2 ತಿಂಗಳ ಮಗಳಿಗೆ ವಿಶೇಷ ಉಡುಗೊರೆ ನೀಡಲು ಈ ತಂದೆ ಮಾಡಿದ ಅದ್ಭುತ ಕೆಲಸ ಕಂಡು ಬೆರಗಾದರು ಜನ

0 4

ಮುದ್ದು ಮಕ್ಕಳಿಗೆ ವಿಶೇಷವಾದ ಉಡುಗೊರೆಗಳನ್ನು ನೀಡುವುದು ತಂದೆ ತಾಯಿಗೆ ಬಹಳ ಇಷ್ಟ. ತಾವು ನೀಡುವ ಉಡುಗೊರೆ ತಮ್ಮ ಮಕ್ಕಳ ಮುಖದಲ್ಲಿ ಒಂದು ನಗುವನ್ನು ತರುವುದೆಂಬ ಅವರ ಪ್ರೀತಿ ಹಾಗೂ ಕಾಳಜಿಗೆ ಬೆಲೆ ಕಟ್ಟಲಾಗದು. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಒಂದು ಅದ್ಭುತವಾದ ಉಡುಗೊರೆಯನ್ನು ನೀಡಬೇಕೆಂದು ಮಾಡಿರುವ ಕೆಲಸ ನಿಜಕ್ಕೂ ವಿಶೇಷವಾಗಿದೆ‌. ಏಕೆಂದರೆ ಮಗಳಿಗೆ ಉಡುಗೊರೆಯನ್ನು ನೀಡಲು ಅವರು ಮಾಡಿದ ಆಲೋಚನೆಯು ಇದೀಗ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಸೂರತ್ ನ ಸರ್ತಾಣ ಎನ್ನುವ ಪ್ರದೇಶದಲ್ಲಿ ನೆಲೆಸಿರುವ ವಿಜಯ್ ಕಥೇರಿಯಾ ಒಬ್ಬ ಕಂಚಿನ ವ್ಯಾಪಾರಿಯಾಗಿದ್ದಾರೆ.

ವಿಜಯ್ ತಮ್ಮ ಎರಡು ತಿಂಗಳ ಮಗುವಿಗೆ ನೀಡಿರುವ ಉಡುಗೊರೆ ಬಹಳ ವಿಶೇಷವಾಗಿದೆ‌. ಹೌದು ವಿಜಯ್ ಅವರು ತಮ್ಮ ಎರಡು ತಿಂಗಳ ಮಗಳು ನಿತ್ಯಾಳಿಗೆ ಉಡುಗೊರೆಯಾಗಿ ನೀಡಲು ಚಂದ್ರನ ಮೇಲೆ ಭೂಮಿಯನ್ನು ಖರೀದಿ ಮಾಡಿ, ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ವಿಜಯ್ ಅವರು ಮೂಲತಃ ಸೌರಾಷ್ಟ್ರ ಕ್ಕೆ ಸೇರಿದವರಾಗಿದ್ದು, ಪ್ರಸ್ತುತ ಸೂರತ್ ನ ಸರ್ತಾಣ ಪ್ರದೇಶದಲ್ಲಿ ನೆಲೆಸಿದ್ದಾರೆ. ಚಂದ್ರನ ಮೇಲೆ ಭೂಮಿ ಖರೀದಿ ಮಾಡಲು ಅವರು ನ್ಯೂಯಾರ್ಕ್ ಗೆ ಮೇಲ್ ಮಾಡಿದ್ದರು‌.

ವಿಜಯ್ ಅವರು ನ್ಯೂಯಾರ್ಕ್ ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರೀ ಕಂಪನಿ ಗೆ ತಾನು ಚಂದ್ರನ ಮೇಲೆ ಭೂಮಿ ಖರೀದಿ ಮಾಡಲು ಬಯಸಿರುವುದಾಗಿ ಮೇಲ್ ಮಾಡಿದ್ದರು ಎನ್ನಲಾಗಿದೆ. ಇವರ ಈ ಮನವಿಯನ್ನು ಕಂಪನಿ ಸ್ವೀಕರಿಸಿದೆ. ವಿಜಯ್ ಕಥೇರಿಯ ಅವರ ಮನೆಗೆ ಎರಡು ತಿಂಗಳ ಹಿಂದೆಯಷ್ಟೇ ಮಗಳು ನಿತ್ಯ ಳ ಆಗಮನವಾಗಿದೆ. ಆಗಲೇ ಅವರು ಮಗಳಿಗಾಗಿ ಏನಾದರೂ ವಿಶೇಷ ಉಡಗೊರೆ ಖರೀದಿ ಮಾಡಲು ಆಲೋಚನೆ ಮಾಡಿದ್ದರು‌.

ಆಗಲೇ ವಿಜಯ್ ಅವರು ತಮ್ಮ‌ ಮಗಳಿಗಾಗಿ ಖರೀದಿ ಮಾಡಲು ಬಯಸಿದ ಉಡುಗೊರೆ ಬೇರೆಲ್ಲಾ ಉಡುಗೊರೆಗಳಿಗಿಂತ ಬಹಳ ವಿಭಿನ್ನ ಹಾಗೂ ವಿಶಿಷ್ಠವಾದುದು ಆಗಿರಬೇಕೆಂದು ಅವರು ನಿರ್ಧಾರ ಮಾಡಿದ್ದರು. ನಂತರ ಅವರು ನ್ಯೂಯಾರ್ಕ್ ಇಂಟರ್ನಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ ಕಂಪನಿಯನ್ನು ಸಂಪರ್ಕಿಸಿ 13 ಮಾರ್ಚ್ ನಲ್ಲಿ ಚಂದ್ರನ ಮೇಲೆ ಭೂಮಿ ಖರೀದಿಸಲು ಆನ್ಲೈನ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಒಂದು ಎಕರೆ ಭೂಮಿಯನ್ನು ಖರೀದಿ ಮಾಡಲು ವಿಜಯ್ ಮಾಡಿದ್ದ ಮನವಿಯನ್ನು ಕಂಪನಿ ಸ್ವೀಕಾರ ಮಾಡಿದೆ‌. ಅನಂತರ ಕಂಪನಿ ಅಗತ್ಯ ಇರುವ ಎಲ್ಲಾ ಕಾನೂನಿನ ಕಾರ್ಯಾಚರಣೆ ಗಳನ್ನು ನಡೆಸಿದ ನಂತರ ವಿಜಯ್ ಅವರಿಗೆ ಇ ಮೇಲ್ ಮೂಲಕ ಜಮೀನು ಖರೀದಿಗೆ ಅನುಮತಿ ಕಳುಹಿಸಿದರೆ‌. ನಂತರ ವಿಜಯ್ ಅವರು ಜಮೀನು ಖರೀದಿ ಮಾಡಿದ್ದು, ಅವರಿಗೆ ಚಂದ್ರನ ಮೇಲೆ ಖರೀದಿ ಮಾಡಿದ ಜಮೀನಿನ ಪತ್ರಗಳನ್ನು ಕಂಪನಿ ಮೇಲ್ ಮೂಲಕ ಕಳುಹಿಸಿದೆ.

ವಿಜಯ್ ಕಥೇರಿಯಾ ಈಗ ಚಂದ್ರನ ಮೇಲೆ ಭೂಮಿಯನ್ನು ಖರೀದಿ ಮಾಡಿದ ಮೊದಲ ವ್ಯಾಪಾರಿ ಎನಿಸಿಕೊಂಡಿದ್ದಾರೆ. ಇನ್ನು ಅವರ ಎರಡು ತಿಂಗಳ ಪುಟ್ಟ ಮಗಳು ನಿತ್ಯ ಬಹುಶಃ ಚಂದ್ರನ ಮೇಲೆ ಜಮೀನಿನ ಹಕ್ಕು ಪಡೆದ ಅತಿ ಚಿಕ್ಕ ವಯಸ್ಸಿನ ಹುಡುಗಿಯಾಗಿದ್ದಾಳೆ. ಮುಂದಿನ ದಿನಗಳಲ್ಲಿ ಕಂಪನಿ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.