10 ಲಕ್ಷ ವರದಕ್ಷಿಣೆ ಕೇಳಿದ ವರ: ಮದುವೆ ಮಂಟಪದಲ್ಲೇ ವಧುವಿನ ಕಡೆಯವರು ಕೊಟ್ರು ಮರೆಯಲಾಗದ ಉಡುಗೊರೆ

Written by Soma Shekar

Published on:

---Join Our Channel---

ವರದಕ್ಷಿಣೆ ಎನ್ನುವುದು ನಮ್ಮ‌ ದೇಶದಲ್ಲೊಂದು ಸಾಮಾಜಿಕ ಪಿಡುಗಾಗಿದೆ. ದೇಶದಲ್ಲಿ ಇದನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಕಾನೂನುಗಳ ಹೊರತಾಗಿಯೂ ಇನ್ನೂ ಕೂಡಾ ನಮ್ಮ ದೇಶದಲ್ಲಿ ವರದಕ್ಷಿಣೆ ಪದ್ಧತಿ ಅಸ್ತಿತ್ವದಲ್ಲಿದೆ ಎನ್ನುವುದು ವಾಸ್ತವ ವಿಷಯವಾಗಿದೆ. ಕೆಲವೊಂದು ಸಮುದಾಯಗಳಲ್ಲಿ ವರದಕ್ಷಿಣೆ ಎನ್ನುವುದು ಒಂದು ಸಂಪ್ರದಾಯ ಎನ್ನುವಂತೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದ್ದರಿಂದಲೇ ವರನ ಕಡೆಯವರು ವಧುವಿನ ಕಡೆಯವರ ಮೇಲೆ ಶೋಷಣೆ ಮಾಡುವುದು ಇನ್ನೂ ಕೂಡಾ ನಿಂತಿಲ್ಲ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಮದುವೆಯೊಂದು ನಡೆಯುತ್ತಿತ್ತು, ಈ ವೇಳೆಯಲ್ಲಿ ವರನು ಹಾಗೂ ಆತಮ ಕಡೆಯವರು ವಧುವಿನ ಕಡೆಯವರು ಮುಂದೆ ಹೆಚ್ಚಿನ ವರದಕ್ಷಿಣೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಆತ ಹೀಗೆ ಹೆಚ್ಚಿನ ವರದಕ್ಷಿಣೆಯ ಬೇಡಿಕೆಯನ್ನು ಇಟ್ಟ ನಂತರ ಅಲ್ಲಿ ನಡೆದ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಅವನಿಗೆ ತಕ್ಕ ಪಾಠವನ್ನು ಕಲಿಸಿದ್ದೀರಿ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.

ಸಾಹಿಬಾಬಾದ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ರಾತ್ರಿ ಮದುವೆಯ ಆರತಕ್ಷತೆ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆದಿತ್ತು. ಈ ವೇಳೆ ವರನ ಕಡೆಯವರು ಹೆಚ್ಚುವರಿಯಾಗಿ ಹತ್ತು ಲಕ್ಷ ರೂಪಾಯಿಗಳ ವರದಕ್ಷಿಣೆ ಬೇಕು ಎನ್ನುವ ಬೇಡಿಕೆಯನ್ನು ವಧುವಿನ ಕಡೆಯವರ ಮುಂದೆ ಇಟ್ಟಿದ್ದಾರೆ. ಈ ಬೇಡಿಕೆ ವಧುವಿನ ಕಡೆಯವರಿಗೆ ಸಿಟ್ಟನ್ನು ತರಿಸಿದೆ, ಅವರು ವರನ ಮೇಲೆ ಕೋಪದಿಂದ ಮಾತನಾಡಲು ಪ್ರಾರಂಭಿಸಿದ್ದು, ಅನಂತರ ಅವನನ್ನು ಮದುವೆ ಮಂಟಪದಿಂದ ಎಳೆದೊಯ್ದು ಥಳಿಸಲು ಪ್ರಾರಂಭಿಸಿದ್ದಾರೆ.

ಈ ಘಟನೆ ನಡೆಯುವಾಗ ಹಾಲ್ ನಲ್ಲಿ ಉಪಸ್ಥಿತರಿದ್ದ ಜನರು ಅದನ್ನು ಫೋಟೋಗಳನ್ನು ತೆಗೆದುಕೊಂಡು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ. ವರನ ಕಡೆಯವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಧುವಿನ ಕಡೆಯವರು ಈಗಾಗಲೇ ವರನಿಗೆ ಮೂರು ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಒಂದು ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ನೀಡಿದ್ದರು ಎನ್ನಲಾಗಿದೆ. ಆದರೆ ವರನ ಕಡೆಯವರು ಮತ್ತೆ ಮದುವೆ ದಿನ ಹೆಚ್ಚಿನ ವರದಕ್ಷಿಣೆ ಬೇಡಿಕೆಯನ್ನು ಇಟ್ಟಿದ್ದಾರೆ.

ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ವಧುವಿನ ಪೋಷಕರಿಗೆ ವರನ ತಂದೆ ಹತ್ತು ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದು, ಅಷ್ಟು ಹಣವನ್ನು ನೀಡದೆ ಹೋದಲ್ಲಿ ಮದುವೆ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನ ಹಾಗೂ ಕೋಪಗೊಂಡ ವಧುವಿನ ಕಡೆಯವರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿ ವರನನ್ನು ಥಳಿಸಿದ್ದಾರೆ. ವರನನ್ನು ಆಗ್ರಾ ನಿವಾಸಿಯಾದ ಮುಜಮ್ಮಿಲ್ ಎಂದು ಗುರುತಿಸಲಾಗಿದ್ದು, ಆತನಿಗೆ ಈಗಾಗಲೇ ಎರಡು ಮೂರು ಬಾರಿ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ.

Leave a Comment