ದಕ್ಷಿಣ ಭಾರತ ಸಿನಿರಂಗದಲ್ಲಿ ಕ್ಯೂಟ್ ಕಪಲ್ ಎಂದು ಹೆಸರನ್ನು ಪಡೆದುಕೊಂಡು, ಅಭಿಮಾನಿಗಳಿಂದ ಚೈಸಮ್ ಎಂದು ಕರೆಸಿಕೊಳ್ಳುತ್ತಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ದಂಪತಿ ನಿನ್ನೆ ಅಧಿಕೃತವಾಗಿ ತಾವು ವಿಚ್ಛೇದನ ಪಡೆದು ದೂರವಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಘೋಷಣೆಯನ್ನು ಮಾಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಹಿರಿಯ ನಟ ನಾಗಾರ್ಜುನ ಅವರು ಸಹಾ ಮಗ ಹಾಗೂ ಸೊಸೆಯ ವಿಚ್ಛೇದನದ ವಿಷಯವಾಗಿ ಬೇಸರವನ್ನು ಹೊರಹಾಕಿದ್ದರು. ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿದ್ದರು.
ನಟ ನಾಗಾರ್ಜುನ ಅವರು ತಮ್ಮ ಸೊಸೆಯ ಬಗ್ಗೆ ಒಂದೆರಡು ಮೆಚ್ಚುಗೆಯ ಮಾತುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಹೊಸ ಸುದ್ದಿ ಹೊರಗೆ ಬಂದಿದ್ದು, ವಿಚ್ಛೇದನದ ಹಿನ್ನೆಲೆಯಲ್ಲಿ ನಟಿ ಸಮಂತಾಗೆ ನಾಗಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ಕಡೆಯಿಂದ ನೀಡ ಬಯಸಿದ್ದ ಸುಮಾರು 200 ಕೋಟಿ ರೂಪಾಯಿಗಳ ಜೀವನಾಂಶವನ್ನು ಸಮಂತಾ ನಿರಾಕರಿಸಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ.
ಸಮಂತ ಹಾಗೂ ನಾಗಚೈತನ್ಯ ಪರಸ್ಪರ ದೂರವಾಗುತ್ತಿರುವ ವಿಷಯವನ್ನು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿವಾಹವಾಗಿ ನಾಲ್ಕು ವರ್ಷಗಳು ಕಳೆದಿದ್ದವು, ಆದರೆ 5ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಪರಸ್ಪರ ಒಪ್ಪಿಗೆಯಿಂದ ನಾಗಚೈತನ್ಯ ಹಾಗೂ ಸಂಬಂಧ ದೂರವಾಗುತ್ತಿದ್ದಾರೆ. ಈ ವೇಳೆಯಲ್ಲಿ ಅಕ್ಕಿನೇನಿ ಕುಟುಂಬ ಸಮಂತಾ ಅವರಿಗೆ ಜೀವನಾಂಶದ ರೂಪದಲ್ಲಿ 200 ಕೋಟಿ ರೂಪಾಯಿಗಳನ್ನು ನೀಡಲು ಮುಂದಾಗಿತ್ತು ಎಂದು ತಿಳಿದುಬಂದಿದೆ.
ಆದರೆ ನಟಿ ಸಮಂತಾ ತನಗೆ ಜೀವನಾಂಶ ಬೇಡ ಎಂದು ತಿರಸ್ಕರಿಸಿರುವ ವಿಷಯ ಬಹಿರಂಗವಾಗಿದೆ.
ಸಮಂತಾ ಅವರು ನಾಗಚೈತನ್ಯ ಹಾಗೂ ಅವರ ಕುಟುಂಬದ ಕಡೆಯಿಂದ ನನಗೆ ಜೀವನಾಶ ಬೇಡ, ಅವರಿಂದ ಅಥವಾ ಅವರ ಕುಟುಂಬದಿಂದ ಒಂದು ಪೈಸೆ ಕೂಡ ನಾನು ತೆಗೆದುಕೊಳ್ಳಲು ಬಯಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆಂದು ತಿಳಿದುಬಂದಿದೆ. ತನ್ನ ಕಠಿಣ ಪರಿಶ್ರಮದಿಂದ ತೆಲುಗು ಚಿತ್ರರಂಗದಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ ನಟಿ ಸಮಂತಾ.
ಇದೇ ಕಾರಣದಿಂದ ನಟಿ ಸಮಂತಾ ವಿಚ್ಛೇದನದಿಂದ ತನಗೆ ಯಾವುದೇ ಜೀವನಾಂಶದ ಹಣದ ಅಗತ್ಯವಿಲ್ಲ ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಬದಿಗಿಟ್ಟು ಮತ್ತೆ ತಮ್ಮ ವೃತ್ತಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡಲು ಸಮಂತಾ ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ.