10 ವರ್ಷದ ಹುಡುಗಿ ತಿಂಗಳಿಗೆ ಗಳಿಸ್ತಾಳೆ ಕೋಟಿ ಕೋಟಿ ಹಣ: ಹೇಗೆ ಅಂತ ಗೊತ್ತಾದ್ರೆ ಓ ಮೈ ಗಾಡ್ ಅಂತೀರ!!

Written by Soma Shekar

Published on:

---Join Our Channel---

ಸಾಮಾನ್ಯವಾಗಿ ತಮ್ಮ ಮಕ್ಕಳ ಉನ್ನತ ಸ್ಥಾನ ಮಾನವನ್ನು ಪಡೆಯಬೇಕೆಂದು ಬಯಸುತ್ತಾರೆ ಎಲ್ಲಾ ತಂದೆ ತಾಯಿಯರು. ತಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್ , ಇಂಜಿನಿಯರ್ , ಐಎಎಸ್, ಐಪಿಎಸ್ ಆಗಲಿ ಎಂದು ಬಯಸುತ್ತಾರೆ. ಆದರೆ ಬಹುತೇಕ ತಂದೆ ತಾಯಿ ತಮ್ಮ ಮಕ್ಕಳು ಭವಿಷ್ಯದಲ್ಲಿ ಉದ್ದಿಮೆದಾರರಾಗಲಿ ಎಂದು ಕನಸನ್ನು ಕಾಣುವುದಿಲ್ಲ. ಅಂತಹ ಕನಸನ್ನು ಕಾಣುವವರ ಸಂಖ್ಯೆ ಬೆರಳೆಣಿಕೆಯಷ್ಟು ಎಂದೇ ಹೇಳಬಹುದು. ಮಕ್ಕಳು ಯಾವುದೋ ಒಂದು ಒಳ್ಳೆ ಪದವಿ ಪಡೆದು, ಒಳ್ಳೆ ಉದ್ಯೋಗ ಸಿಕ್ಕರೆ ಸಾಕು ಎನ್ನುವ ಆಲೋಚನೆ ಪೋಷಕರದ್ದು.

ಆದರೆ 42 ವರ್ಷ ವಯಸ್ಸಿನ ರಾಕ್ಸಿ ಜೆಸಾಂಕೋ ಎನ್ನುವ ಮಹಿಳೆ ಮಾತ್ರ ಈ ರೀತಿಯಲ್ಲಿ ಆಲೋಚನೆ ಮಾಡಲಿಲ್ಲ. ತನ್ನ ಮಗಳು ಒಬ್ಬ ಯಶಸ್ವಿ ಉದ್ಯಮಿಯಾಗಬೇಕೆಂದು ಆಲೋಚನೆ ಮಾಡಿದರು. ಅದಕ್ಕೆ ತಕ್ಕಂತೆ ಆಕೆಯ ಮಗಳು ಕೂಡಾ ಅಂತಹುದೇ ಆಲೋಚನೆಗಳೊಂದಿಗೆ ಬೆಳೆದಳು. ಹತ್ತು ವರ್ಷ ವಯಸ್ಸಿಗೇ ಆ ಹುಡುಗಿ ಒಬ್ಬ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು, ಸಿಡ್ನಿಯಲ್ಲಿ ಯಶಸ್ವಿ ಉದ್ಯಮದಾರಳಾಗಿದ್ದು, ಕೋಟಿಗಳ ಮೊತ್ತದಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ.

ಹತ್ತನೇ ವಯಸ್ಸಿಗೆ ಉದ್ಯಮದಾರಳಾಗಿರುವ ಈ ಬಾಲಕಿಯ ಹೆಸರು ಪಿಕ್ಸಿ ಕರ್ಟಿಸ್ ಎಂಬುದಾಗಿದೆ. ಈಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯಶಸ್ವಿ ಉದ್ಯಮ ನಡೆಸುತ್ತಿದ್ದಾಳೆ. ತನ್ನ ಮಗಳನ್ನು ಉದ್ಯಮಿಯಾಗಿ ನೋಡಬೇಕೆಂದು ಬಯಸಿದ್ದ ರಾಕ್ಸಿ ಜೆಸಾಂಕೋ ಮಗಳು ಇನ್ನೂ ಪುಟ್ಟ ಮಗುವಾಗಿರುವಾಗಲೇ ಮಗಳ ಹೆಸರಿನಲ್ಲಿ 2011 ರಲ್ಲಿ ಪಿಕ್ಸೀಸ್ ಬೌಸ್ ಎನ್ನುವ ಉದ್ಯಮವನ್ನು ಆರಂಭಿಸಿದರು. ಅನಂತರ ಫಿಕ್ಸೀಸ್ ಫಿಡ್ಜೆಟ್ಸ್ ಹೆಸರಿನ ಇನ್ನೊಂದು ಉದ್ಯಮವನ್ನು ಸಹಾ ಆಕೆ ಪ್ರಾರಂಭ ಮಾಡಿದರು.

ಈಗ ಈ ಎರಡೂ ಬ್ಯುಸಿನೆಸ್ ಕೂಡಾ ಯಶಸ್ವಿಯಾಗಿ ನಡೆಯುತ್ತಿವೆ. ಮಕ್ಕಳಿಗೆ ಅಗತ್ಯವಿರುವ ಆಟಿಕೆಗಳು, ಸ್ಟೇಷನರಿ ವಸ್ತುಗಳು, ಮಕ್ಕಳ ಆಟದ ಗ್ಯಾಜೆಟ್ ಗಳನ್ನು ಮಾರಾಟ ಮಾಡುವುದು, ಆಟಿಕೆಗಳ ವಿವರ ನೀಡುವುದು, ಅವುಗಳ ಬಳಕೆ ಹೇಗೆ ಮಾಡುವುದು, ಅವುಗಳ ಬೆಲೆ ಏನು?? ಯಾವ ವಯಸ್ಸಿನವರಿಗೆ ಯಾವ ಆಟಿಕೆ ಸೂಕ್ತ ಎನ್ನುವ ಎಲ್ಲಾ ವಿಚಾರಗಳನ್ನು ಸಹಾ ಪಿಕ್ಸೀ ತಮ್ಮ ಬ್ಯುಸಿನೆಸ್ ನ ಒಂದು ಭಾಗ ಮಾಡಿಕೊಂಡಿರುವುದು ವಿಶೇಷ.

ಚಿಕ್ಕ ವಯಸ್ಸಿನಿಂದಲೇ ವ್ಯಾಪಾರದ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡಿರುವ ಪಿಕ್ಸೀ ಎರಡು ಉದ್ಯಮಗಳ ಮೂಲಕ ತಿಂಗಳಿಗೆ ಕೋಟಿ ಗಳ ಮೊತ್ತದಲ್ಲಿ ಹಣವನ್ನು ಗಳಿಸುತ್ತಿದ್ದಾಳೆ. ಪಿಕ್ಸೀ ಇನ್ಸ್ಟಾಗ್ರಾಂ ಖಾತೆಯನ್ನೂ ಹೊಂದಿದ್ದು, ಇದರಲ್ಲಿ 90 ಸಾವಿರ ಹಿಂಬಾಲಕರನ್ನು ಹೊಂದಿದ್ದಾಳೆ. ಇನ್ಸ್ಟಾಗ್ರಾಂ ನಲ್ಲಿ ಸ್ಪಾನ್ಸರ್ ವೀಡಿಯೋಗೆ ನಾಲ್ಕೂ ವರೆ ಲಕ್ಷ ಪಡೆಯುತ್ತಾಳೆ. ಭವಿಷ್ಯದಲ್ಲಿ ಈ ಬಾಲಕಿ ಆಸ್ಟ್ರೇಲಿಯಾದ ಒಬ್ಬ ಯಶಸ್ವಿ ಉದ್ಯಮ ಮಹಿಳೆಯಾಗಿ ಹೊರ ಹೊಮ್ಮಬಹುದು.

Leave a Comment