16ನೇ ವಯಸ್ಸಿಗೆ ಹೋಟೆಲ್ ನಲ್ಲಿ ವೈಟ್ರೆಸ್ ಆಗಿದ್ದೆ: ನೋರಾ ಫತೇಹಿ ತೆರೆದಿಟ್ಟ ತನ್ನ ಸಂಘರ್ಷದ ಬದುಕಿನ ಕಥೆ
ಬಾಲಿವುಡ್ ನಲ್ಲಿ ಪ್ರಸ್ತುತ ದಿನಗಳಲ್ಲಿ ಡಾನ್ಸ್ ವಿಚಾರ ಬಂದರೆ ಅಲ್ಲಿ ನೋರಾ ಫತೇಹಿ ಹೆಸರು ಇದ್ದೇ ಇರುತ್ತದೆ. ಹೌದು ಬಾಲಿವುಡ್ ನ ಐಟಂ ನಂಬರ್ ಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನೋರಾ ಫತೇಹಿ ಡಾನ್ಸ್ ಗಳನ್ನು ಇಷ್ಟಪಡುವ ಒಂದು ದೊಡ್ಡ ಬಳಗವೇ ಇದೆ. ನೋರಾ ಡಾನ್ಸ್ ಮಾತ್ರವೇ ಅಲ್ಲದೇ ನಟನೆಯಲ್ಲೂ ಕೂಡಾ ಹೆಸರನ್ನು ಮಾಡಿದ್ದು, ನೋರಾ ಅಭಿಮಾನಿಗಳ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆನಡಾದಲ್ಲಿ ಜನ್ಮಿಸಿದ ನೋರಾ ಇಂದಿನ ಯಶಸ್ಸನ್ನು ಪಡೆಯಲು ನಡೆದು ಬಂದ ಹಾದಿ ನಿಜಕ್ಕೂ ಸುಲಭವಾಗಿರಲಿಲ್ಲ.
ಕೆಲವು ದಿನಗಳ ಹಿಂದೆ ನೋರಾ ಒಂದು ಕುಕ್ಕಿಂಗ್ ರಿಯಾಲಿಟಿ ಶೋ ಗೆ ಬಂದಿದ್ದರು. ಈ ವೇಳೆ ನೋರಾ ತಮ್ಮ ಹಿಂದಿನ ಜೀವನವನ್ನು ಸ್ಮರಿಸುತ್ತಾ, ತಾನು ಹೊಟೇಲ್ ಒಂದರಲ್ಲಿ ವೈಟ್ರೆಸ್ ಆಗಿದ್ದ ದಿನಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೋರಾ ತಾನು 16 ವರ್ಷ ವಯಸ್ಸಿನವಳಾಗಿದ್ದಾಗ ವೈಟ್ರಸ್ ಆಗಿ ಕೆಲಸ ಆರಂಭಿಸಿದೆ, ಪಾಕೆಟ್ ಮನಿಗಾಗಿ 18 ನೇ ವಯಸ್ಸಿನ ವರೆಗೂ ತಾನು ಆ ಕೆಲಸವನ್ನು ಮಾಡಲೇಬೇಕಾಗಿತ್ತು ಎನ್ನುವ ಮಾತನ್ನು ಹೇಳಿದ್ದಾರೆ.
ನೋರಾ ತಾನು ಹೊಟೇಲ್ ನಲ್ಲಿ ವೈಟ್ರೆಸ್ ಕೆಲಸ ಮಾಡುವಾಗಲೇ ಅದು ತನ್ನ ಕಮ್ಯುನಿಕೇಷನ್ ಸ್ಕಿಲ್, ಪರ್ಸನಾಲಿಟಿ ಡೆವಲಪ್ಮೆಂಟ್, ಒಳ್ಳೆ ಸ್ಮರಣಾಶಕ್ತಿ ವೃದ್ಧಿಯ ಜೊತೆಗೆ ಕೆಲಸವನ್ನು ಮುಂದುವರೆಸುವ ಉತ್ಸಾಹಗಳಂತಹ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಯಿತು ಆದರೆ ಇವುಗಳನ್ನು ಕಲಿಯುವ ಹಾದಿಯಲ್ಲಿ ಅನೇಕ ಸಮಸ್ಯೆಗಳು ಕೂಡಾ ಎದುರಾದವು ಎನ್ನುವ ಮಾತನ್ನು ನೋರಾ ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಗ್ರಾಹಕರ ಮನಸ್ಸಿನಲ್ಲಿ ಯಾವುದೋ ಅಸಹನೀಯ ಎನಿಸುವ ಆಲೋಚನೆಗಳು ಇರುತ್ತಿದ್ದವು. ಆಗೆಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿಯಬೇಕಾಗಿತ್ತು, ಅದನ್ನು ಎದುರಿಸಿ ಕೆಲಸವನ್ನು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ ನೋರಾ. ಇನ್ನು ನೋರಾ ಈ ಶೋ ನ ವೇಳೆಯಲ್ಲಿ ಕೆನಡಾದ ಆಹಾರ ಪದಾರ್ಥಗಳ ಕುರಿತಾಗಿ ಕೂಡಾ ಒಂದಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ.
ನೋರಾ ಈ ವೇಳೆ ಕೆನಡಾದಲ್ಲಿ ದಪ್ಪಗೆ ಇರುವ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ. ಸಣ್ಣಕ್ಕೆ ಬಳಕುವ ಬಳ್ಳಿಯಂತೆ ಇರುವ ಹೆಣ್ಣಿಗೆ ಅಷ್ಟೊಂದು ಗಮನವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಅದು ಅಲ್ಲಿನ ಸಂಸ್ಕೃತಿ ಆದ ಕಾರಣ ತಾವು ಆಗಾಗ ಏನನ್ನಾದರೂ ತಿನ್ನುವುದು ಒಂದು ಅಭ್ಯಾಸವೇ ಆಗಿ ಹೋಗಿದೆ ಎನ್ನುವ ಮಾತನ್ನು ನೋರಾ ಈ ಶೋ ನಲ್ಲಿ ಹೇಳಿದ್ದಾರೆ.