100 ಕೋಟಿ ಕಾರಿನಿಂದ 6 ಲಕ್ಷದ ಟೀ ಕಪ್ ವರೆಗೆ ನೀತಾ ಅಂಬಾನಿಯ ಐಶಾರಾಮೀ ಬದುಕಿನ ಒಂದು ಝಲಕ್
ಭಾರತದ ಅತ್ಯಂತ ಶ್ರೀಮಂತ ಪರಿವಾರ ಎನಿಸಿಕೊಂಡಿರುವ ಅಂಬಾನಿ ಪರಿವಾರ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಗಳಲ್ಲಿ ಕಾಣುತ್ತಲೇ ಇರುತ್ತದೆ. ಈ ಕುಟುಂಬ ಕೇವಲ ತಮ್ಮ ಹಣದ ವಿಷಯವಾಗಿ ಮಾತ್ರವೇ ಅಲ್ಲದೇ, ಈ ಕುಟುಂಬದಲ್ಲಿನ ಸದಸ್ಯರು ತಮ್ಮ ಐಶಾರಾಮೀ ಹವ್ಯಾಸಗಳಿಂದಲೂ ಸಹಾ ಸಾಕಷ್ಟು ಸುದ್ದಿಯಾಗುತ್ತಾರೆ. ಮುಖೇಶ್ ಅಂಬಾನಿ ಪತ್ನಿಯಾಗಿ ನೀತಾ ಅಂಬಾನಿ 1985 ರಲ್ಲಿ ಅಂಬಾನಿ ಕುಟುಂಬದ ಸೊಸೆಯಾಗಿ ಬಂದರು. ನೀತಾ ತಮ್ಮ ಜೀವನ ಶೈಲಿ ಮತ್ತು ಐಶಾರಾಮೀ ಹವ್ಯಾಸಗಳಿಂದಲೇ ಜನಪ್ರಿಯತೆ ಪಡೆದಿದ್ದಾರೆ.
ನೀತಾ ಅಂಬಾನಿ ಬಳಿ ಕೆಲವು ಬಹಳ ಬೆಲೆ ಬಾಳುವ ವಸ್ತುಗಳ ಕಲೆಕ್ಷನ್ ಇದ್ದು, ಅದೇನು ಎನ್ನುವುದನ್ನೇ ನಾವು ಇಂದು ನಿಮಗೆ ಹೇಳಲು ಹೊರಟಿದ್ದೇವೆ. ನೀತಾ ಅಂಬಾನಿ ಬಳಿ ವಿಶ್ವದ ಅತಿ ದುಬಾರಿ ಕಾರುಗಳಲ್ಲಿ ಒಂದು ಇದೆ. ವರದಿಗಳ ಪ್ರಕಾರ ಈ ಕಾರು ಭಾರತದಲ್ಲಿ ದೊರೆಯುವುದಿಲ್ಲ. ಇದನ್ನು ವಿದೇಶದಿಂದ ತರಿಸಿಕೊಳ್ಳಲಾಗಿದೆ. ಇದು ಜರ್ಮಿನಿಯ ಪ್ರತಿಷ್ಠಿತ ಆಡಿ ಕಾರ್ ಕಂಪನಿಯ ವಿಶೇಷ ಮಾಡೆಲ್ ಕಾರಾಗಿದ್ದು, ಆಡಿ ಎ9 ಕೆಮಿಲಿಯನ್ ಕಾರು ಇದಾಗಿದ್ದು, ಇದರ ಬೆಲೆ 90 ಕೋಟಿ ಎನ್ನಲಾಗಿದೆ.
ಭಾರತಕ್ಕೆ ಈ ಕಾರು ತಲುಪುವ ವೇಳೆಗೆ ಒಟ್ಟು ತೆರಿಗೆಗಳು ಎಲ್ಲವೂ ಸೇರಿ ಒಟ್ಟು 100 ಕೋಟಿ ರೂ. ತಲುಪುತ್ತದೆ. ಇದಲ್ಲದೇ ನೀತಾ ಅಂಬಾನಿ ಬಳಿ ಮರ್ಸಿಡೀಸ್ ಬೆಂಜ್ ಎಸ್ ಕ್ಲಾಸ್, ಬೆಂಟಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ರೋಲ್ಸ್ ರಾಯ್ ಫೆಂಟಮ್ ಹಾಗೂ ಬಿಎಂಡಬ್ಲ್ಯೂ 7 ಸಿರೀಸ್ ನಂತಹ ಕಾರುಗಳ ಕಲೆಕ್ಚನ್ ಇದೆ. ಇದು ನೀತಾ ಅಂಬಾನಿ ಬಳಿ ಇರುವ ಐಶಾರಾಮೀ ಕಾರುಗಳ ಕಲೆಕ್ಷನ್ ಆಗಿದೆ.
ನೀತಾ ಅಂಬಾನಿ ಯಾವಾಗಲೂ ಸಹಾ ದುಬಾರಿ ಬೆಲೆಯ ಚಪ್ಪಲಿಗಳನ್ನು ಧರಿಸುತ್ತಾರೆ. ಅವರು ಒಮ್ಮೆ ಧರಿಸಿದ ಚಪ್ಪಲಿಗಳನ್ನು ಮತ್ತೆ ಧರಿಸುವುದಿಲ್ಲ ಎನ್ನಲಾಗುತ್ತದೆ. ಅವರು ನೀತಾ ಅಂಬಾನಿ ಪೆಡ್ರೊ, ಗಾರ್ಸಿಯಾ, ಜಿಮ್ಮಿ ಚೂ, ಪೆಲ್ಮೊರಾ, ಮಾರ್ಲಿನ್ ಬ್ರಾಂಡ್‌ಗಳ ಪಾದರಕ್ಷೆ ಬಳಸುತ್ತಾರೆ ಮತ್ತು ಅವುಗಳ ಆರಂಭಿಕ ಬೆಲೆಯೇ ಲಕ್ಷ ರೂಪಾಯಿಗಳಾಗಿರುತ್ತದೆ ಎನ್ನಲಾಗಿದೆ. ಬಹು ಲಕ್ಷಗಳ ವರೆಗೆ ಈ ಬೆಲೆಯು ಇರುತ್ತದೆ.
ನೀತಾ ಅವರ ಬಳಿ ಲಕ್ಷಗಳ ಮೌಲ್ಯದ ವಿಶ್ವ ಪ್ರಸಿದ್ಧ ಹ್ಯಾಂಡ್ ಬ್ಯಾಗ್ ಗಳಿವೆ. ಫೆಂಡಿ, ಸೆಲೀನ್ ಮತ್ತು ಹಮೀಜ್ ನಂತಹ ವಿಶ್ವ ಬ್ರಾಂಡ್ ಗಳ ಹ್ಯಾಂಡ್ ಬ್ಯಾಗ್ ಗಳನ್ನು ಮಾತ್ರವೇ ನೀತಾ ಬಳಸುವುದು ವಿಶೇಷ. ಕೈಗಡಿಯಾರಗಳ ವಿಷಯಕ್ಕೆ ಬಂದರೆ ಬುಲ್ಗಾರಿ, ಕಾರ್ಟಿಯರ್, ರ್ಯಾಡೋ, ಕೆಲ್ವಿನ್ ನಂತಹ ದುಬಾರಿ ಬ್ರಾಂಡ್ ನ ಕೈಗಡಿಯಾರಗಳನ್ನು ನೀತಾ ಧರಿಸುತ್ತಾರೆ. ಇದರ ಆರಂಭಿಕ ಬೆಲೆಯು ಎರಡು ಲಕ್ಷವಾಗಿರುತ್ತದೆ.
ಇನ್ನು ಲಿಪ್ ಸ್ಟಿಕ್ ವಿಷಯಕ್ಕೆ ಬಂದರೆ ಹೊರಗಿನಿಂದ ಬಂಗಾರ, ಬೆಳ್ಳಿಯ ಕೋಟಿಂಗ್ ಇರುವ ಲಿಪ್ ಸ್ಟಿಕ್ ಬಳಸುವ ನೀತಾ ಬಳಿ ಇರುವ ಲಿಪ್ ಸ್ಟಿಕ್ ಕಲೆಕ್ಷನ್ ನಲ್ಲಿ 40 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಲಿಪ್ ಸ್ಟಿಕ್ ಗಳು ಇವೆ. ನೀತಾ ಅಂಬಾನಿ ಚಹಾ ಕುಡಿಯಲು ಜಪಾನಿನ ಸಾಂಪ್ರದಾಯಿಕ ಕ್ರಾಂಕರಿ ಬ್ರಾಂಡ್ ನೊರಿಟೆಕ್ ಕಪ್ ಗಳನ್ನು ಬಳಸುತ್ತಾರೆ. ಇದರ ಬಾರ್ಡರ್ ಚಿನ್ನದಿಂದ ಅಲಂಕಾರವಾಗಿದ್ದು, ಈ ಕಪ್ ನ ಬೆಲೆ ಮೂರು ಲಕ್ಷ ರೂ.ಗಳಾಗಿದೆ.
2007 ರಲ್ಲಿ ಪತಿ ಮುಖೇಶ್ ಅಂಬಾನಿ, ಪತ್ನಿಗೆ ಜನ್ಮದಿನದ ಕಾಣಿಕೆಯಾಗಿ ಆಧುನಿಕ ಸೌಲಭ್ಯಗಳು ಉಳ್ಳ, ಮಿನಿ ಅರಮನೆಯಂತಹ 240 ಕೋಟಿ ರೂ. ಗಳ ಬೆಲೆ ಬಾಳುವ ಐಶಾರಾಮೀ ವಿಮಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ನೀತಾ ಅಂಬಾನಿ ವಿಶೇಷ ಕಾರ್ಯಕ್ರಮಗಳಿಗೆ ಧರಿಸುವ ಸೀರೆಯ ಬೆಲೆ 40 ಲಕ್ಷ ರೂ.ಗಳಾಗಿದೆ. ವಿಶ್ವದ ದುಬಾರಿ ಸೀರೆಗಳಲ್ಲಿ ಇದು ಸೇರುತ್ತದೆ ಎನ್ನಲಾಗಿದೆ.