10 ಲಕ್ಷ ಸಾಲ ಮಾಡಿ ತೀರಿಕೊಂಡ ತಂದೆ: ಸ್ಪರ್ಧಿಯ ನೋವು ಕಂಡು ಡಾನ್ಸ್ ಶೋ ನಲ್ಲೇ 8 ಲಕ್ಷ ನೀಡಿದ ನಿರೂಪಕ

Written by Soma Shekar

Published on:

---Join Our Channel---

ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯೊಬ್ಬರು ವೇದಿಕೆಯ ಮೇಲೆ ತನ್ನ ನೋವನ್ನು ಹಂಚಿಕೊಂಡಾಗ ಅದನ್ನು ಕೇಳಿ ಭಾವುಕರಾದ ಶೋ ನ ನಿರೂಪಕ ಒಂದಲ್ಲಾ ಎರಡಲ್ಲ, ಬರೋಬ್ಬರಿ ಎಂಟು ಲಕ್ಷ ರೂ ಗಳ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ನಟರು, ಸ್ಟಾರ್ ಗಳು ಏನಾದರೂ ಮಾಡಿದರೆ ದೊಡ್ಡ ಸುದ್ದಿ ಮಾಡುವ ಮೀಡಿಯಾಗಳು ಇಂತಹ ವಿಷಯಗಳನ್ನು ಅಷ್ಟಾಗಿ ದೊಡ್ಡ ಸುದ್ದಿಗಳನ್ನಾಗಿ ಮಾಡದೇ ಇರುವುದು ನಿಜಕ್ಕೂ ವಿಪರ್ಯಾಸ ಎನಿಸಿ ಬಿಡುತ್ತದೆ. ಹೌದು ಹಿಂದಿ ಶೋ ಒಂದರಲ್ಲಿ ಇಂತಹ ಮಾನವೀಯ ಘಟನೆ ನಡೆದಿದೆ.

ಡಾನ್ಸ್ ಪ್ಲಸ್ ಹಿಂದಿಯ ಪ್ರಮುಖ ಡಾನ್ಸ್ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದೆ‌. ಡಾನ್ಸ್ ಪ್ಲಸ್ 6 ನ ವೇದಿಕೆಯ ಲ್ಲಿ ಶೋ ನ ನಿರೂಪಕ ರಾಘವ್ ಜುಯಾಲ್ ಮಾಡಿರುವ ಕೆಲಸ ನಿಜಕ್ಕೂ ಗ್ರೇಟ್ ಎನಿಸಿದೆ. ರಾಘವ್ ಶೋ ನಿರೂಪಣೆ ಬಹಳ ನಕ್ಕು ನಗಿಸುತ್ತಾ ನಡೆಸಿ ಕೊಂಡು ಹೋಗುವುದರ ಜೊತೆಗೆ ಸ್ವತಃ ರಾಘವ್ ಕೂಡಾ ಒಬ್ಬ ಜಬರ್ದಸ್ತ್ ಡಾನ್ಸರ್ ಸಹಾ ಆಗಿದ್ದಾರೆ. ಜನರ ಸಂಕಷ್ಟಕ್ಕೆ ಮಿಡಿಯುವ ರಾಘವ್ ಅವರ ಇನ್ನೊಂದು ಮುಖದ ಪರಿಚಯ ಎಲ್ಲರಿಗೂ ಇಲ್ಲ.

ಡಾನ್ಸ್ ಪ್ಲಸ್ ವೇದಿಕೆಯ ಮೇಲೆ ಸ್ಪರ್ಧಿಯೊಬ್ಬರು ತಂದೆ ಹತ್ತು ಲಕ್ಷ ರೂ ಗಳ ಸಾಲವನ್ನು ಮಾಡಿದ್ದರು. ಅದರಲ್ಲಿ ಎರಡು ಲಕ್ಷ ಸಾಲ ತೀರಿಸಿ ಆಗಿತ್ತು. ಆದರೆ ಕೊರೊನಾ ಕಾಲದಲ್ಲಿ ತಂದೆ ಕೊರೊನಾ ದಿಂದ ಕೊನೆಯುಸಿರೆಳೆದರು, ಇನ್ನೂ ಎಂಟು ಲಕ್ಷ ಸಾಲ ಹಾಗೆ ಇದೆ ಎಂದು ಸ್ಪರ್ಧಿಯು ಕಣ್ಣೀರು ಹಾಕಿದ್ದನ್ನು ನೋಡಿ ರಾಘವ್ ಸಹಾ ಭಾವುಕರಾಗಿದ್ದಾರೆ. ಅವರಿಗೆ ಆ ಸ್ಪರ್ಧಿಯ ನೋವನ್ನು ನೋಡಲು ಆಗಿಲ್ಲ.

ರಾಘವ್ ಉಳಿದ ಎಂಟು ಲಕ್ಷ ರೂ.ಗಳ ಸಾಲವನ್ನು ತಾನೇ ತೀರಿಸುವುದಾಗಿ, ತಾವೇ ಆ ಮೊತ್ತವನ್ನು ನೀಡಿದ್ದಾರೆ. ರಾಘವ್ ಮಾಡಿದ ಈ ಸಹಾಯ ನೋಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ. ರಾಘವ್ ಕೊರೊನಾ ಕಾಲದಲ್ಲಿ ಸಹಾ ಸಾಕಷ್ಟು ಮಾನವೀಯ ಕಾರ್ಯಗಳನ್ನು ಮಾಡಿದ್ದರು. ರಾಘವ್ ಮಾಡಿದ ಈ ಕೆಲಸಗಳ ವೀಡಿಯೋ ಕ್ಲಿಪ್ ಡಾನ್ಸ್ ದೀವಾನೆ ಶೋ ನಲ್ಲಿ ತೋರಿಸಲಾಗಿತ್ತು.

ನಟಿ ಮಾಧುರಿ ದೀಕ್ಷಿತ್ ಸಹಾ ರಾಘವ್ ಅವರ ಕಾರ್ಯಗಳನ್ನು ಮೆಚ್ಚಿ ಮಾತನಾಡಿದ್ದರು. ರಾಘವ್ ಡಾನ್ಸ್ ದೀವಾನೆ ಮೂರನೇ ಸೀಸನ್ ಆರಂಭದಲ್ಲಿ ಶೋ ನ ನಿರೂಪಕನಾಗಿ ಕಾಣಿಸಿಕೊಂಡಿದ್ದರು. ಅನಂತರ ಡಾನ್ಸ್ ಪ್ಲಸ್ ಶುರುವಾದ ಹಿನ್ನೆಲೆಯಲ್ಲಿ ಅವರು ಡಾನ್ಸ್ ದೀವಾನೆ ಜರ್ನಿ ಯನ್ನು ನಿಲ್ಲಿಸಿದ್ದಾರೆ. ಈಗ ಅವರ ಬದಲಾಗಿ ಕಾಮೆಡಿ ಕ್ವೀನ್ ಭಾರತಿ ಮತ್ತು ಅವರ ಪತಿ ಹರ್ಷ್ ಶೋ ನಿರೂಪಣೆ ಮಾಡುತ್ತಿದ್ದಾರೆ.

Leave a Comment