12 ನೇ ವಿವಾಹ ವಾರ್ಷಿಕೋತ್ಸವ: ಪ್ರತಿಯೊಬ್ಬರ ಮನಕರಗುವ ಹಾಗೆ ಭಾವನಾತ್ಮಕ ಸಾಲುಗಳ ಬರೆದ ಶಿಲ್ಪಾ ಶೆಟ್ಟಿ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರಿಗೆ ಇಂದಿನ ದಿನ ಬಹಳ ವಿಶೇಷವಾದ ದಿನವಾಗಿದೆ. ಹೌದು ಈ ದಿನ ಅವರ 12 ನೇ ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವಾಗಿದೆ. ಇಂತಹ ಒಂದು ವಿಶೇಷ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೀವನದ ಮಧುರ ಕ್ಷಣಕ್ಕೆ ಸಾಕ್ಷಿಯಾದ ತಮ್ಮ ಮದುವೆ ಫೋಟೋವನ್ನು ಶೇರ್ ಮಾಡಿಕೊಂಡು ಕೆಲವು ಭಾವನಾತ್ಮಕ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಮನಕರಗುವಂತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್ ಕುಂದ್ರಾ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ಇಂದಿಗೆ ಬರೋಬ್ಬರಿ ಹನ್ನೆರಡು ವರ್ಷಗಳು ಕಳೆದಿದೆ.

ಶಿಲ್ಪಾ ಶೆಟ್ಟಿ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡು, 12 ವರ್ಷಗಳ ಹಿಂದೆ ಈ ಕ್ಷಣ ಮತ್ತು ದಿನ, ನಾವು ಭರವಸೆಯನ್ನು ನೀಡಿದ್ದೇವೆ ಮತ್ತು ಅದನ್ನು ಪೂರೈಸುವುದನ್ನು ಸದಾ ಮುಂದುವರಿಸುತ್ತೇವೆ; ಒಳ್ಳೆಯ ಸಮಯವನ್ನು ಹಂಚಿಕೊಳ್ಳುವ ಮತ್ತು ಕಷ್ಟದ ಸಮಯವನ್ನು ಭರಿಸುವಲ್ಲಿ, ಪ್ರೀತಿಯಲ್ಲಿ ನಂಬಿಕೆಯಿರಿಸುವಲ್ಲಿ ನಮಗೆ ದೇವರು ದಾರಿ ತೋರಿಸುತ್ತಿದ್ದಾನೆ. 12 ವರ್ಷಗಳನ್ನು ಲೆಕ್ಕಿಸುವುದು ಖಂಡಿತ ಸಾಧ್ಯವಿಲ್ಲ.‌ ಹ್ಯಾಪಿ ಆ್ಯನಿವರ್ಸರಿ.

ಇಲ್ಲಿ ಇನ್ನೂ ಅನೇಕ ಕಾಮನಬಿಲ್ಲುಗಳು, ನಗು, ಮೈಲಿಗಲ್ಲುಗಳನ್ನು ನೋಡಬೇಕಿದೆ ಮತ್ತು ನಮ್ಮ ಅಮೂಲ್ಯ ಆಸ್ತಿಗಳು ನಮ್ಮ ಮಕ್ಕಳು. ನಮ್ಮ ಕಷ್ಟ ಮತ್ತು ಸುಖದ ಸಮಯದಲ್ಲಿ ನಮ್ಮೊಂದಿಗೆ ಇರುವ ನಮ್ಮ ಎಲ್ಲಾ ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡು ಶಿಲ್ಪಾ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವದ ದಿನ ವಿಶೇಷವಾದ ಭಾವನೆಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ 22 ನವೆಂಬರ್ 2009 ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಈ ವಿಶೇಷ ದಿನದ ಸ್ಮರಣೆಯಲ್ಲಿ ಶಿಲ್ಪಾ ಶೆಟ್ಟಿ ನಾವು ಇನ್ನು ಮುಂದೆ ಕೂಡಾ ಜೊತೆಯಾಗಿರುತ್ತೇವೆ ಎನ್ನುವ ಮಾತನ್ನು ತಮ್ಮ ಅಕ್ಷರಗಳಲ್ಲಿ ತಿಳಿಸಿದ್ದಾರೆ. ಇನ್ನು ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಷಯದಲ್ಲಿ ಬಂಧನವನ್ನು ಎದುರಿಸಿ ಜಾಮೀನಿನ ಮೇಲೆ ಹೊರಬಂದ ನಂತರ ಅವರು ಸಾಮಾಜಿಕ ಜಾಲತಾಣಗಳಿಂದ ದೂರವಾಗಿದ್ದಾರೆ.

Leave a Comment