12 ದಿನಗಳ ಮಗುವನ್ನು ಬಿಟ್ಟು, ರಿಯಾಲಿಟಿ ಶೋ ನಿರೂಪಣೆಗೆ ಮರಳಿದ ಭಾರತಿ ಸಿಂಗ್!! ಹಾಡಿ ಹೊಗಳಿದ ನೆಟ್ಟಿಗರು

Entertainment Featured-Articles News Viral Video

ಹಿಂದಿ ಕಿರುತೆರೆಯಲ್ಲಿ ನಿರೂಪಣೆಗೆ ಹೆಸರಾದ ಜೋಡಿ ಸ್ಟಾಂಡಪ್ ಕಮಿಡಿಯನ್ ಭಾರತಿ ಸಿಂಗ್ ಹಾಗೂ ಆಕೆಯ ಪತಿ, ಬರಹಗಾರ ಸಹಾ ಆಗಿರುವ ಹರ್ಷ್ ಲಿಂಬಾಚಿಯಾ. ಈ ದಂಪತಿ ಇದ್ದಾರೆ ಎಂದರೆ ಅಲ್ಲಿ ಮನರಂಜನೆಗೆ ಖಂಡಿತ ಕೊರತೆ ಎನ್ನುವುದು ಇರುವುದಿಲ್ಲ. ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವುದರಲ್ಲಿ ಹರ್ಷ್ ಮತ್ತು ಭಾರತಿ ನಿಸ್ಸೀಮರು. ಪ್ರಸ್ತುತ ಈ ಜೋಡಿ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಹುನರ್ ಬಾಜ್ ಎನ್ನುವ ಜನಪ್ರಿಯ ರಿಯಾಲಿಟಿ ಶೋ ನ ನಿರೂಪಣೆಯನ್ನು ಮಾಡುತ್ತಿದ್ದಾರೆ.

ಹುನರ್ ಬಾಜ್ ದೇಶದ ಮೂಲೆ ಮೂಲೆಗಳಿಂದ ಪ್ರತಿಭಾವಂತರ ವಿಶೇಷ ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವ ಕಾರ್ಯಕ್ರಮವಾಗಿದ್ದು, ಶನಿವಾರ ಮತ್ತು ಭಾನುವಾರ ಶೋ ನ ಗ್ರಾಂಡ್ ಫಿನಾಲೆ ಇದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ. ಬಾಲಿವುಡ್‌ ಸಿನಿಮಾಗಳಲ್ಲಿ ಡಿಸ್ಕೋ ಕಿಂಗ್ ಖ್ಯಾತಿಯ ಮಿಥುನ್ ಚಕ್ರವರ್ತಿ, ನಟಿ ಪರಿಣೀತಿ ಚೋಪ್ರಾ ಹಾಗೂ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಈ ಶೋ ನ ಮೂರು ಜನ ಜಡ್ಜ್ ಗಳಾಗಿ ಶೋ ನಲ್ಲಿ ಭಾಗವಹಿಸುತ್ತಿದ್ದಾರೆ.

ಸೂಪರ್ ಸಕ್ಸಸ್ ಪಡೆದು ಯಶಸ್ಸಿನಿಂದ ಶೋ ನಡೆಯುವಾಗಲೇ, ಕೆಲವು ದಿನಗಳ ಹಿಂದೆ ಭಾರತಿ ಸಿಂಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದ ಕಾರಣದಿಂದ ಶೋ ನಿಂದ ಹೊರ ಬರುವುದು ಅನಿವಾರ್ಯವಾಗಿತ್ತು. ಭಾರತಿ ಆಸ್ಪತ್ರೆಗೆ ದಾಖಲಾಗುವ ಮೊದಲು ಸಹಾ ಶೋ ನಿರೂಪಣೆಯನ್ನು ಮಾಡಿದ್ದರು. ಗರ್ಭಿಣಿಯಾಗಿದ್ದರೂ ಮಗುವಿಗೆ ಜನ್ಮ ನೀಡುವ ಒಂದು ದಿನ ಹಿಂದಿನವರೆಗೂ ಭಾರತಿ ಶೋ‌ ನಿರೂಪಣೆಯನ್ನು ಮಾಡಿದ್ದರು.

ಹನ್ನೆರಡು ದಿನಗಳ ಹಿಂದೆ ಹರ್ಷ್ ಭಾರತಿ ದಂಪತಿ ಗಂಡು ಮಗುವಿನ ತಂದೆ ತಾಯಿ ಆಗಿದ್ದಾರೆ. ಭಾರತಿ ಸಿಂಗ್ ಇದರಿಂದಾಗಿ ಶೋ ನಿಂದ ಬ್ರೇಕ್ ಪಡೆದಿದ್ದರು. ಈ ವೇಳೆ ಭಾರತಿ ಜಾಗಕ್ಕೆ ಶೋ ನಿರೂಪಣೆ ಮಾಡಲು ನಾಗಿನ್ ( ನಾಗಿಣಿ ) ಸೀರಿಯಲ್ ಖ್ಯಾತಿಯ ನಟಿ ಸುರಭಿ ಚಂದಾನಾ ಹರ್ಷ್ ಗೆ ಜೊತೆಯಾಗಿದ್ದರು. ಆದರೆ ಈಗ ಭಾರತಿ ಮಗುವಿಗೆ ಜನ್ಮ ನೀಡಿದ 12 ದಿನಗಳ ನಂತರ ಮತ್ತೆ ಶೋ ಗೆ ರೀ ಎಂಟ್ರಿ ನೀಡುತ್ತಿದ್ದಾರೆ.

ಹೌದು, ಭಾರತಿ ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಪತಿಯ ಜೊತೆಗೆ ನಿರೂಪಣೆ ಮಾಡಲು ಬಂದಿದ್ದಾರೆ. ಭಾರತಿ ಸಿಂಗ್ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾಗಳ ಮೂಲಕ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. ಅನೇಕರು ಮಾಡುವ ಕೆಲಸವೇ ನಮಗೆ ದೇವರು ಎನ್ನುವುದನ್ನು ಮರೆಯಬಾರದು. ಹೆರಿಗೆ ಹಿಂದಿನ ದಿನದವರೆಗೂ ಕೆಲಸ ಮಾಡಿದ್ದು ಭಾರತಿ ರಾಕ್ ಸ್ಟಾರ್ ಎಂದು ಹಾಡಿ ಹೊಗಳಿದ್ದವರು, ಈಗ ಹನ್ನೆರಡು ದಿನಗಳ ನಂತರ ಶೋ ಗೆ ಬರುತ್ತಿರುವ ಭಾರತಿಗೆ ಗ್ರಾಂಡ್ ವೆಲ್ ಕಂ ನೀಡುತ್ತಿದ್ದಾರೆ.

Leave a Reply

Your email address will not be published.