2 ತೆಲುಗು ರಾಜ್ಯಗಳನ್ನು ಬಿಟ್ಟು, ಸಿನಿಮಾದ ಅದ್ದೂರಿ ಸಮಾರಂಭಕ್ಕೆ ರಾಜಮೌಳಿ ಆಯ್ಕೆ ಚಿಕ್ಕಬಳ್ಳಾಪುರ ಆಗಿದ್ದೇಕೆ?

Entertainment Featured-Articles News

ಆರ್ ಆರ್ ಆರ್ ಸಿನಿಮಾ ಬಿಡುಗಡೆ ಕೊರೊನಾ ಕಾರಣದಿಂದ ಮುಂದೂಡಿದ ನಂತರ, ಇದೀಗ ಬಹುದೊಡ್ಡ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದು ದೊಡ್ಡ ಸದ್ದು ಮಾಡಿದೆ ಆರ್ ಆರ್ ಆರ್ ಸಿನಿಮಾ. ಮಾಡಿದ ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ಈ ಸಿನಿಮಾ ಮಾರ್ಚ್ 25 ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ವೇಳೆ ತ್ರಿಬಲ್ ಆರ್ ಸಿನಿಮಾಕ್ಕೆ ಸಂಬಂಧಿಸಿದ ಎರಡು ದೊಡ್ಡ ಅದ್ದೂರಿ ಸಮಾರಂಭಗಳನ್ನು ಚಿತ್ರತಂಡವು ದುಬೈ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರ ನಗರದಲ್ಲಿ ನಡೆಸಿರುವುದು ವಿಶೇಷವಾಗಿದೆ. ಈ ಎರಡು ಕಾರ್ಯಕ್ರಮಗಳೂ ಸಹಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿವೆ.

ಎರಡು ಕಾರ್ಯಕ್ರಮಗಳ ಯಶಸ್ವಿಯಾಗಿ ಮುಗಿದ ನಂತರ ಇದೀಗ ಅಭಿಮಾನಿಗಳು ಮತ್ತು ಸಿನಿ ರಸಿಕರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಈ ವೇಳೆ ಒಂದು ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಮೂಡಿದೆ. ಮೂಲ ತೆಲುಗಿನಲ್ಲಿ ನಿರ್ಮಾಣ ಆಗಿರುವ ಈ ಪ್ರತಿಷ್ಠಿತ ಪ್ಯಾನ್ ಇಂಡಿಯಾ ಸಿನಿಮಾದ ಬಹುದೊಡ್ಡ ಈವೆಂಟ್ ಗೆ ಎರಡು ತೆಲುಗು ರಾಷ್ಟ್ರಗಳ ಬದಲಾಗಿ ಕರ್ನಾಟಕದ ಚಿಕ್ಕಬಳ್ಳಾಪುರ ನಗರವನ್ನು ಆಯ್ಕೆಮಾಡಿಕೊಂಡಿದ್ದಾದರೂ ಏಕೆ ಎನ್ನುವುದು?? ಆ ಪ್ರಶ್ನೆ ನಿಮಗೂ ಇದ್ದರೆ ಇಲ್ಲಿದೆ ಉತ್ತರ.

ಮೂಲಗಳ ಪ್ರಕಾರ ಎರಡು ತೆಲುಗು ರಾಷ್ಟ್ರಗಳಾದ ಆಂಧ್ರಪ್ರದೇಶ ಅಥವಾ ತೆಲಂಗಾಣ ಎರಡರಲ್ಲಿ ಎಲ್ಲೇ ಈ ಸಮಾರಂಭವನ್ನು ಆಯೋಜನೆಯ ಮಾಡಿದರೂ ಅದನ್ನು ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ ನಟರ ಅಭಿಮಾನಿಗಳನ್ನು ಒಂದೇ ಕಡೆ ನಿಯಂತ್ರಿಸುವುದು ಕಷ್ಟವಾಗಬಹುದು. ಅಲ್ಲದೇ ಸಮಾರಂಭದ ಕಾರಣದಿಂದ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು ಎನ್ನುವ ಕಾರಣಕ್ಕೆ ನಿರ್ದೇಶಕ ರಾಜಮೌಳಿ ಅವರು ಚಿಕ್ಕಬಳ್ಳಾಪುರ ನಗರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ನಗರವನ್ನೇ ಆರಿಸಿ ಕೊಳ್ಳಲು ಮತ್ತೊಂದು ಕಾರಣವೂ ಇದೆ. ಈ ನಗರವು ಆಂಧ್ರ ಮತ್ತು ಕರ್ನಾಟಕದ ಗಡಿಯಲ್ಲಿದೆ. ಇಲ್ಲಿ ತೆಲುಗು ಮಾತನಾಡುವ ಜನರ ಸಂಖ್ಯೆ ಅಧಿಕವಾಗಿದೆ. ಅಲ್ಲದೇ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಸಂಖ್ಯೆ ಈ ಪ್ರದೇಶದಲ್ಲಿ ಕಡಿಮೆಯೇನಿಲ್ಲ. ಅದಕ್ಕೆ ಸಾಕ್ಷಿ ಈ ಸ್ಟಾರ್ ನಟರ ಹಿಂದಿನ ಸಿನಿಮಾಗಳು ಚಿಕ್ಕಬಳ್ಳಾಪುರ ಸುತ್ತಮುತ್ತಲ ಪರಿಸರದಲ್ಲಿ ಈ ಹಿಂದೆ ದೊಡ್ಡ ಯಶಸ್ಸನ್ನು ಪಡೆದುಕೊಂಡಿದ್ದು, ದಾಖಲೆಗಳನ್ನು ಸಹಾ ಬರೆದಿವೆ.

ಇವೆಲ್ಲವುಗಳ ಜೊತೆಗೆ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ವಿಶಾಲವಾದ ಮಾರುಕಟ್ಟೆ ಇದೆ. ತೆಲುಗು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ರಾಜಮೌಳಿ ಅವರು ತಮ್ಮ ಸಿನಿಮಾದ ಸಮಾರಂಭವನ್ನು ಆಯೋಜಿಸಲು ಚಿಕ್ಕಬಳ್ಳಾಪುರ ನಗರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳನ್ನೂ ಕವರ್ ಮಾಡಬಹುದು ಎನ್ನುವ ಆಲೋಚನೆಯೂ ಸೇರಿದೆ ಎನ್ನಲಾಗಿದೆ.

Leave a Reply

Your email address will not be published.