಕೇಶ್ ನಟಿಯ ಕುಟುಂಬದ ಸದಸ್ಯರಿಗೂ ಸಹಾ ಉಡುಗೊರೆಗಳನ್ನು ನೀಡಿದ್ದನು ಎನ್ನುವ ವಿಚಾರ ಸಹಾ ಬಹಿರಂಗವಾಗಿದೆ. ಇನ್ನು ಇತ್ತೀಚಿಗಷ್ಟೇ ಸುಕೇಶ್ ಜೈಲಿನಲ್ಲಿ ಇದ್ದುಕೊಂಡೇ ಕೆಲವು ಕಿರುತೆರೆಯ ನಟಿಯರು ಮತ್ತು ರೂಪದರ್ಶಿ ಗಳನ್ನು ಭೇಟಿಯಾದ ವಿಚಾರ ಸಹಾ ಹೊರ ಬಂದಿದ್ದು, ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿರುವಾಗಲೇ ಜಾಕ್ವೆಲಿನಾ ಫರ್ನಾಂಡೀಸ್ ಕೂಡಾ ಒಂದು ಭರ್ಜರಿ ಶಾಕ್ ನೀಡಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡಿದೆ.

ಹೌದು, ನಟಿ ಜಾಕ್ವೆಲಿನಾ ಫರ್ನಾಂಡೀಸ್ ಸುಕೇಶ್ ಚಂದ್ರಶೇಖರ್ ನನ್ನು ವಿವಾಹವಾಗಲು ಬಯಸಿದ್ದರಂತೆ‌. ಈ ಮಾತು ಕೇಳಿ ನಟಿಯ ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ಸಿಕ್ಕಾಪಟ್ಟೆ ಅಚ್ಚರಿಪಡುವಂತಾಗಿದೆ. ನಟಿ ಜಾಕ್ವೆಲಿನಾ ಫರ್ನಾಂಡೀಸ್, ಸಕೇಶ್ ನನ್ನ ಕನಸಿನ ಹುಡುಗನಾಗಿದ್ದ, ನಾನು ಅವನನ್ನು ಮದುವೆಯಾಗಲು ಬಯಸಿದ್ದೆ, ಆದರೆ ಅವರ ಸಂಬಂಧದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎನ್ನುವುದು ಸಹಾ ಸತ್ಯವಾದ ವಿಚಾರವಾದರೂ ನಟಿಯ ಮಾತು ಮಾತ್ರ ಖಂಡಿತ ಯಾರೂ ಊಹೆ ಸಹಾ ಮಾಡಿರಲಿಲ್ಲ‌.

ಸುಕೇಶ್ ವಿ ರು ದ್ಧ 200 ಕೋಟಿ ವಂಚನೆ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ನಟಿಯ ಹೆಸರು ಇರುವುದರಿಂದು ಸದ್ಯಕ್ಕಂತೂ ನಟಿಯ ಈ ಕೇಸ್ ನಿಂದ ರಿಲೀಫ್ ಇಲ್ಲ. ಇದೇ ವೇಳೆ ಬಾಲಿವುಡ್ ನ ಮತ್ತೊಬ್ಬ ಜನಪ್ರಿಯ ನಟಿ ನೋರಾ ಫತೇಹಿ ಕೂಡಾ ಸುಕೇಶ್ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು ಎನ್ನುವ ಕಾರಣದಿಂದಾಗಿ ಅವರನ್ನು ಸಹಾ ಈಗಾಗಲೇ ಕೆಲವು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ಒಟ್ಟಾರೆ ಬಾಲಿವುಡ್ ನಟಿಯರು ಹೀಗೆ ವಂಚಕರ ಜೊತೆ ಹೊಂದಿರುವ ಸ್ನೇಹದ ವಿಚಾರಗಳು ಹೊರ ಬಂದಾಗ ಅನುಮಾನ ಗಳು ಸಹಜವಾಗಿಯೇ ಮೂಡುತ್ತದೆ.

Leave a Reply

Your email address will not be published.